ಸೋಮವಾರದಿಂದ ಮತ್ತಷ್ಟು ಟಫ್
ನಿಮ್ಮ ಸುದ್ದಿ ಬಾಗಲಕೋಟೆ
ನಿಯಂತ್ರಣಕ್ಕೆ ದೊರೆಯುದೆ ವ್ಯಾಪಕವಾಗಿ ಹರಡುತ್ತಿರುವ ಕೋರೊನಾ ಸೋಂಕು ತಡೆಯಲು ಶುಕ್ರವಾರ ರಾತ್ರಿ ೯ ರಿಂದ ಆರಂಭವಾದ ವಾರಾಂತ್ಯ ಕರ್ಫ್ಯೂ ಸೋಮವಾರ ಬೆಳಗ್ಗೆ ೬ರ ವರೆಗೆ ಜಾರಿಯಲ್ಲಿರಲಿದೆ.
ಶನಿವಾರ ಹಾಗೂ ಭಾನುವಾರ ಬೆಳಗ್ಗೆ ೬ರಿಂದ ೧೦ರ ವರೆಗೆ ೪ ಗಂಟೆ ಮಾತ್ರ ಸುರಕ್ಷತಾ ನಿಯಮ ಪಾಲಿಸಿ ಅಗತ್ಯ ಸೇವೆಗಳ ಅಂಗಡಿಗಳಿಗೆ ಮಾತ್ರ ಅವಕಾಶವಿತ್ತು. ಜತೆಗೆ ಹೊಟೇಲ್‌ಗಲ್ಲಿ ಪಾರ್ಸ್ಲ್‌ಗೆ ಮಾತ್ರ ಅವಕಾಶವಿದೆ.
ಹೀಗಿದ್ದರೂ ಜಿಲ್ಲೆಯ ಬಹುತೇಕ ಭಾಗದಲ್ಲಿ ಕೆಲ ಕಿರಾಣಿ, ಕಾಯಿಪಲ್ಲೆ ಮಾರಾಟ ಹೊರತು ಪಡಿಸಿದರೆ ಉಳಿದೆಲ್ಲವೂ ಬಹುತೇಕ ಬಂದ್ ಆಗಿದ್ದವು. ಜಿಲ್ಲೆಯಲ್ಲಿ ಜಾನುವಾರು ಸಂತೆ ಖ್ಯಾತಿ ಪಡೆದ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಮುಂಜಾಗ್ರತೆಯಾಗಿ ಪೊಲೀಸ್ ಠಾಣೆ ಹಾಗೂ ಸ್ಥಳೀಯ ಆಡಳಿತ ಸೂಕ್ರ ಕ್ರಮ ಕೈಗೊಂಡಿದ್ದರಿಂದ ಸಂತೆಗೆ ಯಾರು ಬರಲಿಲ್ಲ.
ಅದರೊಂದಿಗೆ ಶನಿವಾರ ಬೆಳಗ್ಗೆಯೇ ಎಸ್‌ಐ ಎಂ.ಜಿ.ಕುಲಕರ್ಣಿ ಹಾಗೂ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿ ಜಿ.ಪಿ.ಚೌಕಿಮಠ ನೇತೃತ್ವದಲ್ಲಿ ಸಿಬ್ಬಂದಿಗಳೆಲ್ಲ ಆಯಕಟ್ಟಿನ ಸ್ಥಳಗಳಲ್ಲಿ ಪಹರೆ ಆರಂಭಿಸಿದ್ದರು.
ನಾಡಕಚೇರಿ ಹಿಂಬಾಗದಲ್ಲಿನ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಸಂತೆಗೆ ವ್ಯವಸ್ಥೆ ಮಾಡಲಾಗಿತ್ತು. ಕೆಲ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದ್ದರೂ ವಾರಾಂತ್ಯದ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ ಜನ ಹಾಗೂ ವ್ಯಾಪಾರಸ್ಥರು ಅಂಗಡಿ ತೆಗೆಯುವ ಗೋಜಿಗೆ ಹೋಗಲಿಲ್ಲ.
ಸೋಮವಾರ ಮತ್ತಷ್ಟು ಬಿಗಿ ಕ್ರಮದ ಸಾಧ್ಯತೆ
ವಾರಾಂತ್ಯ ಹೊರತು ಪಡಿಸಿ ಉಳಿದೆಲ್ಲ ದಿನದಲ್ಲಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಪಟ್ಟಣದಲ್ಲಿ ಕದ್ದು ಮುಚ್ಚಿ ವ್ಯಾಪಾರ ನಡೆಯುತ್ತಿದ್ದು ಇದನ್ನು ಗಮನಿಸಿದ ಪೊಲೀಸ್ ಹಾಗೂ ಪಪಂ ಆಡಳಿತ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಜನರಿಗೆ ಈಗಾಗಲೆ ಯಾವ ಅಂಗಡಿ ತೆರೆದಿರಬೇಕು, ಯಾವುದು ತೆರೆದಿರಬಾರದು ಎಂಬುದರ ಕುರಿತು ಜಾಗೃತಿ ಮೂಡಿಸಲಾಗಿದೆ.
ಆದರೂ ಪಟ್ಟಣದಲ್ಲಿ ಇದಕ್ಕೆ ಕ್ಯಾರೆ ಎನ್ನದ ಕೆಲವರು ತಮ್ಮ ಅಂಗಡಿಗಳನ್ನು ತೆರೆದಿರುತ್ತಾರೆ. ಈಗಾಗಲೆ ಗಮನಕ್ಕೆ ಬಂದ ಅಂಗಡಿ ಮಾಲಿಕರಿಗೆ ಸೂಕ್ತ ಎಚ್ಚರಿಕೆಯನ್ನೂ ನೀಡಲಾಗಿದೆ. ಹೀಗಿದ್ದರೂ ಕೆಲ ವ್ಯಾಪಾರಿಗಳು ತಮ್ಮ ಮೊಂಡುತನಕ್ಕೆ ಮುಂದಾಗಿದ್ದAತೆ ತೋರುತ್ತಿದ್ದು ಒಂದೆರಡು ದಿನ ತಿಳಿದುಕೊಳ್ಳುತ್ತಾರೆ ಎಂದು ಅಂದುಕೊಂಡು ಸುಮ್ಮನಾದ ಆಡಳಿತ ಸೋಮವಾರದಿಂದ ಬಿಗಿ ಕ್ರಮ, ದಂಡ ಸಾಧ್ಯತೆ ಸೇರಿದಂತೆ ಹಲವು ಕ್ರಮಕ್ಕೆ ಮುಂದಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಜತೆಗೆ ಕರ್ಫ್ಯೂ ಇದ್ದರೂ ಅಲ್ಲಲ್ಲಿ ಜನ ಗುಂಪು ಗುಂಪಾಗಿ ಕುಳಿತುಕೊಳ್ಳುವುದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಓಡಾಡುತ್ತಿರುವುದು ಕಂಡು ಬರುತ್ತಿದೆ.