ನ್ಯಾಯಾಲಯದ ತೀರ್ಪು ನ್ಯಾಯದ ಪರವಾಗಿದ್ದು ಸ್ವಾಗತಾರ್ಹ: ತೀರ್ಪನ್ನು ಗೌರವಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಲಿ: ಡಾ.ವೀರಣ್ಣ ಚರಂತಿಮಠ*
ಬಾಗಲಕೋಟೆ
ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಇಂದು ಹೈಕೋರ್ಟ ಎತ್ತಿ ಹಿಡಿದಿದ್ದು, ತೀರ್ಪು ನ್ಯಾಯದ ಪರವಾಗಿದ್ದು ಸ್ವಾಗತಾರ್ಹವಾಗಿದೆ, ನ್ಯಾಯಾಲಯದ ತೀರ್ಪನ್ನು ಗವರವಿಸಿ ನೈತಿಕ ಹೊಣೆ ಹೋತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಲಿ ಎಂದು ಡಾ.ವೀರಣ್ಣ ಚರಂತಿಮಠ ಅವರು ಹೇಳಿದರು.
ಭಾರತೀಯ ಜನತಾ ಪಾರ್ಟಿ, ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ಗ್ರಾಮೀಣ ಮಂಡಲವತಿಯಿಂದ ಮಂಗಳವಾರ ಅಮೀನಗಡ ಪಟ್ಟಣದಲ್ಲಿ ಹಮ್ಮಿಕೊಂಡ ಬಿಜೆಪಿ ಮಹಾಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಹೈಕೋರ್ಟ ನೀಡಿದ ತೀರ್ಪು ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಮತ್ತೊಮ್ಮೆ ಎತ್ತಿಹಿಡಿದಿದೆ,
ಸಿದ್ದರಾಮಯ್ಯನವರ ಅರ್ಜಿಯನ್ನು ವಜಾಮಾಡಿದ ರಾಜ್ಯ ಉಚ್ಚನ್ಯಾಯಾಲಯ ರಾಜ್ಯಪಾಲರ ಕೊಟ್ಟಿದ್ದ ಪ್ರಾಸಿಕ್ಯೂಶೇನ್‌ಗೆ ಅನುಮತಿ ನೀಡಿದ್ದು, ಅದು ಕಾನೂನ ಬದ್ದವಾಗಿದೆ ಎಂಬ ಅಂಶವನ್ನು ರಾಜ್ಯ ಉಚ್ಚನ್ಯಾಯಾಲಯ ಹೇಳಿದೆ, ಪ್ರಮುಖವಾಗಿ ನ್ಯಾಯಾಧೀಶರು ಉಲ್ಲೇಖ ಮಾಡಿರುವುದು ಕಾನೂನಿನ ಎದರೂ ಎಲ್ಲರು ಒಂದೆ ಅನ್ನುವ ಅಂಶವನ್ನು ರಾಜ್ಯ ಉಚ್ಚನ್ಯಾಯಾಲಯ ಹೇಳಿರುವಂತದ್ದು ಈ ಉಚ್ಚ ನ್ಯಾಲಾಯದ ತಿರ್ಪನ್ನು ಗೌರವಿಸಿ ಮಾನ್ಯ ಮುಖ್ಯಂತ್ರಿಗಳು ರಾಜಿನಾಮೆ ನೀಡ ತನಿಖೆಗೆ ಸಹಕರಿಸಲಿ ಎಂದು ಒತ್ತಾಯಿಸಿದರು,
ಈ ಹಗರಣ ವಿರುದ್ದ ಬಿಜೆಪಿ ಪಾದಯಾತ್ರೆಮಾಡಿ ಜನರಲ್ಲಿ ಜಾಗೃತಿ ಮೂಡಿಸಿತ್ತು ಇಂದು ಅದಕ್ಕೆ ನ್ಯಾಯ ಸಿಕ್ಕಿದೆ ಎಂದರಲ್ಲದೆ ಮಹಾಸದಸ್ಯತಾ ಅಭಿಯಾನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ 80 ಸಾವಿರಕ್ಕಿಂತ ಹೆಚ್ಚು ಸದಸ್ಯರನ್ನು ನೊಂದಾಯಿಸುವ ಮೂಲಕ ದಾಖಲೆ ಮಾಡಬೇಕು ಎಂದರು.
ಮುಖಂಡರಾದ ಡಾ.ಎಂ.ಎಸ್.ದಡ್ಡೆನ್ನವರ ಮಾತನಾಡಿ ಇಂದು ದೇಶದಲ್ಲಿ ಮೋದಿಯಿಂದಾಗಿ ದೇಶ ಸುಭದ್ರವಾಗಿದೆ, ದೇಶದ ಸರ್ವಾಂಗಿಣ ಅಭಿವೃದ್ಧಿಗೆ ಬಿಜೆಪಿ ಆಡಳಿತ ಅವಶ್ಯಕವಾಗಿದ್ದೆ, ದೇಶದ ಅಭಿವೃದ್ಧಿಗೋಸ್ಕರ ಬಿಜೆಪಿ ಸದಸ್ಯರಾಗಿ ಶಕ್ತಿ ತುಂಬಬೇಕಿದೆ ಎಂದರು.
ಪ್ರಸ್ತಾವಿಕ ಮಾತನಾಡಿದ ಅಭಿಯಾನದ ಪ್ರಭಾರಿ ಶಂಕರ ಹುನೂರ, ಅಭಿಯಾನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜು ಮುದೇನೂರ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರು, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಉಮಾಶ್ರೀ ಹಣಗಿ, ಲಕ್ಷ್ಮಣ ತಳವಾರ, ವಿಜಯಕುಮಾರ ಕೊಣ್ಣುರ, ಯಮನಪ್ಪ ಕತ್ತಿ, ಸಂತೋಷ ಐಹೊಳೆ, ಬಸವರಾಜ ಬೇವೂರ, ಗುರುನಾಥ ಚಳ್ಳಮರದ,ಪುಷ್ಪಾ ಮುಳ್ಳುರ, ಸುಜಾತಾ ತತ್ರಾಣಿ, ಜ್ಯೋತಿ ತುಂಬಗಿ,ಸಂಗಪ್ಪ ತಳವಾರ, ಪುಂಡಲಿಕ್ಕಪ್ಪ ಮೂಲಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.