196 ಜನ ಗುಣಮುಖ, 676 ಹೊಸ ಪ್ರಕರಣ ದೃಡ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಕೋವಿಡ್‍ನಿಂದ 196 ಜನ ಗುಣಮುಖರಾಗಿದ್ದು, ಹೊಸದಾಗಿ 676 ಕೊರೊನಾ ಪ್ರಕರಣಗಳು ಹಾಗೂ 8 ಮೃತ ಪ್ರಕರಣಗಳು ಮಂಗಳವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 19,540 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 16,087 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ.
ಹೊಸದಾಗಿ ಬಾಗಲಕೋಟೆ 246, ಬಾದಾಮಿ 93, ಜಮಖಂಡಿ 79, ಹುನಗುಂದ 90, ಮುಧೋಳ 129, ಬೀಳಗಿ 39 ಜನರಲ್ಲಿ ಸೋಂಕು ದೃಡಪಟ್ಟಿವೆ.
ಕೋವಿಡ್ ಲ್ಯಾಬ್‍ನಲ್ಲಿ ಪರೀಕ್ಷಿಸಲಾಗುತ್ತಿದ್ದ 5781 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 562376 ಸ್ಯಾಂಪಲ್‍ಗಳನ್ನು ಪರೀಕ್ಷೀಸಲಾಗಿದ್ದು, ಈ ಪೈಕಿ 19540 ನೆಗಟಿವ್ ಪ್ರಕರಣ, ಹಾಗೂ 166 ಮೃತ ಪ್ರಕರಣಗಳು ವರದಿಯಾಗಿರುತ್ತದೆ.
ಇನ್ನು 3,679 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.