ಬೆಂಗಳೂರು: ಹಾಸನ ಪೆನ್‌ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಎಸ್‌ಐಟಿ ಕೂಡಾ ಸಜ್ಜಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ನಾವು ಬೇರೆ ದೇಶಕ್ಕೆ ಹೋಗಿ ಆರೋಪಿಗಳನ್ನು ಅರೆಸ್ಟ್ ಮಾಡುವ ಹಾಗಿಲ್ಲ. ಆ ರೀತಿ ಮಾಡಲು ಬರುವುದಿಲ್ಲ. ಕೇಂದ್ರ ಸರ್ಕಾರ ಕೂಡ ಯಾರನ್ನಾದರೂ ಕಳುಹಿಸಿ ಅರೆಸ್ಟ್ ಮಾಡಲು ಆಗಲ್ಲ. ಇಂಟರ್ ಪೋಲ್ ಕೂಡ ಇರೋದೆ ಅದಕ್ಕೆ. ಹಾಗಿದ್ದರೂ ಬಂಧನಕ್ಕೆ ಕೆಲವೊಂದು ನಿಯಮಾವಳಿಗಳು ಇರುತ್ತವೆ ಎಂದರು.
ಕೇಂದ್ರ ಸರ್ಕಾರ ಕೂಡ ಇದೆ ಮಾತು ಹೇಳಿದೆ. ನಿಧಾನವಾಗಿ ಆಗಿದೆ ಈಗ ರದ್ದು ಮಾಡ್ತೇವೆ ಅಂದಿದ್ದಾರೆ. ಆದರೆ ಈ ಪ್ರಕರಣ ಚುನಾವಣೆ ಮೇಲೆ ಎಫೆಕ್ಟ್ ಆಗುತ್ತೆ ಎಂಬುವುದು ಗೊತ್ತಿಲ್ಲ. ಬದಲಾಗಿ ಎಲ್ಲವೂ ಕಾನೂನು ಪ್ರಕಾರ ನಡೆಯಲಿದೆ ಎಂದು ವಿವರಿಸಿದರು.
ಪ್ರಜ್ವಲ್ ರೇವಣ್ಣ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧನವಾಗುತ್ತೆ ಎಂಬ ವಿಚಾರವಾಗಿ, ಕಾನೂನು ಪ್ರಕಾರ ವಾರೆಂಟ್ ಜಾರಿಯಾಗಿದೆ. ಹಾಗಾಗಿ ಅಲ್ಲಿಯೇ ಬಂಧನವಾಗಬೇಕು. ಈ ನಡುವೆ ಅವರ ಪಾಸ್‌ಪೋರ್ಟ್ ರದ್ದತಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಕಾನೂನು ಪ್ರಕಾರ ಪರಿಶೀಲನೆ ಮಾಡಿ ರದ್ದು ಮಾಡುತ್ತಾರೆ ಎಂದರು.
ಪ್ರಜ್ವಲ್ ನಾಳೆ ಬರ್ತಾರೆ ಅನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಎಸ್ ಐಟಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಅವರು ಬಂದಲ್ಲಿ ಕಾನೂನು ಪ್ರಕ್ರಿಯೆಗಳು ಆರಂಭವಾಗುತ್ತದೆ ಎಂದು ಹೇಳಿದರು.