ಪಲ್ಲೆಕೆಲೆ: ಏಷ್ಯಾಕಪ್ 2023ರ (Asia Cup 2023) ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಅತ್ಯಂತ ಕಳಪೆ ಫೀಲ್ಡಿಂಗ್ ಮಾಡಿತು. ಅರಂಭಿಕ 26 ಎಸೆತಗಳ ಒಳಗೆ ಮೂರು ಬಾರಿ ಕ್ಯಾಚ್ ಬಿಡುವ ಮೂಲಕ ಭಾರತ ತಂಡ ಟೀಕೆಗೆ ಒಳಗಾಯಿತು. ಇದರಲ್ಲೊಂದು ಸುಲಭ ಕ್ಯಾಚ್ ಬಿಟ್ಟವರು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ. ಈ ಕ್ಯಾಚ್ಗಳು ಭಾರತದ ಪಾಲಿಗೆ ಹಿನ್ನಡೆ ಉಂಟು ಮಾಡಿದವು. ಇಷ್ಟೆಲ್ಲ ಅಪಹಾಸ್ಯಕ್ಕೆ ಒಳಗಾದ ನಡುವೆಯೂ ವಿರಾಟ್ ಕೊಹ್ಲಿ ನೇಪಾಳಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಶಾರ್ಟ್ ಕವರ್ನಲ್ಲಿ ವಿರಾಟ್ ಕೊಹ್ಲಿ ಸುಲಭ ಕ್ಯಾಚ್ ಕೈಬಿಟ್ಟಿದ್ದರಿಂದ ಭಾರತೀಯ ಅಭಿಮಾನಿಗಳಿಗೆ ಬೇಸರ ಉಂಟಾಯಿತು. ಈ ಕ್ಯಾಚ್ ಡ್ರಾಪ್ ನಂತರ ನೇಪಾಳದ ಆಟಗಾರ ಆಸಿಫ್ ಶೇಖ್ ಅರ್ಧಶತಕ ಗಳಿಸಿ ತಮ್ಮ ತಂಡದ ಇನ್ನಿಂಗ್ಸ್ ಅನ್ನು ಮುನ್ನಡೆಸಿದರು.
ಕೊಹ್ಲಿ ಅಂತಿಮವಾಗಿ 30 ನೇ ಓವರ್ನಲ್ಲಿ ಶೇಖ್ ಅವರ ಇನಿಂಗ್ಸ್ಗೆ ತರೆ ಎಳೆದರು. ಅಸಾಧಾರಣ ಒಂದು ಕೈ ಕ್ಯಾಚ್ ತೆಗೆದುಕೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಭಾರತದ ಮಾಜಿ ನಾಯಕ ಶೇಖ್ ಅವರ ಬ್ಯಾಟ್ನಿಂದ ಎತ್ತರಕ್ಕೆ ಜಿಗಿದಿದ್ದ ಚೆಂಡನ್ನು ಹಿಡಿಯಲು ಸಿಕ್ಕಾಪಟ್ಟೆ ಕಷ್ಟಪಟ್ಟರು. ಅದೇ ಸ್ಥಾನದಲ್ಲಿ ಅವರು ಈ ಹಿಂದೆ ಕ್ಯಾಚ್ ಬಿಟ್ಟಿದ್ದರು.
ಅದಕ್ಕಿಂತ ಮೊದಲು ಹತ್ತನೇ ಓವರ್ನಲ್ಲಿ ಎದುರಾಳಿ ತಂಡದ ಮೊದಲು ವಿಕೆಟ್ ಪಡೆಯಲು ಯಶಸ್ವಿಯಾದ ನಂತರ ಭಾರತೀಯ ಆಟಗಾರರು ನಿರಾಳರಾದರು. ಅದರಲ್ಲೂ ವಿರಾಟ್ 14 ನೇ ಓವರ್ ಮುಗಿದ ನಂತರ ನೇಪಾಳಿ ಕುತು ಮಾ ಕುತುಗೆ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಿರುವು ಕೊಟ್ಟ ಜಡೇಜಾ
ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಕೇವಲ ನಾಲ್ಕು ರನ್ಗೆ ವಿರಾಟ್ ಕೊಹ್ಲಿ ಔಟಾಗಿದ್ದರು. ಶಾಹೀನ್ ಅಫ್ರಿದಿ ವಿರುದ್ಧ ತಮ್ಮ ದೌರ್ಬಲ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದರು ಕೊಹ್ಲಿ. ಆರಂಭಿಕ ಪಂದ್ಯದಲ್ಲಿ ಛಾಪು ಮೂಡಿಸಲು ವಿಫಲವಾದ ಕೊಹ್ಲಿ, ನೇಪಾಳ ವಿರುದ್ಧ ದೊಡ್ಡ ಶತಕ ಗಳಿಸುವ ಹಸಿವಿನಲ್ಲಿದ್ದಾರೆ.
ನಿಯಮಿತ ವಿರಾಮಗಳಲ್ಲಿ ವಿಕೆಟ್ಗಳನ್ನು ಕಳೆದುಕೊಂಡರೂ, ನೇಪಾಳದ ಬ್ಯಾಟರ್ಗಳು ತಮ್ಮ ಮೊತ್ತಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸಿದರು. 48.2 ಓವರ್ಗಳಲ್ಲಿ 230 ರನ್ ಮಾಡಿ ಆಲ್ಔಟ್ ಆದರು. ಭಾರತದ ಪರ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರು.
ಬರ ತಾಲೂಕು ಘೋಷಣೆ 1 ವಾರ ಮುಂದಕ್ಕೆ; 134 ತಾಲೂಕಲ್ಲಿ ಮತ್ತೆ ಜಂಟಿ ಸಮೀಕ್ಷೆ!