ಬಾಗಲಕೋಟೆ
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ಯೋಗಾ ಮ್ಯಾರಾಥಾನ್ ಆಯೋಜಿಸಲಾಗಿತ್ತು.
ವಿದ್ಯಾಗಿರಿಯ ರೇಣುಕಾಚಾರ್ಯಾ ವೃತ್ತದಿಂದ ಕಾಳಿದಾಸ ವೃತ್ತದವರೆಗೆ ಯೋಗಾ ಮಾರಾಥ್ಯಾನ (ಜಾಥಾ) ಹಮ್ಮಿಕೊಳ್ಳಲಾಯಿತು. ಜಾಥಾದಲ್ಲಿ ಅನೇಕ ಯೋಗಪಟುಗಳು ಯೋಗದ ಆರೋಗ್ಯದ ಘೋ?Àಣೆ ಹಾಕುತ್ತಾ ಜಾಗೃತಿ ಮೂಡಿಸಿದರು.
ಪತಂಜಲಿ ಮುಖ್ಯಸ್ಥ ಎಚ್.ಎನ್.ಇನಾಮದಾರ್, ಯೋಗ ನಮ್ಮ ಪೂರ್ವಜರ ಕಾಲದ ಜೀವನ ಪದ್ಧತಿಯಾಗಿದೆ. ಅದನ್ನು ಇಡಿ ವಿಶ್ವಕ್ಕೆ ಪರಿಚಯಿಸಲಾಗಿದ್ದು ವಿಶ್ವದ ಬಹುತೇಕ ರಾ?À್ಟ್ರಗಳು ಯೋಗವನ್ನು ಒಪ್ಪಿಕೊಂಡು ಅನುಸರಿಸುತ್ತಿವೆ ಎಂದರು.
ಭಾರತದಲ್ಲಿ ಅನೇಕ ವ್ಯಕ್ತಿಗಳು ಒಂದಲ್ಲ ಒಂದು ರೀತಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಯೋಗ ರಾಮಬಾಣವಾಗಿದೆ. ಯೋಗ ಎಲ್ಲರಿಗೂ ಉಚಿತವಾಗಿದ್ದು ಖಚಿತವಾಗಿ ಆರೋಗ್ಯ ಪಡೆದುಕೊಳ್ಳಬಹುದು. ದಿನಕ್ಕೆ ೧ ಗಂಟೆ ಕಾಲ ಸಮಯ ಯೋಗಕ್ಕೆ ಮೀಸಲಿಟ್ಟರೆ ಸುಸ್ಥಿರ ಆರೋಗ್ಯ ಪಡೆಯಬಹುದು ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿ ಸದಸ್ಯರಾದ ರಾಜು ದಂಡಗಿ, ಬಿ.ಎಸ್.ಕಟಗೇರಿ, ಆರ್.ಬಿ.ಗೋಪಾಲಪ್ಪನವರ, ಪ್ರಭು ಆನೆಹೊಸುರ, ಶ್ರೀಶೈಲ ಮಠಪತಿ, ಶಾಂತಪ್ಪ ದೊಡ್ಡಮನಿ, ಸೀಮಾ ಮಣ್ಣೂರ, ಕೆ.ಮಾಲತಿ, ಮೀರಾ ಕಾಂಬಳೆ ಇದ್ದರು.