ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಯಾವಾಗ ಒಕ್ಕಲಿಗ ನಾಯಕರಾದರು? ಕನಕಪುರ ಬಿಟ್ಟರೆ ಬೇರೆ ಕಡೆ ಡಿಕೆಶಿ ನಾಯಕರಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಏನು ಮಾಡಿದ್ದಾರೆ? ಜಾತಿ ಗಣತಿಯಲ್ಲಿ ಒಕ್ಕಲಿಗ ಸಮುದಾಯವನ್ನು ಆರನೇ ಸ್ಥಾನಕ್ಕೆ ಇಳಿಸಲಾಗಿದೆ. ಜಾತಿ ಗಣತಿ ಬಗ್ಗೆಒಕ್ಕಲಿಗ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ. ನಾವು ಸೀನಿಯರ್, ನೀವು ಜೂನಿಯರ್. ಕನಕಪುರ ಬಿಟ್ಟರೆ ಬೇರೆ ಕಡೆ ಡಿಕೆಶಿ ನಾಯಕರಲ್ಲ. ಒಕ್ಕಲಿಗರು ನನ್ನ ಸಹೋದರರು ಎಂದು ಡಿಕೆಶಿ ಹೇಳಿಲ್ಲ.
ಕುಕ್ಕರ್ ಸ್ಫೋಟ ಮಾಡಿದವರನ್ನು ಬ್ರದರ್ಸ್ ಎಂದಿದ್ದರು. ಯಾರಾದರು ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತೆನೆ ಹೊತ್ತ ಮಹಿಳೆ ಜೆಡಿಎಸ್ ಸಿಂಬಲ್, ಚುನಾವಣಾ ಸಂದರ್ಭದಲ್ಲಿ ಸಮಸ್ಯೆ ಆಗಬಾರದು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಯಾರೋ ಸಣ್ಣಪುಟ್ಟವರು ಗೋಬ್ಯಾಕ್ ಮಾಡುವುದರಿಂದ ಏನು ಪ್ರಯೋಜನ ಆಗಲ್ಲ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಗ್ಯಾರಂಟಿ ಟೀಕೆಯ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ಅವರ ಮಾತಿನಲ್ಲಿ ಆ ರೀತಿ ಭಾವನೆ ಇರಲಿಲ್ಲ. ಅವರ ಹೇಳಿಕೆ ವಿವಾದವಾಗುತ್ತಿರುವುದು ತಪ್ಪು ತಿಳುವಳಿಕೆಯಿಂದಾಗಿದೆ.
ಡಿಕೆಶಿ ಏನು ಮಾಡಿದರು? ಕ್ಯಾಬಿನೆಟ್ ನಲ್ಲಿ ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದು ಈಗ ಒಕ್ಕಲಿಗ ನಾಯಕ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.