This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Education NewsLocal NewsState News

ಆಜಾದ್ ಪಬ್ಲಿಕ್ ಶಾಲೆಯಲ್ಲಿ ನೂತನ ಗ್ರಂಥಾಲಯ

ಆಜಾದ್ ಪಬ್ಲಿಕ್ ಶಾಲೆಯಲ್ಲಿ ನೂತನ ಗ್ರಂಥಾಲಯ

ನಿಮ್ಮ ಸುದ್ದಿ ಬಾಗಲಕೋಟೆ

ಪುಸ್ತಕದ ಸ್ನೇಹ ಬೆಳೆಸುವುದರಿಂದ ಮೆದುಳಿನ ಬೆಳವಣಿಗೆ ವೇಗ ಪಡೆಯುವುದಷ್ಟೇ ಅಲ್ಲದೆ ಬುದ್ಧಿ ಮತ್ತೆಯೂ ಚುರುಕುಗೊಳ್ಳುತ್ತದೆ. ಯಾವುದೇ ಪುಸ್ತಕಗಳು ನೀಡುವ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ ಮತ್ತು ತನ್ಮೂಲಕ ಓದುಗನಲ್ಲಿ ಉಂಟು ಮಾಡುವ ಮನೋವಿಕಾಸವನ್ನು ಸರಿಗಟ್ಟಲು ಸಾಧ್ಯವೇ ಇಲ್ಲ. ಪ್ರಾಥಮಿಕ ಹಂತದ ಶಿಕ್ಷಣ ಓದಲು ಕಲಿಸುತ್ತದೆ, ಶಾಲೆಯ ಮಕ್ಕಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಪರವೇಜ್ ಖಾಝಿ ಹೇಳಿದರು.

ಜಿಲ್ಲೆಯ ಹುನಗುಂದ ಪಟ್ಟಣದ ಆಜಾದ್ ಪಬ್ಲಿಕ್ ಶಾಲೆಯಲ್ಲಿ ನೂತನ್ ಗ್ರಂಥಾಲಯ ಉದ್ಘಾಟನೆ ಮಾಡಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಜಬ್ಬಾರ್ ಕಲಬುರ್ಗಿ ಈ ಸಂಧರ್ಭದಲ್ಲಿ ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಅವಶ್ಯವಾಗಿರುವ ಪುಸ್ತಕಗಳ ಸಂಗ್ರಹ ಒದಗಿಸÀಲಾಗಿದೆ ಸುಸಜ್ಜಿತವಾಗಿರುವ ಈ ಗ್ರಂಥಾಲಯವನ್ನು ಓದಿನ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸದ್ಭಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಾಗಹಿಸಿದ ಆಡಳಿತ ಮಂಡಳಿಯ ಪ್ರಧಾನ್ ಕಾರ್ಯದರ್ಶಿ ಮಹಬೂಬ ಸರ್ಕಾವಸ ಅವರು ಮಾತನಾಡಿ “ಮುಗಿದು ಹೋಗದ ಸಂಪತ್ತು ಎಂದರೆ ಅದು ಜ್ಞಾನ ಸಂಪತ್ತು” ಆ ಸಂಪತ್ತಿನ ಬೆಳವಣಿಗೆಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಅದಕ್ಕಾಗಿ ಈ ನೂತನ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಂಡು ಜ್ಞಾನ ಸಂಪಾದನೆಯನ್ನು ಮಾಡಿ ಅರ್ಥಪೂರ್ಣ ಬದುಕನ್ನು ನಿರ್ಮಿಸಿಕೊಳ್ಳಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಅಲ್ತಾಫ್ ಕಲಬುರ್ಗಿ, ಲಾಲ್‌ಪೀರಾ, ಪೀರಜಾದೆ. ಅಜಿಜ್ ಕಲಬುರ್ಗಿ, ಮಹಬೂಬ್ ನಾಯಿಕ್. ಶಿಕ್ಷಕರಾದ ಯೂಸುಫ್ ಕಲಬುರ್ಗಿ, ಎ.ಹೆಚ್. ಬೇಪಾರಿ, ಸಲ್ಮಾ ಕಲಬುರ್ಗಿ, ಜೆ.ಎಮ್ ಕವಲೂರ್ ಏನ್.ಎಚ್. ಲಿಂಗಸೂರ ಉಪಸ್ಥಿತರಿದ್ದರು.

Nimma Suddi
";