ಪ್ರತಿಭಾ ಪುರಸ್ಕಾರ ಸಮಾರಂಭ
ಬಾಗಲಕೋಟೆ
ಸಮುದಾಯದಲ್ಲಿ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಪ್ರಜ್ಞೆ ಬರಬೇಕಿದ್ದು ಅದಕ್ಕೆ ಶಿಕ್ಷಣ ಪಡೆಯುವುದು ಅವಶ್ಯವಾಗಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಹೇಳಿದರು.
ನವನಗರದ ಕಲಾಭವನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದಿಂದ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ರಂಗದಲ್ಲೂ ಪ್ರಗತಿ ಹೊಂದಲು ಸಂಘಟನೆ ಹೋರಾಟ ಸರಿಯಾದ ಹಾದಿಯಲ್ಲಿರಬೇಕು. ಅದಕ್ಕೆ ಶಿಕ್ಷಣ ಅತಿ ಅವಶ್ಯವಾಗಿದ್ದು ತಪ್ಪದೆ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಹಾಲಮತ ಸಮಾಜದವರು ಮೊದಲು ಕುರುಬರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದೆವು. ಆದರೆ ಸಿದ್ದರಾಮಯ್ಯ ಸಿಎಂ ಆದ ನಂತರ ನಾವೆಲ್ಲ ಕುರುಬರು ಎಂದು ಹೆಮ್ಮೆ ಪಡುತ್ತಿದ್ದೇವೆ. ಸಂಘಟನೆ, ಹೋರಾಟದ ಫಲವಾಗಿ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದಾರೆ. ಅವರು ಸಮುದಾಯಕ್ಕೆ ರೋಲ್ ಮಾಡಲ್ ಇದ್ದಂತೆ. ದೆಹಲಿಯಲ್ಲಿ ಕೇಂದ್ರ ಸಚಿವರೊಬ್ಬರನ್ನು ಭೇಟಿ ಆಗಲು ತೆರಳಿದಾಗ ಕೊಪ್ಪಳ ಕ್ಷೇತ್ರ ಎಂದಾಕ್ಷಣ ಅವರು ನೀವು ಸಿದ್ದರಾಮಯ್ಯ ಅವರ ಕ್ಯಾಂಡಿಡೇಟ್ ಅಲ್ಲವೆ ಎಂದರು. ಅಷ್ಟು ಪ್ರಭಾವ ಸಿದ್ದರಾಮಯ್ಯ ಅವರದಿದೆ. ವಿದ್ಯಾರ್ಥಿಗಳು ಆರಂಭದಿAದಲೇ ಉತ್ತಮ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿö್ಮ ಚೌದರಿ, ನನಗೂ ಸಿಎಂ ಆಗಬೇಕೆಂಬ ಕನಸಿದೆ. ಬದುಕಿನಲ್ಲಿ ಅವಕಾಶ ದೊರೆತರೆ ಈ ರಾಜ್ಯದ ಚುಕ್ಕಾಣೆ ಹಿಡಿಯಲು ಸಿದ್ದಳಾಗಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ಬಡವರ, ನಿರಾಶ್ರಿತರ, ದೀನದಲಿತರ ಪರ ಕಾಳಜಿಯುಳ್ಳವರು. ಅವರಂತೆ ಜನರ ಶ್ರೇಯಸ್ಸು ಬಯಸಲು ರಾಜಕಾರಣಿಯಾಗಬೇಕು. ಆವರ ಜೀವನ ನಮಗೆಲ್ಲ ಮಾದರಿ ಇದ್ದಂತೆ. ಕನಸು ಸಹಜ ಆದರೆ ಕನಸಿನಂತೆ ಗುರಿ ಸಾಧನೆಗೆ ಶ್ರಮ ಪಡಬೇಕು. ತಂದೆ-ತಾಯಿ, ನಿಮ್ಮೂರನ್ನು ಮರೆಯದೆ ಅವರ ಋಣ ತೀರಿಸಲು ಮುಂದಾಗಬೇಕು ಎಂದು ಹೇಳಿದರು.
ಶಿರೂರಿನ ಕನಕ ಬ್ರಹ್ಮವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ, ಸೀತಿಮನಿಯ ಶ್ರದ್ಧಾನಂದ ಪೀಠದ ಬ್ರಹ್ಮಶ್ರೀ ವೈಶಿಷ್ಠಮುನಿ, ಬಾದಿಮನಾಳದ ಶಿವಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ಸಿದ್ದಾಪೂರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ, ಡಾ.ಎಚ್.ಡಿ.ಪಾಟೀಲ, ಕೆಎಂಎಫ್ ಅಧ್ಯಕ್ಷ ಈರನಗೌಡ ಕರಿಗೌಡರ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರಕ್ಷಿತಾ ಈಟಿ, ಡಾ.ಕಿರಣಕುಮಾರ ಕುಳಗೇರಿ, ಸಂಗಣ್ಣ ಹಂಡಿ, ಎಂ.ಎಲ್.ಶಾAತಗೇರಿ, ಬಸವಂತಪ್ಪ ಅಂಟರತಾನಿ, ನಗರಸಭೆ ಸದಸ್ಯರಾದ ಶಾಂತಾ ಹನಮಕ್ಕನ್ನವರ, ಸರಸ್ವತಿ ಕುರುಬರ ಸೇರಿದಂತೆ ಸಮಾಜದ ಸದಸ್ಯರು ಇದ್ದರು.