This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local NewsPolitics NewsState News

ವಿಜಯಪುರದಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿಕೆ

ವಿಜಯಪುರದಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿಕೆ

ವಿಜಯಪುರ

*ಯುಕೆಪಿ 3ನೇ ಹಂತದ ವಿಚಾರ.*

ನಾವು ಆಲಮಟ್ಟಿ ಎತ್ತರ 519ಮೀಟರನಿಂದ 524 ಮೀಟರ ಎತ್ತರ ಮಾಡುವುದರ ಪರವಿದ್ದೇವೆ, ಅದು ನಮ್ಮ ನಿಲುವು.

ಆದರೆ ಆಂದ್ರಪ್ರದೇಶ, ತೆಲಂಗಾಣ ದವರು ಸುಪ್ರೀಂ ಕೋರ್ಟ್ ಗೆ ಅಪೀಲು ಹಾಕಿದ್ದಾರೆ. ಅದನ್ನು ಕೇಂದ್ರ ಸರ್ಕಾರ ಇತ್ಯರ್ಥ ಮಾಡುವ ಕೆಲಸ ಮಾಡಬೇಕು.

*ಆಮಲಟ್ಟಿಗೆ ಅನುದಾನ ವಿಚಾರ.*

ಇದರ ಕುರಿತು ಸೋಮವಾರ ಮೀಟಿಂಗ ಕರೆದು ಚರ್ಚೆ ಮಾಡುತ್ತೇವೆ ಎಂದರು.

*ಪಂಚಮಸಾಲಿ ಹೋರಾಟ ವಿಚಾರ.*

ಅವರು ಹೋರಾಟ ಮಾಡಲು ನಮ್ಮದು ತಕರಾರಿಲ್ಲ, ಆದರೆ ಹೋರಾಟ ಸಂವಿಧಾನದ ರೀತಿ ಇರಬೇಕು.ಪಂಚಮಸಾಲಿ ಹೋರಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ.

2ಡಿ ಕೊಟ್ಟು ಬಳಿಕ ಹೈಕೋರ್ಟ್ ಗೆ ಅಫಿಡೆವಿಟ್ ಹಾಕಿದವರ್ಯಾರು? ೨೩.೩.೨೦೨೩ರಲ್ಲಿ ಅಫಿಡಿವಿಟಗ ಹಾಕಿದಾರೆ.
ಆಗ ಇದೇ ಸ್ವಾಮೀಜಿ ಇದ್ದರು.
೨೭.೩.೨೦೨೩ರಲ್ಲಿ ೨ಡಿ ಮಾಡಿದಾರೆ.
೩ಬಿ ನಲ್ಲಿ ಪಂಚಮಸಾಲಿಗಳಿದ್ದಾರೆ.

ಹಿಂದುಳಿದ ವರ್ಗದಲ್ಲಿ ಎಷ್ಟು ಜಾತಿ ಇವೆ ಗೊತ್ತಾ? ಅದರಲ್ಲಿ ನಾಲ್ಕು ಕಟೆಗೆರಿ ಇವೆ.೧ಎ ನಲ್ಲಿ ಮೋಸ್ಟ್ ಬ್ಯಾಕವರ್ಡ್, ೨ಎನಲ್ಲಿ ಕೋರ್ ಬ್ಯಾಕವರ್ಡ್, ೩ಎನಲ್ಲಿ ಒಕ್ಲಲಿಗರು, ೩ಬಿ ನಲ್ಲಿ ಲಿಂಗಾಯತರು ಇತರ ಲಿಙಗಾಯತರು ಬರುತ್ತಾರೆ. ೨೦೦೨ರಲ್ಲಿ ಕೃಷ್ಣ ಸಿಎಂ ಇದ್ದಾಗ ಇದೆಲ್ಲ ಆಗಿದೆ.

೧೯೯೨ರಲ್ಲಿ ಮೊಯ್ಲಿ ಸಿಎಂ ಇದ್ದಾಗ ಮುಸ್ಲಿಂರಿಗೆ ೨ಬಿ ಮಾಡಿದ್ದು, ಕುಸ್ಲಿಂ ಅವರು ಅದರಲ್ಲಿ ಬರುತ್ತಾರೆ.ಬಳಿಕ ಬಿಜೆಪಿಯವರು ಮುಸ್ಲಿಂನವರಿಗೆ ಕೊಟ್ಟಿದ್ದನ್ನು ರದ್ದು ಮಾಡಿ ೨ಸಿ, ೨ಡಿ ಮಾಡಿ ಅದರಲ್ಲಿನ ೪ಪರ್ಸೆಂಟ್ ತೆಗೆದು ಇವರಿಗೆ ಕೊಟ್ಟಿದಾರೆ.

ಆಗ ಯಾಕೆ ಇವರು ಪ್ರತಿಭಟನೆ ಮಾಡಲಿಲ್ಲ. ಈಗ ಅದೇ ಸರ್ಕಾರದವರು ಇವರ ಜೊತೆ ಸಪೋರ್ಟ್ ಮಾಡ್ತಿದಾರೆ. ಮುಸ್ಲಿಂ ಮೀಸಲಾತಿ ಕಸಿದುಕೊಂಡಿದ್ದನ್ನು ಪ್ರಶ್ನಿಸಿದ ರಸೂಲ್ ಎನ್ನುವವರು ಸುಪ್ರೀಂಕೋರ್ಟ್ ಗೆ ಹೋದರು.

