This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Crime NewsNational NewsState News

ರಾಜಸ್ಥಾನ:ಮೂತ್ರಕೋಶದ ಕಲ್ಲಿಗೆ ಚಿಕಿತ್ಸೆಗೆಂದು ಹೋದ ಮಹಿಳೆಯ ಕೈಗೆ ಕಿಡ್ನಿ ತೆಗೆದುಕೊಟ್ಟ ವೈದ್ಯರು

ರಾಜಸ್ಥಾನ:ಮೂತ್ರಕೋಶದ ಕಲ್ಲಿಗೆ ಚಿಕಿತ್ಸೆಗೆಂದು ಹೋದ ಮಹಿಳೆಯ ಕೈಗೆ ಕಿಡ್ನಿ ತೆಗೆದುಕೊಟ್ಟ ವೈದ್ಯರು

ಮಹಿಳೆಯೊಬ್ಬರು ತುಂಬಾ ದಿನದಿಂದ ಹೊಟ್ಟೆನೋವಿನಿಂದ ನರಳುತ್ತಿದ್ದರು. ಎಕ್ಸ್​-ರೇ ಮಾಡಿಸಿದಾಗ ಅವರ ಮೂತ್ರಕೋಶದಲ್ಲಿ ಕಲ್ಲಾಗಿದೆ ಆ ಕಲ್ಲುಗಳು ಒಂದು ಕಿಡ್ನಿಯನ್ನು ಸಂಪೂರ್ಣವಾಗಿ ಹಾನಿಗೊಳಿಸಿರುವ ಕಾರಣ ಕೂಡಲೇ ಕಿಡ್ನಿಯನ್ನು ತೆಗೆಯಬೇಕು ಎಂದು ವೈದ್ಯರು ಹೇಳಿದ್ದಾರೆ.

ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವೈದ್ಯರು ಈ ಆರೋಪವನ್ನು ತಳ್ಳಿಹಾಕಿದ್ದು, ಆಪರೇಷನ್ ಸರಿಯಾಗಿ ಮಾಡಿರುವುದಾಗಿ ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಸಂಜಯ್ ಧಂಖರ್ ಒಡೆತನದ ಧಂಖರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಎರಡು ದಿನಗಳ ನಂತರ, ಆಕೆಯ ಸ್ಥಿತಿಯು ಹದಗೆಟ್ಟಿತು ಮತ್ತು ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ಡಾ ಧಂಖರ್ ಅವರನ್ನು ಜೈಪುರದಲ್ಲಿ ಚಿಕಿತ್ಸೆಗಾಗಿ ಸೂಚಿಸಿದರು. ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಾಗ, ಧಂಖರ್ ರೋಗಿ ಮನೆಗೆ ಭೇಟಿ ನೀಡಿ, ಬೇರೆಲ್ಲಾದರೂ ಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ಹಣ ನೀಡಿದ್ದರು, ಆದರೆ ಕುಟುಂಬಸ್ಥರು ಅವರ ಪ್ರಸ್ತಾಪವನ್ನು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿದ್ದು, ಧಂಖರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಬಾನೊ ಪತಿ ಶಬ್ಬೀರ್ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ರಾಜಕುಮಾರ್ ಡಾಂಗಿ ಅವರು ಘಟನೆಯ ತನಿಖೆಗಾಗಿ ಐದು ವೈದ್ಯರ ತಂಡವನ್ನು ರಚಿಸಿದರು. ಆಸ್ಪತ್ರೆ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಯ ವೈದ್ಯರು ಕೂಡಲೇ ಅವರನ್ನು ದಾಖಲಿಸಿಕೊಂಡು ಶಸ್ತ್ರಚಿಕಿತ್ಸೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬಳಿಕ ವೈದ್ಯರು ಹಾನಿಯಾದ ಕಿಡ್ನಿ ತೆಗೆಯುವ ಬದಲು ಒಳ್ಳೆಯ ಸ್ಥಿತಿಯಲ್ಲಿದ್ದ ಕಿಡ್ನಿಯನ್ನು ತೆಗೆದಿದ್ದಾರೆ ಎಂದು ರೋಗಿಯ ಕಡೆಯವರು ಆರೋಪಿಸಿದ್ದಾರೆ.