ಉಡುಪಿ: ನನಗೆ ಟಿಕೆಟ್ ಕೊಟ್ರೆ ಸಿಎಂ ಕುರ್ಚಿ ಅಲುಗಾಡುತ್ತೆಂಬ BJP ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಆತಂಕವಿದೆ. ನನ್ನ ವಿರುದ್ಧ ಸಂಸದ ಪ್ರತಾಪ್ ಸಿಂಹ ಯಾವಾಗ ಸ್ಪರ್ಧೆ ಮಾಡಿದ್ದಾರೆ? ಬಿಜೆಪಿ ಈ ತೀರ್ಮಾನವನ್ನು ಏಕೆ ತೆಗೆದುಕೊಂಡಿದೆ ನನಗೆ ಗೊತ್ತಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ‘ಕೈ’ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸುಕುಮಾರ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ ಎಲ್ಲಾ ಈ ಹಿಂದೆ ಕಾಂಗ್ರೆಸ್ ನಲ್ಲೇ ಇದ್ದವರು. ಈಗ ಪಕ್ಷಕ್ಕೆ ಬಂದಿದ್ದಾರೆ, ಪಕ್ಷಕ್ಕೆ ಬಲ ಬಂದಿದೆ. ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಹೆಸರು ಹೈ ಕಮಾಂಡ್ ನಿರ್ಧಾರ ಮಾಡುತ್ತಾರೆ ಎಂದರು.
ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವ ಆತಂಕ ಇದೆ. ಪ್ರತಾಪ್ ಸಿಂಹ ನನ್ನ ವಿರುದ್ಧ ಯಾವಾಗ ಸ್ಪರ್ಧೆ ಮಾಡಿದ್ದಾರೆ? ನನ್ನ ವಿರುದ್ಧ ಪ್ರತಾಪ್ ಯಾವಾಗ ಫೈಟ್ ಮಾಡಿದ್ದಾರೆ? ಬಿಜೆಪಿ ಈ ತೀರ್ಮಾನ ಯಾಕೆ ತೆಗೆದುಕೊಂಡಿದೆ ಗೊತ್ತಿಲ್ಲ. ಸಿಎಎ ಕಾನೂನನ್ನು ಕೇಂದ್ರ ಸರ್ಕಾರ ಚುನಾವಣೆ ಹತ್ತಿರ ಬಂದಾಗ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಇಷ್ಟು ದಿನ ಎಲ್ಲಿ ಹೋಗಿತ್ತು? ಬಿಜೆಪಿಗೆ ಸೋಲುತ್ತೇವೆ ಎಂಬ ಭಯ ಇದೆ. ರಾಜ್ಯದಲ್ಲಿ ಜಾರಿ ವಿಚಾರವಾಗಿ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸ್ತೇವೆ ಎಂದು ತಿಳಿಸಿದರು.