ಬಾಗಲಕೋಟೆ : ಮಹಾರಾಷ್ಟ್ರದ ಆಧ್ಯಾತ್ಮಿಕ ಕ್ಷೇತ್ರ ಪಂಢರಪುರಕ್ಕೆ ಸಂಚರಿಸುವ ಮೈಸೂರು-ಸೊಲ್ಲಾಪುರ ವಿಸ್ತರಿತ ರೈಲು ಸೆ.5 ರಿಂದ ಸಂಚಾರ ಆರಂಭಿಸಲಿದೆ.
ಸಾರ್ವಜನಿಕರು, ರೈಲ್ವೆ ಹೋರಾಟ ಸಮಿತಿ ಒತ್ತಾಯದಂತೆ ರೈಲ್ವೆ ಇಲಾಖೆ ಗೋಲ್‌ಗುಂಬಜ್ ರೈಲನ್ನು ಪಂಢರಪುರವರೆಗೆ ವಿಸ್ತರಿಸಿದೆ.
ಹೊಸದಾಗಿ ಆರಂಭಗೊಳ್ಳುತ್ತಿರುವ ರೈಲು ಸಂಚಾರಕ್ಕೆ ಶುಭ ಕೋರಲು ರಾಜ್ಯ ಬ್ರಾಡ್‌ಗೇಜ್ ಹೋರಾಟ ಸಮಿತಿಯಿಂದ ಮಂಗಳವಾರ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಸೆ.5 ರಂದು ಬೆಳಗ್ಗೆ 6 ಗಂಟೆಗೆ ಬಾಗಲಕೋಟೆ ನಿಲ್ದಾಣಕ್ಕೆ ರೈಲು ಆಗಮಿಸಲಿದೆ. ಈ ಸಂದರ್ಭದಲ್ಲಿ ಪಂಢರಪುರದ ಯಶವಂತ ಬೋಧಲೆ ಮಹಾರಾಜರು ಪೂಜೆ ಸಲ್ಲಿಸಲಿದ್ದಾರೆ. ವಿಠ್ಠಲ ರುಕ್ಮಿಣಿ ಭಜನಾ ಮಂಡಳಿ ಸದಸ್ಯರು ಭಜನೆ ನಡೆಸಲಿದ್ದಾರೆ. ನಗರದ ವರ್ತಕರು, ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ತಿಳಿಸಿದ್ದಾರೆ.