ಹಾವೇರಿ: ಡಿಕೆ ಶಿವಕುಮಾರ್ ದು ಏನಿದೆ ಅಂತ ಗೊತ್ತೇ ಇದ್ದು, ಅವರು ಯಾರು ಯಾರ ಜೋಡಿ ಸೆಟ್ಲ್ ಮೆಂಟ್ ಮಾಡ್ತಾರೆ ಏನು ಗೊತ್ತಿದೆ. ಸೆಟ್ಲ್ ಮೆಂಟ್ ಮಾಡಿಕೊಂಡೇ ಅವರು ಹೊರಗಿದಾರೆ. ಹೊರಗೆ ಇರೋಕೆ ಆಗಲ್ಲ. ಕೇಂದ್ರದಲ್ಲಿ ಯಾವ ಸೆಟ್ಲ್ ಮೆಂಟ್ ನಡೆಯಲ್ಲ. ಸದ್ಯದಲ್ಲೇ ಡಿಕೆಶಿ ಅವರದ್ದು ಸೆಟ್ಲ್ ಮೆಂಟ್ ಆಗಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಇದು ಈಶ್ವರಪ್ಪನವರಿಗೆ ಸೆಟ್ಲ್ ಮೆಂಟ್ ಮಾಡ್ತೀನಿ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕಗೆ ವಿಜಯಪುರ ಶಾಸಕ ನೀಡಿರುವ ತಿರುಗೇಟು.ರಾಣೆಬೆನ್ನೂರು ತಾಲೂಕು ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರರಾಗಿರುವ ಸಂಸದ ಡಿಕೆ ಸುರೇಶ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ದೇಶ ವಿಭಜನೆ ಬಗ್ಗೆ ಮಾತಾಡೋದು ಅಂದರೆನೇ ದೇಶದ್ರೋಹ. ಡಿಕೆ ಸುರೇಶ್ ಅವರಿಗೆ ಪಕ್ಷದಿಂದ ಶೋಕಾಸ್ ನೋಟೀಸ್ ಕೊಟ್ಟಿಲ್ಲ ಅಂದರೆ ಸೋನಿಯಾ ರಾಹುಲ್ ದೇಶ ವಿಭಜನೆಗೆ ಬೆಂಬಲ ಕೊಡ್ತಿದ್ದಾರೆ ಎಂದರ್ಥ. ಭಾರತ್ ಜೋಡೋ ಮಾಡ್ತೀವಿ ಅಂತಾರೆ. ಇಲ್ಲಿ ಅವರ ಎಂಪಿ ಭಾರತ್ ತೋಡೋ ಮಾಡ್ತಿದಾರೆ. ಮೊದಲು ಅವರ ನಿಲುವೇನು ಎಂದು ಸ್ಪಷ್ಚಪಡಿಸಲಿ ಎಂದು ಆಗ್ರಹಿಸಿದರು.