This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Business NewsEducation NewsEntertainment NewsInternational NewsNational NewsState News

ಲೈವ್​​ನಲ್ಲೇ ಮಹಿಳಾ ಆ್ಯಂಕರ್​ಗೆ ಪ್ರಪೋಸ್ ಮಾಡಿದ ಜರ್ನಲಿಸ್ಟ್​​​;

ಲೈವ್​​ನಲ್ಲೇ ಮಹಿಳಾ ಆ್ಯಂಕರ್​ಗೆ ಪ್ರಪೋಸ್ ಮಾಡಿದ ಜರ್ನಲಿಸ್ಟ್​​​;

ಬೆಂಗಳೂರು: ಪಾರ್ಕ್​​ನಲ್ಲಿ, ಪಬ್​ನಲ್ಲಿ ಪ್ರಪೋಸ್​ ಮಾಡುವುದು ಮಾಮೂಲಿ. ಅದೇನೂ ವಿಶೇಷಲ್ಲ. ಆದರೆ, ಟಿವಿಯ , ಲೈವ್ ನ್ಯೂಸ್​ನಲ್ಲಿ ಪ್ರಪೋಸ್ ಮಾಡಿ ಹೂ ಕೊಟ್ಟು ಉಂಗುರ ಹಾಕಿದರೆ ಹೇಗಿರುತ್ತದೆ? ನೋಡೋರಿಗಂತೂ ಫುಲ್​ ಖುಷಿ ಖಂಡಿತ. ಡಬ್ಲ್ಯುಆರ್​ಸಿಬಿ ಚಾನೆಲ್​ನಲ್ಲಿ ಇಂಥ ಘಟನೆ ನಡೆದಿದೆ. ಎನ್​ಬಿಸಿ ಅಂಗಸಂಸ್ಥೆಯಾಗಿರುವ ಡಬ್ಲ್ಯುಆರ್​ಸಿ-ಟಿವಿಯ ಸುದ್ದಿ ನಿರೂಪಕಿ ಕಾರ್ನೆಲಿಯಾ ನಿಕೋಲ್ಸನ್ ದಿನದ ಮುಖ್ಯಾಂಶಗಳನ್ನು ನೀಡುವ ನಡುವೆ ಅವರ ಬಾಯ್​ಫ್ರೆಂಡ್ ಹಾಗೂ ಜರ್ನಲಿಸ್ಟ್​ ಹೂ ಕೊಟ್ಟು ಉಂಗುರ ಹಾಕಿ ಪ್ರಪೋಸ್ ಮಾಡಿದ್ದಾರೆ.

ಆ್ಯಂಕರ್​ನ ಪ್ರಿಯತಮನ ಹೆಸರು ರಿಲೆ ನಾಗೆಲ್​. ಕಾರ್ನೆಲಿಯಾ ನಿಕೋಲ್ಸನ್ ಸುದ್ದಿ ಓದುತ್ತಿದ್ದಾಗಲೇ ಮಧ್ಯ ಪ್ರವೇಶಿಸಿ ಉಂಗುರ ತೊಡಿಸಿದ್ದಾರೆ. ಅಲ್ಲದೆ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಜಗಜ್ಜಾಹೀರುಗೊಳಿಸಿದ್ದಾರೆ.

