ನಿಮ್ಮ ಸುದ್ದಿ ಬಾಗಲಕೋಟೆ
ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ
ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಡಿ.12 ರಿಂದ 14ರ ವರೆಗೆ 2022 -23ನೆಯ ಶೈಕ್ಷಣಿಕ ಸಾಲಿನ 17ನೇ ಶಕ್ತಿ ಸಂಭ್ರಮಅಂತರ್ ಮಹಿಳಾ ಕಾಲೇಜುಗಳ ಯುವಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ
ಚರಂತಿಮಠ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.12ರಂದು ಬೆಳಗ್ಗೆ 10ಕ್ಕೆ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಯುವಜನೋತ್ಸವವನ್ನು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಉದ್ಘಾಟಿಸಲಿದ್ದು, ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮ ಅವರು ಅಧ್ಯಕ್ಷತೆ ವಹಿಸಲಿದ್ದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಮನುಬಳಿಗಾರ, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶ್ರೀನಿವಾಸ ಬಳ್ಳಿ ಅತಿಥಿಗಳಾಗಿ ದಾವಣಗೆರೆ ರಂಗಾಯಣದ ರಂಗಭೂಮಿ ಕಲಾವಿದ ಮತ್ತು ನಿರ್ದೆಶಕ ಯಶವಂತ ಸರದೇಶಪಾಂಡೆ ಅತಿಥಿಗಳಾಗಿ
ಆಗಮಿಸುವರು.
ಡಿ.14 ರಂದು ಬುಧವಾರ ಸಂಜೆ 5ಕ್ಕೆ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ನಡೆಯುವ ಯುವಜನೋತ್ಸವ ಸಮಾರೋಪ
ಸಮಾರಂಭ ಜರುಗಲಿದೆ. ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಬಿ.ಎಸ್.ನಾವಿ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ.ಎಸ್.ಬಿ.ಕಾಮಶೆಟ್ಟಿ, ವಿದ್ಯಾರ್ಥಿನಿ ಕ್ಷೇಮಪಾಲನಾ ನಿರ್ದೇಶಕಿ ಪ್ರೊ.ವಿ.ಬಿ.ಕೋರಿಶೆಟ್ಟಿ, ಕಾಲೇಜಿನ ಪ್ರಾಚಾರ್ಯ ಎಸ್.ಜೆ.ಒಡೆಯರ ಉಪಸ್ಥಿತರಿರುವರು ಎಂದು ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಧಾರವಾಡ, ಬೆಳಗಾವಿ.ವಿಜಯಪುರ, ಬಾಗಲಕೋಟೆ, ಕಲಬುರ್ಗಿ,
ಬಳ್ಳಾರಿ, ಹಾವೇರಿ, ಕೊಪ್ಪಳ ಕಾರವಾರ, ರಾಯಚೂರು ಸೇರಿದಂತೆ ಒಟ್ಟು 13 ಜಿಲ್ಲೆಗಳ, 30 ಕಾಲೇಜುಗಳಿಂದ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಗಮಿಸಲಿದ್ದು,
ಕಾರ್ಯಕ್ರಮದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವರು. ಸ್ಪರ್ಧೆಗಾಗಿ
ಒಟ್ಟು 4 ವೇದಿಕೆಗಳನ್ನು ನಿರ್ಮಿಸಲಾಗಿದೆ. ಕಾಲೇಜಿನ ಮು೦ಭಾಗದ ಹೊರಾಂಗಣದಲ್ಲಿ ನಿರ್ಮಿಸಲಾದ 1ನೇ ವೇದಿಕೆಯಲ್ಲಿ ಕಿರುನಾಟಕ, ಏಕಾಭಿನಯ, ಮೂಕಾಭಿನಯ, ಶಾಸ್ತ್ರೀಯ ಹಾಗೂ ಜನಪದ ನೃತ್ಯ, ಜನಪದ ವಾದ್ಯ ಸ್ಪರ್ಧೆ ನಡೆಯುವವು ಎ೦ದರು.
ಬಿವಿವಿ ಸಂಘದ ನೂತನ ಸಭಾಭವನದಲ್ಲಿ ನಿರ್ಮಿಸಿದ 2ನೇ ವೇದಿಕೆಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ವೈಯಕ್ತಿಕ ಹಾಗೂ ಸಮೂಹ ಸಂಗೀತ, ಚರ್ಮವಾದ್ಯ ತಂತಿವಾದ್ಯ, ಭಾವಗೀತೆ ಸ್ಪರ್ಧೆಗಳು ನಡೆಯುವವು. ಬಿವಿವಿಎಸ್ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ
ಕಾಲೇಜಿನ ಮೊದಲನೆಯ ಮಹಡಿ ಸೆಮಿನಾರ್ ಹಾಲ್ 3ನೇ ವೇದಿಕೆಯಲ್ಲಿ ರಸಪ್ರಶ್ನೆ, ಚರ್ಚಾಸ್ಪರ್ಧೆ, ಭಾಷಣ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಕಾಲೇಜಿನ ಎರಡನೆಯ ಮಹಡಿ 27ನೇ ಕೊಠಡಿಯಲ್ಲಿ ನಿರ್ಮಿಸಿದ 4ನೇ ವೇದಿಕೆಯಲ್ಲಿ ಸ್ಥಳದಲ್ಲಿ ಚಿತ್ರ ಬಿಡಿಸು ವುದು, ಮೆಹಂದಿ, ಚಿತ್ರ ಜೋಡಿಸುವುದು, ಮಾಡೆಲಿಂಗ್,
ಕಾರ್ಟೂನಿಂಗ್, ಪೋಸ್ಟರ್ ಮೇಕಿಂಗ್, ಇನ್‌ಸ್ಟಾಲೇಶನ್ ಸ್ಪರ್ಧೆ ಜರುಗಲಿವೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಕಾಲೇಜುಗಳಿ೦ದ ಆಗಮಿಸಲಿರುವ ಸ್ಪರ್ಧಾ
ವಿದ್ಯಾರ್ಥಿನಿಯರಿಗೆ, ನೃತ್ಯ ಸಂಯೋಜಕರಿಗೆ ತಂಡದ ವ್ಯವಸ್ಥಾಪಕರಿಗೆ, ಸ್ಪರ್ಧೆ ನಿರ್ಣಾಯಕರಿಗೆ ಊಟ ಹಾಗೂ ವಸತಿ
ವ್ಯವಸ್ಥೆ ಮಾಡಲಾಗಿದೆ ಎಂದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಪದನಿಮಿತ್ತ ಕಾರ್ಯದರ್ಶಿ ಡಾ.ವಿ.ಎಸ್.ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್.ಜೆ.ಒಡೆಯರ ಉಪಸ್ಥಿತರಿದ್ದರು.