ಬಾಗಲಕೋಟೆ :
ಇಂದಿನ ಆಧುನಿಕ ಯುಗದಲ್ಲಿ ಅವಸಾನ ಅಂಚಿನಲ್ಲಿರುವ ಕನ್ನಡ ಜಾನಪದ ಸಂಸ್ಕøತಿಯ ಕಲೆಗಳನ್ನು ಯುವ ಸಮುದಾಯವು ಉಳಿಸಿ ಬೆಳಸಬೇಕಾಗಿದೆ ಎಂದು ಶಾಸಕ ಹೆಚ್.ವೈ.ಮೇಟಿ ಹೇಳಿದರು.
ನವನಗರದ ಸರಕಾರು ಪ್ರಥಮ ದರ್ಜೆ ಕಾಲೇಜಿನ ಚಾಲುಕ್ಯ ರಂಗ ಮಂಟಪದಲ್ಲಿ ಹಮ್ಮಿಕೊಂಡ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ ಇವರ ಸಹಯೋಗದಲ್ಲಿ ‘ಕರ್ನಾಟಕ ಸಂಭ್ರಮ-50’ ರ ಅಂಗವಾಗಿ ಯುವ ಸೌರಭ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಂಸ್ಕøತಿಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡಲು ಸಾಧ್ಯವಿದೆ ಎಂದರು.
ವಿಧಾನ ಪರಿಷತ್ತು ಸದಸ್ಯ ಹನಮಂತ ನಿರಾಣಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತ ದೇಶದಲ್ಲಿ ಕರ್ನಾಟಕ ಜಾನಪದ ಸಂಸ್ಕøತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ ವಿವಿಧ ಪ್ರಕಾರಗಳಲ್ಲಿ ಸಂಸ್ಕøತಿ ಬೆಳದು ಬಂದಿದೆ. ವಿದ್ಯಾರ್ಥಿಗಳ ನಮ್ಮ ಶ್ರೀಮಂತ ಸಂಸ್ಕøತಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪಿ.ಹೆಚ್.ಪೂಜಾರ ಅವರು ಕನ್ನಡಿಗರ ಜನರ ಜೀವ ನಾಡಿಯಾದ ಜಾನಪದ ಸಂಸ್ಕøತಿ ಮತ್ತು ಪರಂಪರೆ ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ. ನಮ್ಮ ಜಾನಪದ ಸಂಸ್ಕøತಿಯಲ್ಲಿರುವ ಬಯಲಾಟ, ದೊಡ್ಡಾಟ, ಪಾರಿಜಾತ, ಕರಡಿ ಮಜಲು, ಡೊಳ್ಳು ಕುಣಿತ, ವೀರಗಾಸೆ ಮುಂತಾದವು ಕನ್ನಡ ನಾಡನ್ನು ವೈವಿಧ್ಯಮಯಗೊಳಿಸುವೆ. ಕಾಲೇಜು ವಿದ್ಯಾರ್ಥಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಯೋಜಿಸುವ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಸಾಂಸ್ಕøತಿಕ ಬದುಕು ಸುಂದರವಾಗಿ ರೂಪಿಸಿಕೊಳ್ಳಬೇಕೆಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಪ್ರಾಸ್ತಾವಿಕ ಮಾತನಾಡಿ ಕರ್ನಾಟಕ ಸಂಭ್ರಮ-50 ರ ಪ್ರಯುಕ್ತ ಜಿಲ್ಲೆಯ ತುಂಬಾ ವಿಶೀಷ್ಟವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಅದರಲ್ಲಿ ಯುವ ಸಮುದಾಯಕ್ಕಾಗಿ ಯುವ ಸೌರಭ ಕಾರ್ಯಕ್ರಮ ಒಂದಾಗಿದೆ ಎಂದು ತಿಳಿಸಿದರು.
ಕುಮಾರಿ ಚಂದನ ಚಪ್ಪರದಹಳ್ಳಿಮಠ ನಾಡುಗೀತೆ ಮತ್ತು ಪ್ರಾರ್ಥನೆ ಮಾಡಿದರು, ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ ಸ್ವಾಗತಿಸಿದರು, ಡಾ.ಚಂದ್ರಶೇಖರ ಕಾಳನ್ನವರ ವಂದಿಸಿದರು. ಡಾ.ಸುಮಂಗಲಾ ಮೇಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.
*ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ*
———————————
ಸುಗಮ ಸಂಗೀತ, ಜಾನಪದ ಹಾಡು, ಸಮೂಹ ನೃತ್ಯ, ನಾಟಕ, ದೊಡ್ಡಾಟ, ಡೊಳ್ಳು ಕುಣಿತ ಹಾಗೂ ಲಂಬಾಣಿ ನೃತ್ಯಗಳನ್ನು ಕಲಾವಿದರು ಹಾಗೂ ಯುವ ವಿದ್ಯಾರ್ಥಿಗಳು ನೀಡಿದ ಪ್ರದರ್ಶನ ಎಲ್ಲರ ಮನ ಸೆಳೆಯಿತು.