This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

International NewsNational NewsState News

ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ

ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ

ಮುಂಬಯಿ:

ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ(ICC World Cup 2023) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಎರಡು ಬಾರಿ ಪರಿಷ್ಕೃತ ವೇಳಾಪಟ್ಟಿ ಬದಲಾವಣೆಗೊಂಡರೂ ಮತ್ತೆ ಪಂದ್ಯದ ಬದಲಾವಣೆಯ ಕೋರಿಕೆಯೊಂದು ಬಂದಿದೆ. ಹೈದರಾಬಾದ್‌ನ (Hyderabad) ಅಧಿಕಾರಿಗಳು ಪಂದ್ಯಗಳ ದಿನಾಂಕವನ್ನು ಬದಲಾಯಿಸಲು ಬಿಸಿಸಿಐ(BCCI) ಬಳಿ ಮನವಿಯೊಂದನ್ನು ಮಾಡಿರುವುದಾಗಿ ವರದಿಯಾಗಿದೆ.

ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ನಡೆಯುವ ಟೂರ್ನಿಗೆ ಒಂದಲ್ಲ ಒಂದು ವಿಘ್ನ ಬರುತ್ತಲೇ ಇದೆ. 2 ವಾರಗಳ ಹಿಂದಷ್ಟೇ ಭದ್ರತಾ ದೃಷ್ಟಿಯಿಂದ ಭಾರತ ಮತ್ತು ಪಾಕ್​ ಸೇರಿ ಒಟ್ಟು ಒಂಬತ್ತು ಪಂದ್ಯಗಳ ದಿನಾಂಕವನ್ನು ಬಲಾಯಿಸಿ ಐಸಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಸದ್ಯಕ್ಕೆ ಎಲ್ಲ ಸಮಸ್ಯೆಗಳು ಮುಗಿಯಿತು ಎನ್ನುವಾಗಲೇ ಮತ್ತೊಂದು ಪಂದ್ಯದ ಬಲಾವಣಡಯನ್ನು ಕೋರಿ ಬಿಸಿಸಿಐಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಮನವಿಯೊಂದನ್ನು ಮಾಡಿದೆ ಎಂದು ತಿಳಿದುಬಂದಿದೆ. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಮತ್ತೆ ಎದುರಾದ ಭದ್ರತಾ ಸಮಸ್ಯೆ
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 9 ರಂದು ನ್ಯೂಜಿಲ್ಯಾಂಡ್​ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ನಡೆಯಲಿದೆ. ಇದರ ಮರು ದಿನವೇ ಅಕ್ಟೋಬರ್ 10 ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಇದೇ ಮೈದಾನದಲ್ಲಿ ಮತ್ತೊಂದು ಪಂದ್ಯ ನಡೆಯಲ್ಲಿದೆ. ಆರಂಭಿಕ ಹಂತದ ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯ ಅಕ್ಟೋಬರ್ 12 ರಂದು ನಡೆಯಬೇಕಿತ್ತು. ಆದರೆ ದ್ವಿತೀಯ ಬಾರಿ ಪರಿಷ್ಕೃತ ವೇಳಾಪಟ್ಟಿಯಲ್ಲಿ 9 ಪಂದ್ಯಗಳ ದಿನಾಂಕದ ಬದಲಾವಣೆ ಮಾಡುವಾಗ ಇಲ್ಲಿನ ಮೈದಾನಕ್ಕೆ ಸತತ ಎರಡು ದಿನಗಳ ಪಂದ್ಯ ಆಯೋಜನೆಗೊಂಡಿದೆ. ಹೀಗಾಗಿ ಸತತ ಎರಡು ಪಂದ್ಯಗಳಿಗೆ ಬಿಡುವಿಲ್ಲದೆ ಭದ್ರತೆಯನ್ನು ಒದಗಿಸಲು ಸಾದ್ಯವಿಲ್ಲ ಎಂದು ಹೈದಾರಾಬಾದ್​ ಪೋಲಿಸರು ತಿಳಿಸಿರುವುದರಿಂದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬಿಸಿಸಿಐಗೆ ಪಂದ್ಯದ ದಿನಾಂಕ ಬದಲಾವಣೆ ಮಾಡುವಂತೆ ಮನವಿ ಮಾಡಿ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಉದ್ಘಾಟನ ಪಂದ್ಯದಲ್ಲಿ ಇಂಗ್ಲೆಂಡ್​-ಕಿವೀಸ್​ ಸೆಣಸಾಟ
ವಿಶ್ವ ಕಪ್​ ಟೂರ್ನಿ ಅಕ್ಟೋಬರ್​ 5 ರಿಂದ ಆರಂಭಗೊಂಡು ನವೆಂಬರ್​ 19 ತನಕ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 8 ರಂದು ಆಡಲಿದೆ.

ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ

ಭಾರತ vs ನ್ಯೂಜಿಲ್ಯಾಂಡ್​- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ

ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ

ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ

ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಭಾರತ vs ನೆದರ್ಲೆಂಡ್ಸ್​ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

";