This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Entertainment News

Ui ಚಿತ್ರದ ಹಾಡಲ್ಲಿ ಉಪ್ಪಿ ಗುಮ್ಮಿದ್ದು ಯಾರಿಗೆ

Ui ಚಿತ್ರದ ಹಾಡಲ್ಲಿ ಉಪ್ಪಿ ಗುಮ್ಮಿದ್ದು ಯಾರಿಗೆ

ಬೆಂಗಳೂರು: ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ಅವರ ‘ಯುಐ’ ಸಿನಿಮಾ ಹೊಸ ಅಪ್‌ಡೇಟ್‌ಗಳೊಂದಿಗೆ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡುತ್ತಲೇ ಬಂದಿದೆ. ಇದೀಗ ಸಿನಿಮಾದ ಸಾಂಗ್‌ವೊಂದು ಔಟ್‌ ಆಗಿದೆ. ಅದರ ಮಾಹಿತಿ ನಿಮ್ಮ ಸುದ್ದಿ ಓದುಗರಿಗಾಗಿ ನೀಡಲಾಗುತ್ತಿದೆ.

ವಿಶೇಷ ಅಂದರೆ ಬೆಳ್ಳುಳ್ಳಿ ಕಬಾಬ್‌, ಕರಿಮಣಿ ಮಾಲೀಕ ಹೀಗೆ ಹಲವಾರು ಟ್ರೆಂಡ್‌ ರೀಲ್ಸ್‌ಗಳನ್ನೇ ಇಟ್ಟುಕೊಂಡು ಹಾಡನ್ನು ಕಂಪೋಸ್‌ ಮಾಡಲಾಗಿದೆ.

ಇನ್ನು ದರ್ಶನ್‌ ಅವರ ವಿವಾದಾತ್ಮಕ ಹೇಳಿಕೆಯಾದ ʻತಗಡುʼ, ಗುಮ್ಮಿಸ್ಕೋತಿಯಾ ಪದವನ್ನೂ ಹಾಡಿನಲ್ಲಿ ಬಳಕೆ ಮಾಡಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಸಾಂಗ್‌ ಸಖತ್‌ ಕಿಕ್‌ ನೀಡುತ್ತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್‌.

ಕ್ಯಾಚಿಯಾಗಿ ಮೂಡಿಬಂದ ʻUIʼ ಸಿನಿಮಾದ ಈ ಟ್ರೋಲ್‌ ಸಾಂಗ್‌ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಬೆಳ್ಳುಳ್ಳಿ ಕಬಾಬ್, ಕರಿಮಣಿ ಮಾಲೀಕ, ನಂದಿನಿ ರೀಲ್ಸ್‌, ಲಾರಿ ಡ್ರೈವರಾ, ಸುಂದರಿ ಸನ್ಯಾಸಿ, ಬಿಸಿ ರಾಗಿ ಮುದ್ದೆ ಹೀಗೆ ಈಗಿನ ಟ್ರೆಂಡ್‌ ರೀಲ್ಸ್‌ಗಳನ್ನೇ ಬಳಸಿಕೊಂಡು ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯಾ ರಂಗರಾಜನ್ ಹಾಡಿದರೆ, ನರೇಶ್ ಕುಮಾರ್ ಎಚ್.ಎನ್ ಅವರ ಸಾಹಿತ್ಯ ಈ ಹಾಡಿಗಿದೆ. ಇನ್ನು ದರ್ಶನ್‌ ಅವರ ವಿವಾದಾತ್ಮಕ ಹೇಳಿಕೆಯಾದ ತಗಡು, ಗುಮ್ಮಿಸ್ಕೊತೀಯಾ ಪದವನ್ನೂ ಹಾಡಿನಲ್ಲಿ ಬಳಕೆ ಮಾಡಲಾಗಿದೆ.

ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ, ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು‌ ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್‌ ಹಾಕಿ, ಮೈಕ್‌ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ʻತರ್ಲೆ ನನ್ಮಗʼ, ʻಆಪರೇಷನ್ ಅಂತʼ, ʻಶ್ʼ..!, ʻಓಂʼ, ʻಉಪ್ಪಿ-2ʼ, ʻಸೂಪರ್ʼ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ʻಉಪ್ಪಿ 2ʼ ನಂತರ ಬುದ್ಧಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ.

ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ʻಅವತಾರ್ 2′ ಸಿನಿಮಾಗೆ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

Nimma Suddi
";