ನಿಮ್ಮ ಸುದ್ದಿ ವಿಜಯಪುರ
ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹೊಂದಿದ್ದ ಖಚಿತ ಮಾಹಿತಿ ಆಧರಿಸಿ ವಿಜಯಪುರ ಜಿಲ್ಲಾ ಸಿಇಎನ್ ಅಪರಾಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ವಿಜಯಪುರದ ಖತಿಜಾಪುರ ನಿವಾಸಿ ಅಂಬರೀಶ ರಾಠೋಡ ಬಂಧಿತ ಆರೋಪಿ. ಮೂಲತ: ಕಲಬುರಗಿಯ ಬಿದ್ದಾನಪುರ ಕಾಲೋನಿಯ ಅಂಬರೇಶ ಶೋಕಿಗಾಗಿ ಅನಧಿಕೃತವಾಗಿ ಕಂಟ್ರಿ ಪಿಸ್ತೂಲ್ ಖರೀದಿಸಿದ್ದ, ಬಳಿಕ ಮಾವನ ಮನೆಯಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿ ಆತನ ಮನೆಯಲ್ಲಿ ಬಚ್ಚಿಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಸಿಇಎನ್ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಜಯಪುರ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Nimma Suddi > State News > ಬಚ್ಚಿಟ್ಟಿದ್ದ ಕಂಟ್ರಿ ಪಿಸ್ತೂಲ್ ವಶಕ್ಕೆ
ಬಚ್ಚಿಟ್ಟಿದ್ದ ಕಂಟ್ರಿ ಪಿಸ್ತೂಲ್ ವಶಕ್ಕೆ
Nimma Suddi Desk.02/11/2020
posted on
Leave a reply