ಬಾಗಲಕೋಟೆ
ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಲ್ಲಿ ಹೊಲಿಗೆಯಂತ್ರ, ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆಗಳ ಸರಬರಾಜು ಯೋಜನೆಯಲ್ಲಿ ಬಡಿಗತನ, ಕ್ಷೌರಿಕ, ಧೋಬಿ, ವಿಶೇಷ ಘಟಕ ಯೋಜನೆಯಲ್ಲಿ ಹೊಲಿಗೆಯಂತ್ರ, ಮತ್ತು ಗಿರಿಜನ ಉಪಯೋಜನೆಯಡಿ ಹೊಲಿಗೆಯಂತ್ರಗಳನ್ನು ಗ್ರಾಮೀಣ ಪ್ರದೇಶದವರಿಗೆ ನೀಡಲು ಅರ್ಹ ಫಲಾನುವಿಗಳಿಂದ ಅಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಡಿಸೆಂಬರ ೬ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ, ಕಛೇರಿಯ ದೂಸಂ.೦೮೩೫೪-೨೨೩೭೪೪ ಅಥವಾ ಸಂಬಂಧಪಟ್ಟ ತಾಲೂಕಿನ ಕೈಗಾರಿಕ ವಿಸ್ತರಣಾಧಿಕಾರಿ ಬಾಗಲಕೋಟೆ ಇಲಕಲ್ ಮತ್ತು ಹುನಗುಂದ (೮೩೧೭೪೩೭೪೭೫), ಜಮಖಂಡಿ, ರಬಕವಿ,-ಬನಹಟ್ಟಿ, ಗುಳೇದಗುಡ್ಡ ಮತ್ತು ಬಾದಾಮಿ (೭೭೬೦೦೦೭೦೮೦) ಬೀಳಗಿ ಮತ್ತು ಮುಧೋಳ (೯೬೨೦೭೨೧೭೨೯)ಗೆ ಸಂಪರ್ಕಿಸಿ ಇಲ್ಲವೇ, ಜಿಲ್ಲಾ ಪಂಚಾಯತ ಕೈಗಾರಿಕಾ ವಿಭಾಗ, ಕೊಠಡಿ ಸಂಖ್ಯೆ ೨೩೯, ೩ನೇ ಮಹಡಿ ಜಿಲ್ಲಾಡಳಿತ ಭವನ ಬಾಗಲಕೋಟೆಗೆ ಬೇಟಿ ನೀಡಿ ಎಂದು ಜಿಲ್ಲಾ ಪಂಚಾಯತ ಕೈಗಾರಿಕಾ ವಿಭಾಗ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.