“ಹೆಣ್ಣುಮಕ್ಕಳಿಗೆ ಮೊದಲಿನಿಂದಲೂ ನೇತಾಡುವ ಬಗೆಬಗೆಯ ಡಿಸೈನ್‌ನ ಪರ್ಸ್ ಹಾಗೂ ಹ್ಯಾಂಡ್ ಬ್ಯಾಗ್ ಸ್ಲಿಂಗ್ ಬ್ಯಾಗ್‌ಗಳನ್ನು ಹಾಕಿಕೊಳ್ಳುವುದು ಇಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು, ಕೆಲವು ಮಕ್ಕಳಂತೂ ದೊಡ್ಡವರಂತೆ ಸಿಂಗರಿಸಿಕೊಂಡು, ಔಟ್‌ಫೀಟ್‌ನೊಂದಿಗೆ ಹ್ಯಾಂಟ್ ಬ್ಯಾಗ್ ಕೂಡ ಹಾಕಿಕೊಳ್ಳಲು ಬಯಸುತ್ತಾರೆ.
ಇಂತಹ ಮಕ್ಕಳಿಗೆ ಇಷ್ಟವಾಗುವಂತೆ, ಇದೀಗ ಬ್ರಾಂಡ್ ಡಿಸೈನ್ ಮೀರಿಸುವಂತಹ ಜೆಲ್ಲಿ ಮಿನಿ ಸ್ಲಿಂಗ್ ಹ್ಯಾಂಡ್ ಬ್ಯಾಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಧರಿಸಿದಾಗ ಆಕರ್ಷಕವಾಗಿ ಕಾಣುವ ಇವುಗಳ ಬೆಲೆಯೂ ಕೂಡ ದೊಡ್ಡ ಬ್ಯಾಗ್‌ಗಳಷ್ಟೇ ಇದೆ. ಟ್ವಿನ್ನಿಂಗ್ ಮಾಡಲು ಬಯಸುವ ಅಮ್ಮ-ಮಗಳು ಕೂಡ ಇವನ್ನು ಕೊಳ್ಳಬಹುದು. ದೊಡ್ಡ ಡಿಸೈನಿಂಗ್ ಬ್ಯಾಗ್‌ನ ರಿಪ್ಲಿಕಾದಂತೆ ಕಾಣಿಸುವ ಈ ಬ್ಯಾಗ್‌ಗಳು ಇದೀಗ ಸಖತ್ ಪಾಪ್ಯುಲರ್ ಆಗಿವೆ” ಎನ್ನುತ್ತಾರೆ ಬ್ಯಾಗ್ ಮಾರಾಟಗಾರರು. ಅವರ ಪ್ರಕಾರ, ಆಫ್‌ಲೈನ್ ಅಂಗಡಿಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ಇವುಗಳ ಮಾರಾಟ ಹೆಚ್ಚಿದೆ ಎನ್ನುತ್ತಾರೆ.
ಕ್ಲಚ್ ಜೆಲ್ಲಿ ಫ್ಲಾಪ್ ಹ್ಯಾಂಡ್ ಬಾಗ್, ಜೆಲ್ಲಿ ಕ್ಯಾಂಡಿ ಮಿನಿ ಸ್ಲಿಂಗ್ ಬ್ಯಾಗ್, ಮಿನಿ ಪರ್ಲ್ ಸ್ಲಿಂಗ್ ಬ್ಯಾಗ್, ಜೆಲ್ಲಿ ಕ್ರಾಸ್‌ಬಾಡಿ ಸ್ಲಿಂಗ್ ಬ್ಯಾಗ್, ಕಾರ್ಟೂನ್ ಪ್ಯಾಚ್ ವರ್ಕ್ ಜೆಲ್ಲಿ ಶೇಡ್ ಮಿನಿ ಬ್ಯಾಗ್, ಪರ್ಲ್ ಹ್ಯಾಂಡಲ್ ಮಿನಿ ಜೆಲ್ಲಿ ಬ್ಯಾಗ್, ಕ್ರಿಸ್‌ಕ್ರಾಸ್ ಸ್ಲಿಂಗ್ ಬ್ಯಾಗ್, ಟ್ರೆಂಡಿ ಸಿಲಿಕಾನ್ ಜೆಲ್ಲಿ ಬ್ಯಾಗ್ ಸೇರಿದಂತೆ ನಾನಾ ಡಿಸೈನ್‌ನವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಮಕ್ಕಳಿಗೆ ಪ್ರಿಯವಾಗುವಂತಹ ಕ್ಯಾಂಡಿ ಕಲರ್‌ಗಳು, ಡಾರ್ಕ್ ಶೇಡ್‌ನವು, ಲೈಟ್ ಶೇಡ್‌ನವು ಹೆಚ್ಚು ಪ್ರಚಲಿತದಲ್ಲಿವೆ. ಇನ್ನು ನೋಡಲು ಬ್ರಾಂಡೆಡ್ ಡಿಸೈನರ್ ಬ್ಯಾಗ್‌ಗಳಂತೆಯೇ ಕಾಣಿಸುವ ಈ ಮಿನಿ ಜೆಲ್ಲಿ ಬ್ಯಾಗ್‌ಗಳು ಕಲರ್‌ಫುಲ್ ಶೇಡ್‌ನಲ್ಲಿ ಜನಪ್ರಿಯಗೊಂಡಿವೆ ಎಂದು ಮಾಹಿತಿ ತಿಳಿದು ಬಂದಿದೆ.