This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಗಿಡ ಮೂಲಿಕೆಗಳ ವೈಜ್ಞಾನಿಕ ಉಪಯೋಗ ಕುರಿತು ಕಾರ್ಯಾಗಾರ

ಗಿಡ ಮೂಲಿಕೆಗಳ ವೈಜ್ಞಾನಿಕ ಉಪಯೋಗ ಕುರಿತು ಕಾರ್ಯಾಗಾರ

ಬಾಗಲಕೋಟೆ:

ಅಂದಾಜು 10 ಸಾವಿರಕ್ಕೂ ಅಧಿಕ ಸಸ್ಯಗಳು ಔಷಧಿ ಗುಣವುಳ್ಳದ್ದಾಗಿದ್ದು, ಇತ್ತೀಚಿನ ಸಂಶೋಧನೆ ಪ್ರಕಾರ ಭಾರತೀಯ ಔಷಧಿ ಸಸ್ಯಗಳು ಜಾಗತಿಕ ಮನ್ನಣೆ ಪಡೆದಿವೆ ಎಂದು ತೋವಿವಿಯ ಕುಲಪತಿ ಎನ್.ಕೆ.ಹೆಗಡೆ ಹೇಳಿದರು.

ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿರುವ ರೈತ ವಿಕಾಸ ಭವನದಲ್ಲಿ ತೋವಿವಿ ವಿಸ್ತರಣಾ ನಿರ್ದೇಶನಾಲಯ, ಬಿವಿವ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದಲ್ಲಿ ಔಷಧಿ ಹಾಗೂ ಸುಗಂಧ ದ್ರವ್ಯ ಮೂಲಿಕೆಗಳ ದಿನನಿತ್ಯದಲ್ಲಿ ವೈಜ್ಞಾನಿಕ ಉಪಯೋಗ ಕುರಿತು ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು

ಹಿಂದಿನ ಕಾಲದ ಭಾರತೀಯ ಸಂಸ್ಕøತಿಯಲ್ಲಿ ಆರ್ಯುವೇದ ಗಿಡಮೂಲಿಕೆಗೆ ಹೆಚ್ಚಿನ ಮನ್ನಣೆ ಇತ್ತು. ಅಂದು ಹಿತ್ತಲಗಿಡ ಮದ್ದಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಪ್ರಚಲಿತದಲ್ಲಿತ್ತು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಆರ್ಯುವೇಧ ಪದ್ದತಿ ಚಿಕಿತ್ಸೆ ಉಪಯುಕ್ತವಾಗಿದ್ದರೂ ಇಂದಿನ ಜನರಿಗೆ ಬೇಗ ಗುಣಪಡಿಸುವ ಅಲೋಪತಿಯತ್ತ ವಾಲಿದ್ದಾರೆ ಎಂದರು.

ಈ ಔಷಧಿ ಸಸ್ಯಗಳು ದೇವರ ಪೂಜೆಗೆ ಯೋಗ್ಯವಾಗಿದ್ದು, ಅದರಲ್ಲಿ ತೆಂಗು, ತುಳಸಿ, ಫಲಪುಷ್ಪಗಳು ಪ್ರಚಲಿತದಲ್ಲಿವೆ. ಕೆಲವು ಔಷಧಿ ಸಸ್ಯಗಳನ್ನು ಮನೆಯ ಸುತ್ತಲು ನೆತ್ತರೆ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಬಹುದು. ಈ ಔಷಧಿ ಸಸ್ಯಗಳ ಮಹತ್ವ ತಿಳಿಸಿದ ಚರಕ, ಸುಶ್ರೂತ, ಧನವಂತರಿ, ಪತಂಜಲಿ ಮುಂತಾದ ಋಷಿಗಳು ಇವುಗಳನ್ನು ಅಂದೇ ಪ್ರಚಲಿತಗೊಳಿಸಿದ್ದರು.

ಇಂತಹ ಮಹತ್ವ ಪೂರ್ಣ ಔಷಧಿ ಸಸ್ಯಗಳ ಬಳಕೆ ಹಾಗೂ ಮಹತ್ವವನ್ನು ವಿದ್ಯಾರ್ಥಿಗಳು ಅರಿತು ಜನರಿಗೆ ಇದರ ಉಪಯುಕ್ತ ಮಾಹಿತಿ ನೀಡಬೇಕು. ತೋಟಗಾರಿಕೆ ವಿಶ್ವವಿದ್ಯಾಲಯ ಇಂತಹದೊಂದು ಯಶಸ್ವಿಕಾರ್ಯ ಮಾಡಿ ಹಣ್ಣು, ಹೂ ಮುಂತಾದ ಗಿಡಮರಗಳ ಜೊತೆಗೆ ಔಷಧಿ ಸದಸ್ಯಗಳ ಹಾಗೂ ಉಪಯುಕ್ತ ಖನಿಜಾಂಶವುಳ್ಳ ತರಕಾರಿ, ಹಣ್ಣು ಕಾಯಿಗಳನ್ನು ಬೆಳೆಯುತ್ತಿದ್ದು, ಅದರ ಜೊತೆಗೆ ಔಷಧಿ ಸಸ್ಯಗಳ ಕುರಿತಾದ ಈ ತರಬೇತಿ ಶ್ಲಾಘನೀಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿವಿವ ಸಂಘದ ಆರ್ಯುವೇಧ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಹಾಂತೇಶ ಸಾಲಿಮಠ ಮಾತನಾಡಿ ಕೆಲವು ದಿನಗಳ ಹಿಂದೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಿಬ್ಬಂದಿ ನಮ್ಮ ಆರ್ಯುವೇಧ ಕಾಲೇಜಿನ ಭೇಟಿ ನೀಡಿ ತಿಳಿಸಿದಾಗ ನಮ್ಮ ಕಾಲೇಜ ಆವರಣದಲ್ಲಿಯೇ 3 ನೂರಿನಿಂದ 4 ನೂರು ವಿವಿಧ ಔಷಧಿ ಸಸ್ಯಗಳಿದ್ದು, ಅಂದು ಅವುಗಳನ್ನು ಪರಿಚಯಿಸಲಾಯಿತು.

