ಬೆಂಗಳೂರು: ಈ ಬಾರಿಯ ಲೋಕಸಭಾ ಚುವಾವಣೆಯಲ್ಲಿ ಗೆದ್ದಿರುವುದು ಒಳ್ಳೆಯತನ, ಮಾನವೀಯತೆ, ಹೃದಯವಂತಿಕೆ ಮತ್ತು ಜನಪರ ಕಾಳಜಿ” ಇದು ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಟಾಂಗ್. ನೀಡಿದರು.
ಕಾಂಗ್ರೆಸ್ ಪಕ್ಷದ ಸೋಲಿಗೆ ಡಿಕೆ ಶಿವಕುಮಾರ್ ಅವರು ನೀಡಿರುವ ಕಾರಣ ವಿರೋಧಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಚುನಾವಣೆಯಲ್ಲಿ ಗೆದ್ದಿರುವುದು ಒಳ್ಳೆತನ, ಮಾನವೀಯತೆ, ಹೃದಯವಂತಿಕೆ ಹಾಗೂ ಬಡವರ ಪರ ಕಾಳಜಿಯೇ ಹೊರತು ಭಾವನೆ, ಹಣ, ಬೆದರಿಕೆಯಲ್ಲ. ಇದು ಇವರಿಗೂ ಗೊತ್ತಿದೆ.” ಎಂದು ಡಿಕೆ ಸಹೋದರರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಹೃದಯವಂತ ಪದ್ಮಶ್ರೀ ಪುರಸ್ಕೃತ ಡಾ.ಸಿ.ಎನ್.ಮಂಜುನಾಥ್ ಅವರ ಗೆಲುವು ಸ್ವಚ್ಛ ರಾಜಕಾರಣದ, ಪ್ರಜಾಪ್ರಭುತ್ವದ ಹಾಗೂ ಬಹು ಮುಖ್ಯವಾಗಿ ಒಬ್ಬ ಸಾಮಾನ್ಯ ನಿಷ್ಠಾವಂತ ಮತದಾರನ ಗೆಲುವು. ಗ್ರಾಮಾಂತರ ಬೆಂಗಳೂರು ನಮ್ಮ ಪಿತೃಗಳ ಆಸ್ತಿ ಎಂದು ಬೀಗುತ್ತಿದ್ದ ಕೆಲ ಪಟ್ಟಭದ್ರರಿಗೆ ಇದು ನುಂಗಲಾರದ ತುತ್ತಾಗಿದೆ.
ಇವರ ಸುಭದ್ರ ಕೋಟೆಗೆ ಜನರೇ ಲಗ್ಗೆ ಇಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರದ ಪ್ರಜ್ಞಾವಂತ, ಬುದ್ದಿವಂತ ಹಾಗೂ ತಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡಿದ ಸಮಸ್ತ ಮತದಾರ ಬಾಂಧವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಅವರ ಗೆಲುವಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.