ಬಾಗಲಕೋಟೆಗೆ ೮ ಕ್ರೀಡಾ ಪ್ರಶಸ್ತಿ
ಬಾಗಲಕೋಟೆ
ಜಿಲ್ಲೆಯ ನಾಲ್ವರು ಕ್ರೀಡಾಪಟುಗಳಿಗೆ ಏಕಲವ್ಯ ಹಾಗೂ ನಾಲ್ವರಿಗೆ ಕ್ರೀಡಾ ರತ್ನ ಪ್ರಶಸ್ತಿ ಲಭಿಸಿದೆ.
೨೦೧೭, ೨೦೧೮, ೨೦೧೯ನೇ ಸಾಲಿನ ಪ್ರಶಸ್ತಿ ಘೋಷಣೆ ಆಗಿದ್ದು ಬಾಗಲಕೋಟೆ ಜಿಲ್ಲೆಯ ಒಟ್ಟು ಎಂಟು ಕ್ರೀಡಾಪಟುಗಳು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಸೈಕ್ಲಿಂಗನಲ್ಲಿ ಜಮಖಂಡಿ ತಾಲೂಕಿನ ಕುಲ್ಲೊಳ್ಳಿಯ ಮೇಘಾ ಗೂಗಾಡ, ಬೀಳಗಿ ತಾಲೂಕಿನ ಟಕ್ಕಳಕಿಯ ರಾಜು ಭಾಟಿ, ಬಾಗಲಕೋಟೆ ತಾಲೂಕಿನ ತುಳಸಿಗೇರಿಯ ವೆಂಕಪ್ಪ ಕೆಂಗಲಗತ್ತಿ, ಕುಸ್ತಿಯಲ್ಲಿ ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿಯ ಅರ್ಜುನ ಹಲಕುರ್ಕಿಗೆ ಏಕಲವ್ಯ ಲಭಿಸಿದೆ. ಸೈಕ್ಲಿಂಗನ ಮೂವರು ಸಾಧಕರು ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗನಲ್ಲಿ ಮಿಂಚಿದ್ದಾರೆ. ಇನ್ನೂ ಕುಸ್ತಿಯಲ್ಲಿ ಅರ್ಜುನ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
ಇನ್ನು ಕ್ರೀಡಾ ರತ್ನಕ್ಕೂ ನಾಲ್ಕು ಜನ ಆಯ್ಕೆಯಾಗಿದ್ದು, ಮಲ್ಲಕಂಬದಲ್ಲಿ ತುಳಸಿಗೇರಿಯ ಭೀಮಣ್ಣ ಹಡಪದ, ಅನುಪಮ ಕೆರಕಲಮಟ್ಟಿ, ಕುಸ್ತಿಯಲ್ಲಿ ಮುಧೋಳ ತಾಲೂಕಿನ ಕಸಬಾ ಜಂಬಗಿಯ ಸತೀಶ ಪಡತಾರೆ ಹಾಗೂ ಸಂಗ್ರಾಣಿ ಕಲ್ಲು ಎತ್ತವ ಬಾಗಲಕೋಟೆ ತಾಲೂಕಿನ ಚಂದ್ರಶೇಖರ ಅವರಿಗೆ ಕ್ರೀಡಾರತ್ನ ಪ್ರಶಸ್ತಿ ಲಭಿಸಿದೆ.
Nimma Suddi > State News > ಬಾಗಲಕೋಟೆಗೆ ೮ ಕ್ರೀಡಾ ಪ್ರಶಸ್ತಿ
ಬಾಗಲಕೋಟೆಗೆ ೮ ಕ್ರೀಡಾ ಪ್ರಶಸ್ತಿ
Nimma Suddi Desk.01/11/2020
posted on
Leave a reply