ಅದರಂತೆ ಇತ್ತೀಚೆಗೆ ಬಹು ಬೇಡಿಕೆಯುಳ್ಳ ಹರ್ಬಲ್ ಗಿಡಮೂಲಿಕೆಗಾಗಿ ಜಾಗ ಮೀಸಲಿಟ್ಟಿದ್ದೇವೆ ಎಂದರು.
ಇಂತಹ ಉಪಯುಕ್ತ ತಗರಬೇತಿಯಿಂದ ಹೆಚ್ಚಿನ ಜ್ಞಾನ ಒದಗಲಿದ್ದು, ಪ್ರತಿಯೊಂದು ತರಬೇತಿಯಲ್ಲಿ ಔಷಧಿಯ ಗಿಡಗಳ ಮಹತ್ವ ತಿಳಿಸಲಾಗುತ್ತದೆ. ಆರ್ಯುವೇದದ ಮಹತ್ವ ಇತ್ತೀಚಿನ ಕೆಲವು ವರ್ಷಗಳ ಹಿಂದೆ ಕೋರೋನದಿಂದ ಬಳಲುತ್ತಿದ್ದ ರೋಗಿ ಯಾವುದೇ ಅಲೋಪತಿ ಔಷಧಿ ಬಳಸದೇ ಅರಿಶಿಣ ಉಪಯೋಗಿಸಿಕೊಂಡು ರೋಗ ವಾಸಿಮಾಡಿಕೊಂಡ ಉದಾಹರಣೆ ಇವೆ ಎಂದರು. ಇಂತ ಶಕ್ತಿ ಇರುವ ಔಷಧಿಗಳನ್ನು ಜನರು ಬಳಸಿಕೊಂಡು ನಿರೋಗಿಗಳಾಗುವಂತೆ ವಿದ್ಯಾರ್ಥಿಗಳಾದ ತಾವು ಗಮನ ಹರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಹೆಡಗೆ ಮಾತನಾಡಿ ಭಾರತೀಯ ಔಷಧಿ ಸಸ್ಯ ಹಾಗೂ ಆರ್ಯುವೇಧವನ್ನು ಜಾಗತಿಕರ ಮಾಡಲು ಆಗದೇ ಇರುವುದು ಕಳವಳಕಾರಿ ಸಂಗತಿಯಾಗಿದೆ. ಚೀನಾ ಉಪಯುಕ್ತ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ 1.50 ಲಕ್ಷ ಕೋಟಿ ವಹಿವಾಟು ಮಾಡುತ್ತಿದೆ. ಆದರೆ ಭಾರತ ದೇಶ 1999 ರಿಂದ 2000ರಲ್ಲಿ ನಿರ್ಣಯಿಸಿದಂತೆ 2010 ರೊಳಗಾಗಿ 10 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಿತ್ತು.

ಇಲ್ಲಿಯವರೆಗೆ ಅದನ್ನು ತಲುಪಲು ಆಗಿಲ್ಲವೆಂದರು.
ಇಂದು ಔಷಧಿ ಸಸ್ಯಗಳ ಬೆಲೆ ತಿಳಿಯದ ಕಾರಣ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ವಾಣಿಜ್ಯ ಬೆಳೆಗಳಿಗಿಂತಲೂ ಹೆಚ್ಚಿನ ಆದಾಯ ತರುವ ಸಪ್ಪೇದ ಮುಸ್ಲಿ, ಸರ್ಪಗಂಧ, ಪುನರ್ವನಮ ಎಂಬ ಔಷಧಿಗಳು 12 ರಿಂದ 15 ನೂರುವರೆಗೆ ಮಾರಾಟವಾಗುತ್ತಿದೆ.

ಅಲೋಪತಿಯಲ್ಲಿ ಇದುವರೆಗೆ ಕಾಮಾಲೆ ರೋಗಕ್ಕೆ ಔಷಧಿ ಇರದೇ ಇಂದಿಗೂ ಲಿವ್-52 ಔಷಧಿಯನ್ನೇ ಕೊಡುತ್ತಿದ್ದಾರೆ. ಎಲ್ಲ ರೋಗಕ್ಕೂ ಆರ್ಯುವೇಧ ಔಷಧಿ ಸಸ್ಯಗಳಿಗೆ ಹೆಚ್ಚು ನೀರು, ಆರೈಕೆ, ಬಿಸಿಲು, ಮಳೆ ಇಲ್ಲದಿದ್ದರೂ ಬೆಳೆಯುತ್ತವೆ ಎಂದರು.

ತೋವಿವಿಯ ಪ್ರಾದ್ಯಾಪಕ ಡಾ.ವಸಂತ ಗಾಣಿಗೇರಪ್ರಾರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತೋವಿವಿಯ ಪ್ರಾದ್ಯಾಪಕ ಡಾ.ವಿಜಯಕುಮಾರ ನಾರಾಯಣಪುರ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಗುರುರಾಜ ಕುಲಕರ್ಣಿ, ಡಾ.ಜಗದೀಶಚಂದ್ರ ಹಿರೇಮಠ, ಡಾ.ವೈ.ಸಿ ವಿಶ್ವನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಬಿವಿವ ಸಂಘದ ಆರ್ಯುವೇಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

";