ಬಾಗಲಕೋಟೆ
ಮುಧೋಳ ತಾಲೂಕಿನ ಯರಗಟ್ಟಿ-ಬಬಲೇಶ್ವರ ರಾಜ್ಯ ಹೆದ್ದಾರಿ ಸಂ.೫೫ರ ೫೪.೬೯ ರಿಂದ ೫೮.೦೦ ಕಿ.ಮೀ ವರೆಗಿನ ರಸ್ತೆ ಅಗಲೀಕರಣದಲ್ಲಿ ಬರುವ ೫೫ ವಿವಿಧ ಜಾತಿಯ ಮರಗಳನ್ನು ಕಟಾವಣೆ ಮಾಡಿ ತೆರೆವುಗೊಳಿಸುವಂತೆ ಮುಧೋಳ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕರು ವಿನಂತಿಸಿಕೊAಡಿದ್ದು, ಸದರಿ ಮರಗಳನ್ನು ಕಟಾವಣೆಗೆ ಯಾವುದೇ ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ಅಹವಾಲು ಅಥವಾ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಗೊಂಡ ೭ ದಿನಗಳ ಒಳಗಾಗಿ ಬಾಗಲಕೋಟೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.