ನಿಮ್ಮ ಸುದ್ದಿ ಬಾಗಲಕೋಟೆ
ನವನಗರದ ಉತ್ತರಾದಿ ಮಠದಲ್ಲಿ ಶ್ರೀ ಸತ್ಯಬೋಧತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಮಾ.೨೮ರಿಂದ ಮೂರು ದಿನಗಳ ಕಾಲ ನಡೆಯಲಿದ್ದು ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠಾದೀಶ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳವರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಲಿದ್ದಾರೆ.
ಮಾ.೨೮, ೨೯ ಹಾಗೂ ೩೦ರಂದು ನಡೆಯುವ ಉತ್ಸವದಲ್ಲಿ ಪ್ರವಚನ, ಭಜನೆ, ಪಲ್ಲಕ್ಕಿ, ರಥೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಮಾ.೨೮ರಂದು ಅಭಿಷೇಕ,ಅಷ್ಟೋತ್ತರ, ಶ್ರೀ ಸುದರ್ಶನ ಹೋಮ, ಪಂಡಿತರ ಶಾಸ್ತ್ರಾನುವಾದ, ವೈಕುಂಠ ರಾಮದೇವರ ಪೂಜೆ, ಮಹಾ ನೈವೇದ್ಯ, ತೀರ್ಥ ಪ್ರಸಾದ ಸಂಜೆ ಭಜನೆ, ಪೂಜ್ಯ ಶ್ರೀ ರಘುವಿಜಯ ತೀರ್ಥರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಟಿ ನಡೆಯಲಿದ್ದು ಪಂಡಿತರಾದ ರಘೋತ್ತಮಾಚಾರ್ಯ ನಾಗಸಂಪಗಿ, ಪಂ ಪುರಂದರಾಚಾರ್ಯ ಹಯಗ್ರೀವ, ಪಂ ಶ್ರೀಹರಿಆಚಾರ್ಯ ವಾಳ್ವೇಕರ, ಪಂ ವಾಗೀಶಾಚಾರ್ಯ ಪುರೋಹಿತ ಅವರು ಭಾಗವಹಿಸುವರು, ಪಲ್ಲಕ್ಕಿ ಉತ್ಸವ ನಡೆಯಲಿದೆ.
ಸೋಮವಾರ ಮಾ.೨೯ರಂದು ಅಭಿಷೇಕ, ಅಷ್ಟೋತ್ತರ, ಶ್ರೀಧನ್ವಂತರಿ ಹೋಮ, ಶಾಸ್ತಾçನುವಾದ, ಪಂಡಿತರ ಪ್ರವಚನ,ತೀರ್ಥ ಪ್ರಸಾದ, ಸಂಜೆ ಭಜನೆ, ಧಾರ್ಮಿಕ ಹರಟೆ, ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಮಾ.೩೦ರಂದು ಮಂಗಳವಾರ ಅಭಿಷೇಕ, ಶ್ರೀ ಮನ್ಯೂಸೂಕ್ತ, ರಥಾಂಗ ಹೋಮ, ಶಾಸ್ತಾçನುವಾದ, ೧೧ ಗಂಟೆಗೆ ರಥೋತ್ಸವ, ಪ್ರವಚನ ಮಂಗಳ, ತೀರ್ಥ ಪ್ರಸಾದದೊಂದಿಗೆ ಕಾರ್ಯಕ್ರಮ ಪೂರ್ತಿಗೊಳ್ಳಲಿದ್ದು ಭಕ್ತರು ಭಾಗವಹಿಸಲು ಶ್ರೀ ಮಠದ ವ್ಯವಸ್ಥಾಪಕರಾದ ಪಂ ಭೀಮಸೇನಾಚಾರ್ಯ ಪಾಂಡುರಂಗಿ ವಿನಂತಿಸಿಕೊಂಡಿದ್ದಾರೆ.
ಆರಾಧನೆ ನಿಮಿತ್ಯ ಬೆಂಗಳೂರಿನ ಪಂ ಶ್ರೀಕರಾಚಾರ್ಯ ಬಿದರಹಳ್ಳಿ ಅವರಿಂದ ಭಾಗವತದ ಸಂದೇಶಗಳ ಕುರಿತು ಮಂಗಳವಾರ ದಿಂದ ಮಾ.೨೭ರವರೆಗೆ ಶ್ರೀ ಮಠದಲ್ಲಿ ಸಂಜೆ ೬:೩೦ಕ್ಕೆ ಪ್ರವಚನ ನಡೆಯಲಿದೆ. ಶ್ರೀ ಪ್ರಸನ್ನವೆಂಕಟದಾಸರ ಮನೆಯಲ್ಲಿ ಅನೇಕ ವರ್ಷಗಳಿಂದ ಪೂಜೆಗೊಳ್ಳುತ್ತಿರುವ ಶ್ರೀ ಸತ್ಯಬೋದ ಸ್ವಾಮಿಗಳ ಮೂಲ ಪದುಕೆಗಳನ್ನು ಶ್ರೀ ಮಠದಲ್ಲಿ ಮೂರು ದಿನಗಳ ಕಾಲ ಪೂಜಿಸಲಾಗುತ್ತಿದೆ. ಮಾ.೨೬ರಂದು ಪಾದುಕೆಗಳನ್ನು ನಾರಾಯಣ ದೇವಸ್ಥಾನದಿಂದ ಶ್ರೀ ಮಠದವರೆಗೆ ಶೋಭಾಯಾತ್ರೆಯಲ್ಲಿ ತರಲಾಗುತ್ತಿದ್ದು ಈ ಸಮಯದಲ್ಲಿ ಮಹಿಳಾ ಭಜನಾ ಮಂಡಳಿಗಳ ನೃತ್ಯ, ಕೋಲಾಟ ನಡೆಯಲಿದ್ದು ಆರಾಧನೆ ನಿಮಿತ್ಯ ಮಾ.೨೭ರಂದು ರಸ ಪ್ರಶ್ನೆ, ಭಾಷಣ ಸ್ಪರ್ಧೆ, ಹಾಡಿನ ಸ್ಪರ್ಧೆಗಳು ನಡೆಯಲಿದ್ದು ವಿಜೇತರಿಗೆ ದಿ.೨೮ರಂದು ಬಹುಮಾನ ವಿತರಿಸಲಾಗುತ್ತದೆ.