ಕೆಲವು ಕಡೆಗಳಲ್ಲಿ ಹಸಿ ಪಪ್ಪಾಯಿಯನ್ನು ಸಲಾಡ್ ಮಾಡಿಕೊಂಡು ತಿನ್ನುವರು. ಇದು ಅಲ್ಲಿ ತುಂಬಾ ಜನಪ್ರಿಯ ಕೂಡ. ನಮ್ಮ ದೇಶದಲ್ಲಿ ಕೂಡ ಹಸಿ ಪಪ್ಪಾಯಿಯನ್ನು ಬಳಸಿಕೊಂಡು ಕೆಲವೊಂದು ಬಗೆಯ ಖಾದ್ಯಗಳನ್ನು ತಯಾರಿಸುವರು. ಹಸಿ ಪಪ್ಪಾಯಿಯಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ಆದರೆ ಇದನ್ನು ಗರ್ಭಿಣಿಯರು ಖಂಡಿತವಾಗಿಯೂ ಬಳಕೆ ಮಾಡಬಾರದು.
ಗರ್ಭಪಾತವಾಗುವ ಸಾಧ್ಯತೆಗಳು ಇರುವುದು. ಆದರೆ ಇಂದಿನ ದಿನಗಳಲ್ಲಿ ಹಸಿ ಪಪ್ಪಾಯಿ ಹಾಲಿನ ಬಳಕೆ ಬಗ್ಗೆ ವೈರಲ್ ವಿಡಿಯೋಗಳು ಹಾಗೂ ಸುದ್ದಿಗಳಿವೆ. ಇದರ ಬಗ್ಗೆ ಕೆಲವು ಗೊಂದಲಗಳುಪಪ್ಪಾಯಿ ಹಣ್ಣಿನಲ್ಲಿ ಇರುವಂತೆ ಇದರ ಹಾಲಿನಲ್ಲಿ ಕೂಡ ಹಲವಾರು ಬಗೆಯ ಪೋಷಕಾಂಶಗಳು ಇವೆ. ವಿಟಮಿನ್ ಸಿ ಇದರಲ್ಲಿ ಪ್ರಮುಖವಾಗಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುವುದು. ಅದೇ ರೀತಿಯಲ್ಲಿ ವಿಟಮಿನ್ ಎ ಅಂಶವು ದೃಷ್ಟಿಯನ್ನು ಸುಧಾರಿಸುವುದು.
ಪಪ್ಪಾಯದಲ್ಲಿ ವಿಟಮಿನ್ ಎ, ಸಿ ಮಾತ್ರವಲ್ಲದೆ, ಇ, ಫಾಲಟೆ, ಪೊಟಾಶಿಯಂ ಮತ್ತು ಡಯಟರಿ ಫೈಬರ್ ಅಂಶವು ಇದೆ. ಡಯಟರಿ ಫೈಬರ್ ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಣೆ ಮಾಡುವುದು. ಪೊಟಾಶಿಯಂ ದೇಹದಲ್ಲಿ ದ್ರವಾಂಶವನ್ನು ಸಮತೋಲನದಲ್ಲಿ ಇಡುವುದು ಮತ್ತು ಪಪೈನ್ ಕಿಣ್ವವು ಜೀರ್ಣಕ್ರಿಯೆ ಸುಧಾರಣೆ ಮಾಡುವುದು ಮತ್ತು ಸಂಪೂರ್ಣ ಆರೋಗ್ಯವನ್ನು ಕಾಪಾಡುವುದು.
ಹಸಿ ಪಪ್ಪಾಯಿಯಿಂದ ಪಡೆಯುವಂತ ಹಾಲನ್ನು ಲ್ಯಾಟೆಕ್ಸ್ ಎಂದು ಕರೆಯಲಾಗುತ್ತದೆ. ಇದನ್ನು ಪ್ರೋಟಿಯೋಲೈಟಿಕ್ ಕಿಣ್ವ ಪಪೈನ್ ಎಂದು ಕರೆಯಲಾಗುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವಂತಹ ಈ ಕಿಣ್ವವು ಉರಿಯೂ, ಜೀರ್ಣಕ್ರಿಯೆ ಇತ್ಯಾದಿಗಳಿಗೆ ಬಳಕೆ ಮಾಡಲಾಗುತ್ತದೆ.ಗಿಡದಲ್ಲಿ ಇರುವಂತಹ ಹಸಿ ಪಪ್ಪಾಯಿಗಳಿಗೆ ಉದ್ದವಾಗಿ ಗೆರೆಗಳನ್ನು ಎಳೆದು, ಅಲ್ಯೂಮಿನಿಯಂ ಟ್ರೇ ಮೂಲಕ ಹಾಲನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಸಂಗ್ರಹಿಸಿದ ಬಳಿಕ ಅದನ್ನು ಸಮರ್ಪಕ ರೀತಿಯಲ್ಲಿ ಸಂಸ್ಕರಿಸಿಕೊಂಡು ಬಳಿಕ ಹಲವಾರು ಚಿಕಿತ್ಸೆಗೆ ಬಳಸಲಾಗುತ್ತದೆ.