ಆಗ ಅಲ್ಲಿ ಇವರ ಪರ ಲಾಯರ್ ಅವರು ನಾವು ಯಾವ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಅಡ್ಮಿಟ್ ಮಾಡಿಕೊಂಡಿರುವವರು ಯಾರು?. ಈಗ ಯಾಕೆ ಸಪೋರ್ಟ್ ಮಾಡ್ತಾರೆ?.

ಪಂಚಮಸಾಲಿ ಹೋರಾಟದ ವಿಚಾರಗಾಗಿ ನಾನು ಎರಡು ಬಾರಿ ಸಭೆ ಮಾಡಿದ್ದೇನೆ. ಕಾನೂನು ಪ್ರಕಾರ ಹೊಗೋಣ ಎಂದೆ. ಬ್ಯಾಕವರ್ಡ್ ಜೊತೆ ಹೋಗಿ ಎಂದರು ಕೇಳಲಿಲ್ಲ. ನಾವು ಚಳುವಳಿ ಮಾಡ್ತೆವೆ ಎಂದರು ಮಾಡಿ ಎಂದೆ, ಕೋರ್ಟ್ ಕೂಡ ಶಾಂತಿಯುತವಾಗಿ ಹೋರಾಟ ಮಾಡಿ ಎಂದರು.

ಅವರು ಶಾಂತಿಯಿಂದ ಮಾಡುವ ಬದಲು ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ನಾನು ಮೂವರು ಸಚಿವರಾದ ಮಹಾದೇವಪ್ಪ, ಸುಧಾಕರ, ವೆಂಕಟೇಶ ಅವರನ್ನು ಕಳಿಸಿದ್ದೆ. ಅವರು ಸಿಎಂ ಜೊತೆ ಮಾತಾಡಲು ಬನ್ನಿ ಎಂದು ಕರೆದರು ಇವರು ಬಂದಿಲ್ಲ.
ಹಲವಾರು ಗುಂಪುಗಳು ಚಳುವಳಿ ಮಾಡುತ್ತವೆ, ಸಿಎಂ ಎಲ್ಲಾಕಡೆ ಹೊಗೋಕೆ ಆಗುತ್ತಾ?

ಸಚಿವರು ಕರೆದರು ಬರಲ್ಲ ಎಂದು ಸುವರ್ಣ ಸೌಧಕ್ಕೆ ನುಗ್ಗುವುದು ಮಾಡಿದರು, ಕಲ್ಲು ಹೊಡೆದರು ಆಗ ತಡೆಯಬೇಕು ಅಲ್ವಾ?.
ಅವರು ಕಲ್ಲು ಹೊಡೆದಿದ್ದು, ನುಗ್ಗಿದ್ದು ನಾನು ಫೋಟೊ ತೋರಿಸ್ತೆನೆ.

ಅವರು ಕಲ್ಲು ಹೊಡೆಯದಿದ್ದರೆ ೨೦ಜನ ಪೊಲೀಸರಿಗೆ ಹೇಗೆ ಏಟು ಬಿತ್ತು, ಹೇಗೆ ಗಾಯ ಆಯ್ತು? ಪೊಲೀಸರು ಎಸೆದುಕೊಂಡ್ರಾ? ನಾನು ಹೇಳಿದ್ದಕ್ಕೆ ಎವೆಡೆನ್ಸ್ ಇದೆ.

ಅವರು ಖಾಯಂ ಬ್ಯಾಕವರ್ಡ್ ಕಮಿಷನ್ ಜೊತೆ ಹೋಗಬೇಕು. ಜಯಪ್ರಕಾಶ ಹೆಗಡೆ ಹೇಳಿದಂತೆ ಹೋಗಬೇಕಿದೆ. ಯಾರೂ ಕೂಡ ಕಾನೂನು ಕೈಗೆ ತೆಗದುಕೊಳ್ಳಬಾರದು.

ಕಾಂತರಾಜು ವರದಿ ಸರ್ಕಾರ ತೆಗೆದುಕೊಂಡಿದೆ. ಕ್ಯಾಬಿನೆಟ್ ಮುಂದೆ ತಂದು ಚರ್ಚೆ ಮಾಡುತ್ತೇವೆ. ಸ್ವಾಮೀಜಿಗಳ ಬಗ್ಗೆ ನಾನು ಮಾತನಾಡಲ್ಲ. ಅದನ್ನು ಜನರು ತೀರ್ಮಾನ ಮಾಡುತ್ತಾರೆ. ಎಲ್ಲರಿಗೂ ಕಾನೂನು ಒಂದೇ.

*ಕೆಲವರಿಂದ ೨ಎ ಸೇರಿಸಬೇಡಿ ಎಂದು ವಿರೋಧ ವಿಚಾರ*

ಅವರ ಅಭಿಪ್ರಾಯ ಹೆಳೋಕೆ ಅವರಿಗೆ ಸ್ವಾತಂತ್ರ್ಯ ಇದೆ, ಸಂವಿಧಾನ ಏನು ಹೇಳುತ್ತೇ ಅದನ್ನು ಸರ್ಕಾರ ಮಾಡುತ್ತದೆ ಎಂದರು.

Nimma Suddi
";