This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Local NewsState News

ಕರುವಿಗಾಗಿ ಮಿಡಿದ ಹಸು

ಕರುವಿಗಾಗಿ ಮಿಡಿದ ಹಸು

ಕರುವಿಗಾಗಿ ಮಿಡಿದ ಹಸು

ಬಾಗಲಕೋಟೆ : ಅನಾರೋಗ್ಯಕ್ಕೀಡಾಗಿದ್ದ ಕರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತಾಯಿ ಹಸು ಹಿಂಬಾಲಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಮುಚಖಂಡಿ ಗ್ರಾಮದ ರಾಜು ಕಾಳೆಯವರ ಕರು ಅನಾರೋಗ್ಯಪೀಡಿತವಾಗಿತ್ತು. ನವನಗರದ ಪಶು ಆಸ್ಪತ್ರೆಗೆ ಕರುವನ್ನು ಗೂಡ್ಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು.

ಈ ಸಂದರ್ಭದಲ್ಲಿ ಮನೆಯಿಂದ ತಾಯಿ ಹಸು ಕೂಡ ವಾಹನ ಹಿಂಬಾಲಿಸಿತು. ವಾಹನ ನಿಧಾನವಾದಾಗ ಸುತ್ತಲೂ ಓಡಾಡಿ ಕರುವಿನ ಬಗ್ಗೆ ಕಾಳಜಿ ಮೆರೆಯಿತು.

ಹಸು ಹಿಂಬಾಲಿಸುತ್ತಿರುವುದನ್ನು ಗಮನಿಸಿದ ಮಾಲೀಕರು ವಾಹನವನ್ನು ನಿಧಾನವಾಗಿ ಚಲಾಯಿಸಿದರು. ನಂತರ ಆಸ್ಪತ್ರೆಯಲ್ಲಿ ಕರುವಿಗೆ ಚಿಕಿತ್ಸೆ ನೀಡಿದ ನಂತರ ಹಸು ವಾಹನ ಹಿಂಬಾಲಿಸಿ ಮನೆಗೆ ವಾಪಸ್ಸಾಯಿತು. ಹಸುವಿನ ಮಾತೃಪ್ರೇಮ ನೆರೆದವರನ್ನು ಮೂಕವಿಸ್ಮಿತರನ್ನಾಗಿಸಿತು.