*ಮಹಿಳಾ ಮೀಸಲಾತಿ ಸ್ವಾಗತಾರ್ಹ: ಡಾ.ವೀರಣ್ಣ ಚರಂತಿಮಠ*
*ಇದು ಮಹಿಳಾ ಸಬಲೀಕರಣದ ನೈಜ ಕಾಳಜಿ*
ಬಾಗಲಕೋಟೆ: ದೇಶದಲ್ಲಿ 7 ದಶಕಗಳ ಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಯಾವಾಗಲೂ ಕಡೆಗಣಿಸಿ, ಮಹಿಳಾ ಮೀಸಲಾತಿಯನ್ನು ತಿರಸ್ಕರಿಸಿದೆ. 1996 ರಲ್ಲಿ ವಾಜಪೇಯಿ ಸರ್ಕಾರ ಆರಂಭಿಸಿದ್ದ, ಶಾಸನ ಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸುವ ಮಸೂದೆಯನ್ನು ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರೆ ಬರಬೇಕಾಯಿತು.ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಮಹಿಳಾ ಮೀಸಲಾತಿ ಮಸೂದೆಯಿಂದ ಲೋಕಸಭೆ, ರಾಜ್ಯಸಭೆ ಸೇರಿದಂತೆ ದೇಶದ ಎಲ್ಲಾ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಗಳಲ್ಲಿ ಗಳಲ್ಲಿ ಮಹಿಳೆಯರಿಗೆ ಇನ್ನು ಮುಂದೆ 33% ಮೀಸಲಾತಿ ದೊರೆಯಲಿದ್ದು, ಇದು ಮಹಿಳಾ ಸಬಲೀಕರಣದ ನೈಜ ಕಾಳಜಿಯಾಗಿದೆ.
ಡಾ.ವೀರಣ್ಣ ಚರಂತಿಮಠ
ಮಾಜಿ ಶಾಸಕರು
ಬಾಗಲಕೋಟೆ.