ಪೌಷ್ಟಿಕಾಂಶಯುಕ್ತ ಆಹಾರ, ಸರಿಯಾದ ನಿದ್ದೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದ್ದು, ಎಷ್ಟೇ ಆರೋಗ್ಯವಂತ ವ್ಯಕ್ತಿಯಾದರೂ ಆತನಿಗೆ ಆಯಾಸ ಹಾಗೂ ಸುಸ್ತು ಆಗುವುದು ಸರ್ವೇ ಸಾಮಾನ್ಯ. ಆದರೆ, ಕೆಲವರಿಗೆ ಅತಿಯಾದ ಆಯಾಸವಾಗುವುದಿದೆ. ಅಂತಹವರು ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಬಹುದು.ಆಯಾಸ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ
ಆಯಾಸವಾದಾಗ ಸಕ್ಕರೆ ನೀರು ಕುಡಿದರೆ ಬಹುಬೇಗನೆ ಆಯಾಸವು ಕಡಿಮೆಯಾಗುತ್ತದೆ.
ಆಯಾಸವಾಗುವವರು ಬೆಲ್ಲದ ನೀರಿಗೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯುವುದು ಒಳ್ಳೆಯದು.
ಒಂದು ಲೋಟ ಹಾಲಿಗೆ ಎರಡು ಚಮಚ ಮುಸುಕಿನ ಜೋಳದ ಎಲೆಗಳನ್ನು ಹಾಕಿ ಕುದಿಸಿ, ಇದನ್ನು ಕುಡಿದರೆ ಆಯಾಸ ನಿವಾರಣೆಯಾಗುತ್ತದೆ.
ಅರ್ಧ ಚಮಚ ಅಲೋವೆರಾ ಜೆಲ್ ಗೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಬೆರೆಸಿ ಸೇವಿಸಿದರೆ ಉತ್ತಮ.
ಕಬ್ಬಿನ ರಸವನ್ನು ಹಿತ-ಮಿತವಾಗಿ ಕುಡಿದರೆ ಆಯಾಸ ಪರಿಹಾರವಾಗಿ ಲವಲವಿಕೆಯಿಂದ ಇರಲು ಸಾಧ್ಯ.
ಮೂಸಂಬಿ ಹಣ್ಣಿನ ಜ್ಯೂಸ್ ಮಾಡಿಕುಡಿದರೆ ಆಯಾಸವು ದೂರವಾಗುತ್ತದೆ.
ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದರ ರಕ್ತವೃದ್ಧಿ ಆಗುವುದರೊಂದಿಗೆ ದಣಿವು ನಿವಾರಣೆಯಾಗುತ್ತದೆ.
ಕೆಂಪು ಮೂಲಂಗಿಯನ್ನು ತುರಿದು, ಕೋಸುಂಬರಿ ಮಾಡಿ ಸೇವಿಸುವುದ ರಿಂದ ಆಯಾಸವು ದೂರವಾಗುತ್ತದೆ.
ಹಸಿಯ ಅಳಸುಂಡೆ ಕಾಳನ್ನು ಬೆಲ್ಲದೊಂದಿಗೆ ಚೆನ್ನಾಗಿ ಅಗಿದು ತಿಂದರೆ ಆಯಾಸ ಪರಿಹಾರ ಆಗುವುದು.
ಗರಿಕೆ ಹುಲ್ಲಿನ ರಸವನ್ನು ಕುಡಿದರೆ ದಣಿವು ನಿವಾರಣೆಯಾಗುತ್ತದೆ.
ಆಯಾಸ ಎನ್ನುವವರು ಕಲ್ಲಂಗಡಿ ಹಾಗೂ ಖರ್ಬೂಜದ ಹಣ್ಣಿನ ಜ್ಯೂಸ್ ಕುಡಿಯುವುದು ಸೂಕ್ತ.