ನವದೆಹಲಿ: ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಒಂದು ಕಾರಣವಾಗಿರುವ ಯುಪಿಐ ಈಗ ಬೇರೆ ಬೇರೆ ದೇಶಗಳಲ್ಲಿ ಬಳಕೆಯಾಗತೊಡಗಿದೆ. ಸಿಂಗಾಪುರದಲ್ಲಿ ಚಲಾವಣೆಯಲ್ಲಿರುವ ಯುಪಿಐ ಸೇವೆ ಈಗ ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲೂ ಲಭ್ಯ ಇದೆ.
ಇಂದು ಸೋಮವಾರ ಈ ಎರಡು ದೇಶಗಳಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ ಸೇವೆ ಚಾಲನೆಗೊಂಡಿದೆ. ಇದರೊಂದಿಗೆ ಆ ದೇಶಗಳಿಗೆ ಪ್ರವಾಸ ಹೋಗುವ ಭಾರತೀಯರಿಗೆ, ಹಾಗೂ ಭಾರತಕ್ಕೆ ಪ್ರವಾಸ ಬರುವ ಆ ದೇಶದ ಜನರಿಗೆ ಹಣಕಾಸು ವಹಿವಾಟು ಮಾಡುವುದು ಸುಲಭವಾಗಲಿದೆ.ಶ್ರೀಲಂಕಾದಲ್ಲಿ ಡಿಜಿಟಲ್ ವಹಿವಾಟಿಗೆ ಲಂಕಾ ಪೇ (Lanka Pay) ಪ್ಲಾಟ್ಫಾರ್ಮ್ ಇದೆ. .
ಇನ್ನು ರುಪೇ ಕಾರ್ಡ್ ಜಾಗತಿಕವಾಗಿ ಮಾನ್ಯತೆ ಪಡೆಯುತ್ತಿದೆ. ಶ್ರೀಲಂಕಾ ಮತ್ತು ಮಾರಿಷಸ್ನಲ್ಲೂ ಈಗ ರುಪೇ ಕಾರ್ಡ್ ಬಳಸಿ ವಹಿವಾಟು ನಡೆಸಬಹುದು. ಇದು ಈ ಎರಡು ದೇಶಗಳ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ.‘ಮಾರಿಷಸ್ನಲ್ಲಿ ರುಪೇ ಕಾರ್ಡ್ ಸೇವೆ ವಿಸ್ತರಿಸುವುದರಿಂದ ಅಲ್ಲಿನ ಬ್ಯಾಂಕುಗಳು ರುಪೇ ಚೌಕಟ್ಟಿನಲ್ಲಿ ಕಾರ್ಡ್ಗಳನ್ನು ನೀಡಬಹುದು.
ಭಾರತ ಮತ್ತು ಮಾರಿಷಸ್ನಲ್ಲಿ ಇಂಥ ರುಪೇ ಕಾರ್ಡ್ ಬಳಕೆ ಸಾಧ್ಯವಾಗುತ್ತದೆ,’ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.2022ರ ಫೆಬ್ರುವರಿಯಲ್ಲಿ ಸಿಂಗಾಪುರದ ಪೇನೌ ಜೊತೆ ಯುಪಿಐ ಅನ್ನು ಜೋಡಿಸಲಾಗಿತ್ತು. ಈ ಮೂಲಕ ಸಿಂಗಾಪುರದಲ್ಲಿರುವ ಭಾರತೀಯರು ತಮ್ಮ ತವರೂರಿಗೆ ಹಣ ಕಳುಹಿಸುವುದು ಬಹಳ ಸುಲಭವಾಗಿದೆ.