This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಕ್ಷೇತ್ರದ ಎಲ್ಲ ಭಾಗಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ : ಡಿಕೆ ಸುರೇಶ್

ಕ್ಷೇತ್ರದ ಎಲ್ಲ ಭಾಗಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ : ಡಿಕೆ ಸುರೇಶ್

ರಾಮನಗರ: ಕ್ಷೇತ್ರದ ಎಲ್ಲ ಭಾಗಗಳಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಮತ್ತು ಕಳೆದ ಸಲಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹೇಳಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಮತ ಚಲಾಯಿಸುವ ಮಾದ್ಯಮ ಪ್ರತಿನಿಶಧಿಯೊಂದಿಗೆ ಮಾತಾಡಿದಅವರು,ಎಷ್ಟು ಮತಗಳ ಅಂತರ ಗೆಲುವು ಸಿಗಲಿದೆ ಅಂತ ಈಗಲೇ ಹೇಳಲಾಗದು, ಎಲ್ಲ ಭಾಗಗಳಲ್ಲಿ ಎಷ್ಟು ಪ್ರಮಾಣದ ಮತದಾನ ಆಗಿದೆ ಮತ್ತು ಇನ್ನೂ ಕೆಲ ಅಂಶಗಳನ್ನು ಅಳೆದು ತೂಗಿದ ಬಳಿಕ ಮತಗಳ ಅಂತರದ ಲೆಕ್ಕಾಚಾರ ಹಾಕಬಹುದು ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಜನರು ಮರೆಯಬಾರದು ಎಂಬ ಉದ್ದೇಶದಿಂದ ಕಾರ್ಡ್ ಗಳ ರೂಪದಲ್ಲಿ ನೀಡಿದ್ದೇವೆ ಮತ್ತು ಕ್ಯೂಆರ್ ಕೋಡ್ ಬಗ್ಗೆ ಹೇಳೋದಾದರೆ ಅದನ್ನು ಬಿಜೆಪಿ ಶಾಸಕರೊಬ್ಬರಿಂದ ಕಲಿತದ್ದು ಎಂದು ಸುರೇಶ್ ಹೇಳಿದರು.

ಕಳೆದ ಹತ್ತ ವರ್ಷಗಳಿಂದ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿರುವ ನನಗೆ ಹಕೀಕತ್ತು ಗೊತ್ತು, ಜನರ ನಾಡ ಮಿಡಿತ ಗೊತ್ತು ಮತ್ತು ಅವರು ಏನು ಬಯಸುತ್ತಾರೆ ಅಂತ ಗೊತ್ತು ಎಂದು ಡಿಕೆ ಸುರೇಶ್ ಹೇಳಿದರು.

ಅಷ್ಟರಲ್ಲಿ ಅವರನ್ನು ಸುತ್ತುವರಿದ ಅಂಗ್ಲ ಮಾಧ್ಯಮಗಳ ಪ್ರತಿನಿಧಿಗಳು, ನೀವೇ ಗೆಲ್ಲೋದು ಅಂತ ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರಿ ಅಂದಾಗ ಸಿಡಿಮಿಡಿಗೊಂಡ ಸುರೇಶ್, ಹೇಗೆ ಗೆಲ್ತೀರಿ ಅಂದರೆ ಏನರ್ಥ? ನೀವು ಕ್ಷೇತ್ರದಲ್ಲಿ ಸುತ್ತಾಡದೆ, ವಸ್ತುಸ್ಥಿತಿಯನ್ನು ಅರಿಯದೆ ಈ ಪ್ರಶ್ನೆಯನ್ನು ಕೇಳುತ್ತಿದ್ದೀರಿ ಎಂದರು.

";