ಮನೆಯಲ್ಲಿದ್ದ ಭರ್ಜರಿ ಬಾಡೂಟದ ಪಾರ್ಟಿಗೆ ಕೋಳಿಗಳ ತಲೆಗಳನ್ನು ಕತ್ತರಿಸಿದ ಮಾಲೀಕ ಬಂಧುಗಳಿಗೆಲ್ಲಾ ಊಟ ಮಾಡಿಸಿ ಕಳಿಸಿದ್ದನು. ತಾನೂ ಊಟ ಮಾಡಿ ಮನೆಯ ಹೊರಗೆ ಬಂದು ನೋಡಿದರೆ ತಲೆಯನ್ನು ಕತ್ತರಿಸಿದ ಕೋಳಿಯೊಂದು ಬದುಕುಳಿದು ನಿಧಾನವಾಗಿ ಓಡಾಡುತ್ತಿದ್ದುದು ಕಂಡಿದೆ.
ಈ ತಲೆಯಿಲ್ಲದ ಕೋಳಿ ಬದುಕಿದ್ದು ಅಮೇರಿಕಾದಲ್ಲಿ. ಈ ಕೋಳಿ ಬದುಕಿದ ಕಾಲಾವಧಿಯೂ ಕೂಡ 79 ವರ್ಷಗಳ ಹಿಂದಿನ (ಅಂದರೆ 1945ರಿಂದ 1947ರ ಮಾರ್ಚ್ ಕಾಲಾವಧಿ) ಅವಧಿಯಾಗಿದೆ. ಈ ಕೋಳಿಗೆ ವಿಶೇಷವಾಗಿ ಮೈಕ್ ದಿ ಹೆಡ್‌ಲೆಸ್ ಚಿಕನ್ ಎಂದು ಹೆಸರಿಡಲಾಗಿದೆ. ಅಂದಿನ ಕಾಲದಲ್ಲಿ ಕೋಳಿಯ ಕುರಿತಾಗಿ ಹಲವು ಲೇಖನಗಳನ್ನು ಕೂಡ ಪ್ರಕಟಿಸಲಾಗಿದೆ. ಈ ಅಮೇರಿಕಾದ ಕೋಳಿಗೆ ‘ಅಕಾ ಮಿರಾಕಲ್ ಮೈಕ್’ ಎಂದು ಕರೆಯಲಾಗಿದೆ. ಇದು 1945ರಲ್ಲಿ ಬಾಡೂಟಕ್ಕೆ ತಲೆ ಕತ್ತರಿಸಿದ ನಂತರವೂ 18 ತಿಂಗಳ ಕಾಲ ಬದುಕುಳಿದು ತನ್ನ ಮಾಲೀಕನ್ನು ಶ್ರೀಮಂತನನ್ನಾಗಿ ಮಾಡಿದ ನೈಜ ಘಟನೆಯಾಗಿದೆ.
ಅಮೇರಿಕಾದಲ್ಲಿ 1945ರ ಏಪ್ರಿಲ್ 20ರಂದು ಕೊಲೊರಾಡೋದ ಫ್ರೂಟಾದಲ್ಲಿ ಜನಿಸಿದ ಕೋಳಿ ಮೈಕ್, ತನ್ನ ಮಾಲೀಕ ರೈತ ಲಾಯ್ಡ್ ಓಲ್ಸೆನ್ ಅವರ ಕುಟುಂಬಕ್ಕೆ ಭೋಜನವಾಗಬೇಕಿತ್ತು. ಆದಾಗ್ಯೂ, ರೈತ ಓಲ್ಸೆನ್ ತನ್ನ ಕೋಳಿ ಮೈಕ್‌ನ ಶಿರಚ್ಛೇದ ಮಾಡಲು ಪ್ರಯತ್ನಿಸಿದಾಗ, ಅದು ಅರ್ಧಭಾಗ ಮಾತ್ರ ಸೀಳಿಕೊಂಡಿತ್ತು. ಒಂದು ಕಿವಿ ಮತ್ತು ಮೆದುಳಿನ ಕಾಂಡದ ಹೆಚ್ಚಿನ ಭಾಗವನ್ನು ತುಂಡಾಗದೇ ತಲೆಯಲ್ಲಿಯೇ ಉಳೊಇದುಕೊಂಡಿತು. ಆದರೆ, ಕೋಳಿಯ ಕೊಕ್ಕು, ಕಣ್ಣುಗಳು, ಜುಟ್ಟು ಎಲ್ಲವೂ ಬಹುತೇಕವಾಗಿ ತುಂಡಾಗಿ ಹೋಗಿತ್ತು. ಆದರೆ, ತನ್ನ ತಲೆಯನ್ನು ಕಳೆದುಕೊಂಡ ನಂತರವೂ ಕೋಳಿ ಮೈಕ್ ಚಿಕನ್ ತುಂಡರಿಸಿದ ಜಾಗದ ಪಕ್ಕದಲ್ಲಿ ಕಣ್ಣು ಕಾಣಿಸದಂತೆ ರಕ್ತ ಸಿಕ್ತವಾದ ಕತ್ತನ್ನು ಹೊಂದಿ ವಿಚಿತ್ರವಾಗಿ ನಡೆಯುತ್ತಿತ್ತು.
ಇದನ್ನು ನೋಡಿದ ಮಾಲೀಕ ಕೋಳಿ ಮೇಲೆ ಕರುಣೆ ತೋರಿಸಿ ಆರೈಕೆ ಮಾಡಿ ಸಾಕಿದ್ದಾನೆ. ಈ ಕೋಳಿ ತಲೆಯಿಲ್ಲದೇ ಬರೋಬ್ಬರಿ 18 ತಿಂಗಳ ಕಾಲ ಬದುಕಿದ್ದೂ ಅಲ್ಲದೇ ತನ್ನ ಮಾಲೀಕನನ್ನು ಶ್ರೀಮಂತನನ್ನಾಗಿ ಮಾಡಿ ಉಸಿರು ಚೆಲ್ಲಿದೆ. ಇದರ ಗೌರವಾರ್ಥವಾಗಿ ಈಗಲೂ ರೈತನ ಕುಟುಂಬದಿಂದ ಪ್ರತಿವರ್ಷ ‘ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ’ ಆಚರಿಸಲಾಗುತ್ತದೆ.