ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಲ್ಲಿ ನೆಲೆಗೊಂಡಿರುವ ಎಚ್ ಎ ಎಲ್ ಸಂಸ್ಥೆಯನ್ನು ಮುಚ್ಚುವ ಹುನ್ನಾರ ನಡೆಸಿದ್ದಾರೆ, ಅದರೆ ಅದು ಅದು ಮತ್ತಷ್ಟು ಅಭಿವೃದ್ಧಿ ಹೊಂದಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಹಾಗಾಗಿ ರಾಹುಲ್ ಅವರನ್ನು ಕರೆತಂದು ಕ್ಷಮೆ ಕೇಳಿಸುವ ಕೆಲಸವನ್ನು ಡಿಕೆ ಶಿವಕುಮಾರ್ ಮಾಡುತ್ತಾರೆಯೇ ಅಂತ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ ಅಂತ ಪತ್ರಕರ್ತರು ಕೆಪಿಸಿಸಿ ಅಧ್ಯಕ್ಷರಿಗೆ ಕೇಳಿದಾಗ ಅವರು, ಈ ಸಮಯದಲ್ಲಿ ತಾನು ಈ ಪ್ರಶ್ನೆಗೆ ಉತ್ತರ ನೀಡುವುದು ಸೂಕ್ತ ಅಲ್ಲ ಎಂದರು.
ಕಾಂಗ್ರೆಸ್ ಗೆ ವೋಟು ನೀಡಿದರೆ ಭಯೋತ್ಪಾದಕರಿಗೆ ನೀಡಿದಂತೆ ಅಂತ ಯಡಿಯೂರಪ್ಪ ಹೇಳಿದ್ದನ್ನು ನೀತಿ ಸಂಹಿತೆ ಅಡಿಯಲ್ಲಿ ಚುನಾವಣಾ ಆಯೋಗ ಗಮನಿಸುತ್ತದೆ ಎಂದು ಹೇಳಿದರು.
ಮುಂದುವರಿದು ಮಾತಾಡಿದ ಅವರು ಯಡಿಯೂರಪ್ಪ ವಿನಾಕಾರಣ ವಿಷಯಗಳನ್ನು ಡೀವಿಯೇಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ, ಅಸಲಿಗೆ ಅವರು ಉತ್ತರ ಕೊಡಬೇಕಿರುವುದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಮತ್ತು ತಮ್ಮ ಬೇಡಿಕೆಗೆ ಎಂದರು.
ನಮ್ಮ ತೆರಿಗೆ ನಮ್ಮ ಹಕ್ಕು ಅಂತ ರಾಜ್ಯ ಸರ್ಕಾರ ಪ್ರದರ್ಶನ ಮಾಡಿದ್ದಕ್ಕೆ ಉತ್ತರ ಕೊಡಬೇಕು, ಮತ್ತು ತಾನು ಕಣ್ಣೀರು ಹಾಕಿದ್ಯಾಕೆ ಅನ್ನೋದಕ್ಕೂ ಯಡಿಯೂರಪ್ಪ ಉತ್ತರ ಕೊಡಬೇಕು ಎಂದು ಶಿವಕುಮಾರ್ ಹೇಳಿದರು.