ಯಾದಗಿರಿ: ಡಿಕೆ ಶಿವಕುಮಾರ್, ಪ್ರಿಯಾಂಕ ಖರ್ಗೆ ಅವರು ನನ್ನ ಮೇಲೆ ಹೆಚ್ಚು ಕೇಸ್ ಹಾಕಿ ಅರೆಸ್ಟ್ ಮಾಡಬೇಕು ಎಂಬ ಉದ್ದೇಶವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ಶಹಾಪುರನಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರ ಪರವಾಗಿ ಬೃಹತ್ ರೋಡ್ ಶೋ ಬಳಿಕ ಮಾತನಾಡಿದ ಅವರು, ಯತ್ನಾಳ್ ದಿನಾಂಕ 7ರ ವರೆಗೆ ಬಹಿರಂಗ ಪ್ರಚಾರಕ್ಕೆ ಬರಬಾರದು. ಜೈಲಿನಲ್ಲಿ ಇರಬೇಕು ಎಂದು ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ ಎಂದು ಹೇಳಿದರು.
ಶ್ಯಾಮ ಪ್ರೀಥ್ರೋಡಾ ರಾಜೀವ್ ಗಾಂಧಿ, ರಾಹುಲ್ ಗಾಂಧಿ ಸಲಹೆಗಾರ. ದೇಶದಲ್ಲಿ ಆಸ್ತಿ ಸರ್ವೆ ಮಾಡಿ ಪಿತ್ರಾರ್ಜಿತ ಆಸ್ತಿಯಲ್ಲಿ 55 ಪರ್ಸೆಂಟ್ ಆಸ್ತಿ ಸರ್ಕಾರ ತೆಗೆದುಕೊಳ್ಳಬೇಕು ಅಂತ ಹೇಳಿದ್ದು, ಕಾನೂನು ತರೋಕೆ ವ್ಯವಸ್ಥೆ ಮಾಡಿದ್ದಾರೆ. ಸಾವಿರಾರು ವರ್ಷಗಳಿಂದ ತಂದೆಯ ಆಸ್ತಿ ಮಕ್ಕಳಿಕೆ ಹೋಗಬೇಕು ಎನ್ನುವ ಸಂಪ್ರದಾಯವಿದೆ. ಸಂಪ್ರದಾಯ ಮುರಿದು ಮುಸ್ಲಿಂ ಆಸ್ತಿಯಲ್ಲಿ ಪಾಲು ಕೊಡುವ ಕೆಲಸ ಕಾಂಗ್ರೆಸ್ ಮಾಡುವಂತದ್ದು. ಕರಾಳ ಶಾಸನ ತರಬೇಕು ಅಂತ ಕಾಂಗ್ರೆಸ್ ಮಾಡಿದ್ದು, ಅದಕ್ಕೆ ದೇಶದ ಜನ ಕಾಂಗ್ರೆಸ್ಗೆ ಬುದ್ಧಿ ಕಲಿಸಬೇಕು ಎಂದು ಆಗ್ರಹಿಸಿದರು.
ಒಬಿಸಿ ಸೀಟ್ ಮುಸ್ಲಿಂ ಜಾಸ್ತಿ ಕೊಟ್ಟಿರುವ ವಿಚಾರವಾಗಿ ಮಾತನಾಡಿದ್ದು, ದಲಿತರಿಗೆ ಹಿಂದುಳಿದವರಿಗೆ ಕಾಂಗ್ರೆಸ್ ಬಾರಿ ಮೋಸ ಮಾಡಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ಸಮಾಜಿಕ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರವಿದೆ. ಮುಸ್ಲಿಂ ಧರ್ಮಕ್ಕೆ ಮೀಸಲಾತಿ ಕೊಡಲು ಬರುವುದಿಲ್ಲ. ಅದಕ್ಕೆ ಮೋದಿ, ಅಮಿತ್ ಶಾ ಹೇಳಿದ್ದಾರೆ. ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಮೀಸಲಾತಿ ತೆಗೆದು ಹಿಂದುಳಿದ ದಲಿತರಿಗೆ ಹಂಚುತ್ತೇವೆ.
ಬಿಜೆಪಿಯಲ್ಲಿ ನೇರವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಿಯಾಂಕ ಖರ್ಗೆ ಅವರನ್ನು ನಾನೋಬ್ಬನೇ ಟಾರ್ಗೆಟ್ ಮಾಡುತ್ತಿದ್ದೇನೆ. ಕೆಲವೊಬ್ಬ ನಾಯಕರು ಹೊಂದಾಣಿಕೆ ಇರುವುದರಿಂದ ಯಾವುದೇ ರೀತಿ ನೇರವಾಗಿ ದಾಳಿ ಮಾಡುತ್ತಿಲ್ಲ. ನನ್ನ ಮೇಲೆ ಯಾರು ಯಾರು ವ್ಯವಸ್ಥಿತ ಕುಮ್ಮಕ್ಕು ಇದೆ ಎನ್ನುವುದನ್ನು ದಿನಾಂಕ 7ರ ನಂತರ ಹೇಳುತ್ತೇನೆ ಎಂದು ಸೂಚಿಸಿದರು.