ಉಂಗುರ ತೊಡಿಸಿದ ಬಳಿಕ ರಿಲೆ ನಾಗೆಲ್ ಪ್ರೇಕ್ಷಕರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಅದು ಕೂಡ ಸುದ್ದಿ ಮಾದರಿಯಲ್ಲಿ. ನನ್ನ ಬಳಿ ಬಹಳ ವಿಶೇಷವಾದ ವರದಿ ಇದೆ. ಕಾರ್ನೆಲಿಯಾ ಮತ್ತು ನಾನು ಸುಮಾರು ನಾಲ್ಕು ವರ್ಷಗಳ ಹಿಂದೆ ಮೊಂಟಾನಾದಲ್ಲಿ ಸುದ್ದಿ ಕೇಂದ್ರದಲ್ಲಿ ಭೇಟಿಯಾಗಿದ್ದೆವು. ಅಲ್ಲಿಂದಲೇ ಅವರ ಬಗ್ಗೆ ಆಕರ್ಷಿತನಾಗಿದ್ದೆ. ಅವರನ್ನು ಮೊದಲು ಭೇಟಿಯಾದಾಗ, ತುಂಬಾ ಖುಷಿ ಎನಿಸಿತು. ಅವರು ಅದ್ಭುತ ವ್ಯಕ್ತಿತ್ವವನ್ನು ಹೊಂದಿದ್ದರು. ಆ ದಿನ ಹೊಳೆಯುವಂತೆ ಕಂಡಿದ್ದರು. ಅಂದಿನಿಂದ ಮನೆಯವರಿಗೆ ಗೊತ್ತಿಲ್ಲದ ಹಾಗೆ ಪ್ರೀತಿಸಲು ಆರಂಭಿಸಿದೆ. ಕಾರ್ನಲಿಯಾ ಅವರ ನಗು ಇಡೀ ಪರಿಸರವನ್ನು ಬೆಳಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಕಾರ್ನೆಲಿಯಾ ಕೂಡ ಗೆಳೆಯ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾಳೆ. ಹೌದು ಎಂದು ಹೇಳಿದ ಅವರು ನಾಗೆಲ್ ಅವರನನ್ನು ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ.

ವೈರಲ್ ಆದ ವಿಡಿಯೊ
ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡ ಕೂಡಲೇ ಅದು ವೈರಲ್ ಆಯಿತು. ಸಿಕ್ಕಾಪಟ್ಟೆ ಕಾಮೆಂಟ್​​ಗಳು ಬರಲು ಆರಂಭಿಸಿದವು. ಬಳಿಕ ಅವರಿಬ್ಬರೂ ಸಂತೋಷವನ್ನು ಆಚರಿಸಿಕೊಂಡರು. ಅನೇಕರು ಇಬ್ಬರ ಮೇಲೆ ಪ್ರೀತಿಯ ಮಳೆ ಸುರಿಸಿದರು.

ಈ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು. ಓಹ್, ಅಭಿನಂದನೆಗಳು. ಇದು ನೋಡಲು ತುಂಬಾ ಸುಂದರವಾದ ವಿಷಯ” ಎಂದು ಕಾಮೆಂಟ್​ ಮಾಡಿದ್ದಾರೆ. ಇದು ತುಂಬಾ ಅದ್ಭುತವಾಗಿದೆ, ಅವನು ಅವಳನ್ನು ಆಶ್ಚರ್ಯಗೊಳಿಸುವ ಅದ್ಭುತ ಕೆಲಸವನ್ನು ಮಾಡಿದ್ದೀರಾ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಅವರಿಬ್ಬರಿಗಾಗಿ ಸಂತೋಷದ ಕಣ್ಣೀರು ಸುರಿಸುತ್ತಿದ್ದೇನೆ. ಅಷ್ಟು ಸುಂದರ. ಅವರಿಬ್ಬರು ದಶಕಗಳ ಸಂತೋಷವನ್ನು ಅನುಭವಿಸಲಿ ಎಂದು ಇನ್​ಸ್ಟಾಗ್ರಾಮ್​ ಬಳಕೆದಾರರು ಬರೆದಿದ್ದಾರೆ. ಮಹಿಳೆಯೊಬ್ಬಳು, ನನಗೂ ಅಂಥ ಗೆಳೆಯ ಬೇಕು ಎಂದು ಬರೆದುಕೊಂಡಿದ್ದಾರೆ.

ಈ ಮುದ್ದಾದ ವೀಡಿಯೊವನ್ನು ಮಜ್ಲಿ ನ್ಯೂಸ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್​​ನಲ್ಲಿ ಎರಡು ದಿನಗಳ ಹಿಂದೆ ಹಂಚಿಕೊಂಡಿದೆ. ಈ ಕ್ಲಿಪ್ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. 18,000 ಲೈಕ್​ಗಳನ್ನು ಪಡೆದುಕೊಂಡಿದೆ.

Nimma Suddi
";