ನವದೆಹಲಿ: ಬ್ರಿಟಿಷ್ ಆಳ್ವಿಕೆಯಲ್ಲಿ (British Rule), ರಾಜ್ಯಪಾಲರ ನಿವಾಸಗಳನ್ನು (Governor’s Residence) ರಾಜ್ಯಪಾಲರ ಭವನಗಳು ಎಂದು ಕರೆಯಲಾಗುತ್ತಿತ್ತು. ಇದಾದ ನಂತರ ಅಂದರೆ ಸ್ವಾತಂತ್ರ್ಯದ ನಂತರ, ಅವುಗಳನ್ನು ರಾಜಭವನಗಳು (Raj Bhavan) ಎಂದು ಮರುನಾಮಕರಣ ಮಾಡಲಾಯಿತು. ಹಾಗಾದರೆ ಅವುಗಳಿಗೆ ರಾಜಭವನಗಳು ಎಂಬ ಹೆಸರನ್ನು ಯಾರು ನೀಡಿದರು? ಮತ್ಯಾಕೆ ರಾಜಭವನಗಳನ್ನು ಈಗ ಲೋಕಭವನಗಳೆಂದು ಮರುನಾಮಕರಣ ಮಾಡಲಾಗುತ್ತಿದೆ? ಈ ಬದಲಾವಣೆ ಹಿಂದಿನ ಉದ್ದೇಶವೇನು? ಜೊತೆಗೆ ಯಾರ ಆದೇಶದ ಮೇರೆಗೆ ಈ ಬದಲಾವಣೆ ನಡೆಯುತ್ತಿದೆ?
ಮೊದಲೇ ಹೇಳಿದಂತೆ ಬ್ರಿಟಿಷ್ ಆಳ್ವಿಕೆಯಲ್ಲಿ, ರಾಜ್ಯಪಾಲರ ನಿವಾಸಗಳನ್ನು ರಾಜ್ಯಪಾಲರ ಭವನಗಳು ಎಂದು ಕರೆಯಲಾಗುತ್ತಿತ್ತು. ಇದಾದ ನಂತರ ಅಂದರೆ ಸ್ವಾತಂತ್ರ್ಯದ ನಂತರ, ಅವುಗಳನ್ನು ಅಂದಿನ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರು ರಾಜಭವನಗಳು ಎಂದು ಮರುನಾಮಕರಣ ಮಾಡಿದರು ಎನ್ನಲಾಗಿದೆ. ಆದರೆ ಇದರ ಕುರಿತು ಯಾವುದೇ ರೀತಿಯ ದಾಖಲೆಗಳಿಲ್ಲ!
ಮುಂದುವರೆದು, ಭಾರತದಲ್ಲಿ ರಾಜ್ಯಪಾಲರ ನಿವಾಸವನ್ನು ಲೋಕ ಭವನ ಎಂದು ಮರುನಾಮಕರಣ ಮಾಡಲಾಗುತ್ತಿದೆ. ಹೌದು, ಕೇಂದ್ರ ಸರ್ಕಾರವು ರಾಜಭವನವು ವಸಾಹತುಶಾಹಿ ಪ್ರತಿಧ್ವನಿಗಳನ್ನು ಪ್ರತಿಬಿಂಬಿಸುತ್ತದೆ ಎಂದು ರಾಜಭವನವನ್ನ ಲೋಕಭವನ ಎಂದು ಹೆಸರಿಸಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರವು ಭವನವು ಸಾರ್ವಜನಿಕರಿಗೆ ಮುಕ್ತ ಮತ್ತು ಮಾನವೀಯವಾಗಿರಬೇಕು ಎಂದು ಬಯಸುತ್ತದೆ. ಹಾಗಾಗಿ, ಕೇಂದ್ರ ಗೃಹ ಇಲಾಖೆಯು ನವೆಂಬರ್ 25, 2025 ರಂದು ದೇಶದ ಎಲ್ಲಾ ರಾಜ್ಯಗಳ ರಾಜ್ಯಪಾಲರು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳಿಗೆ ಪತ್ರ ಬರೆದು, ರಾಜಭವನಗಳನ್ನು ಲೋಕ ಭವನ ಎಂದು ಮರುನಾಮಕರಣ ಮಾಡುವಂತೆ ಶಿಫಾರಸ್ಸು ಮಾಡಿತು. ಅದರಂತೆ, ಪಶ್ಚಿಮ ಬಂಗಾಳದಲ್ಲಿ ಮೊದಲಿಗೆ ಈ ಉಪಕ್ರಮವನ್ನ ಜಾರಿ ಮಾಡಿ, ಕೋಲ್ಕತ್ತಾ ಮತ್ತು ಡಾರ್ಜಿಲಿಂಗ್‌ನಲ್ಲಿರುವ ರಾಜಭವನಗಳನ್ನು ಲೋಕ ಭವನ ಎಂದು ಮರುನಾಮಕರಣ ಮಾಡಲಾಯಿತು. ಏತನ್ಮಧ್ಯೆ, ಕೇಂದ್ರ ಗೃಹ ಇಲಾಖೆಯ ಈ ಶಿಫಾರಸುನ್ನು ಈಗಾಗಲೇ ಎಂಟು ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ.
ಪ್ರಶ್ನೆ: ಹಾಗಾದ್ರೆ ಎಷ್ಟು ರಾಜ್ಯಗಳಲ್ಲಿ ರಾಜಭವನದ ಹೆಸರನ್ನು ಲೋಕ ಭವನ ಎಂದು ಬದಲಾಯಿಸಲಾಗಿದೆ?
ನ್ಯೂಸ್ 18 ಹಿಂದಿ ವರದಿ ಮಾಡಿದಂತೆ, ಈಗಾಗಲೇ ಎಂಟು ರಾಜ್ಯಗಳಲ್ಲಿ ರಾಜಭವನಗಳನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದೆ. ಆದಾಗ್ಯೂ, ಈ ಪ್ರಕ್ರಿಯೆಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಜಾರಿಗೆ ತರಲಾಗುತ್ತದೆ ಎನ್ನಲಾಗಿದ್ದು, ಈಗಾಗಲೇ ಜಾರಿಗೆ ತಂದಿರುವ ರಾಜ್ಯಗಳು ಪಟ್ಟಿ ಇಲ್ಲಿದೆ:
- ಪಶ್ಚಿಮ ಬಂಗಾಳ (ಕೋಲ್ಕತ್ತಾ ಮತ್ತು ಡಾರ್ಜಿಲಿಂಗ್ ರಾಜಭವನಗಳು)
- ತಮಿಳುನಾಡು
- ಕೇರಳ
- ಅಸ್ಸಾಂ
- ಉತ್ತರಾಖಂಡ (ಡೆಹ್ರಾಡೂನ್ ಮತ್ತು ನೈನಿತಾಲ್)
- ಒಡಿಶಾ
- ಗುಜರಾತ್
- ತ್ರಿಪುರ
- ಇದಲ್ಲದೆ, ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ, ಲೆಫ್ಟಿನೆಂಟ್ ಗವರ್ನರ್ ಅವರ ರಾಜಭವನವನ್ನು ಲೋಕ ನಿವಾಸ್ ಎಂದು ಮರುನಾಮಕರಣ ಮಾಡಲಾಗಿದೆ.




















