This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ವಿಶ್ವ ಹಾವುಗಳ ದಿನಾಚರಣೆ:ಸರ್ಪಗಳ ಸುತ್ತ ಒಂದು ಸುತ್ತು

ಉರಗ ನೋಟದ ಮುನ್ನೊಟ

ನಿಮ್ಮ ಸುದ್ದಿ ಬಾಗಲಕೋಟೆ

ಪುರಾತನ ಅನಾದಿ ಕಾಲದ ಶಾಸನಗಳನ್ನು ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ೩೦ಕ್ಕೂ ಹೆಚ್ಚು ಜಾತಿಯ ಹಾವುಗಳು ಕಂಡುಬಂದಿವೆ ಎಂದು ಉಪ ಸಂರಕ್ಷಣಾಧಿಕಾರಿಗಳಾದ ಡಾ. ಪ್ರಶಾಂತ ತಿಳಿಸಿದ್ದಾರೆ.

ವಿಶ್ವವಿಖ್ಯಾತ ಹಿಂದೂ ದೇವಾಲಯಗಳ ಆಂದೋಲನವೇ ಜರುಗಿದ ಬದಾಮಿ, ಐಹೊಳೆ, ಪಟ್ಟದಕಲ್ಲು ಮಹಾಕೂಟಗಳಲ್ಲಿ ಚಾಲುಕ್ಯರ ಕಾಲದ ನಾಲ್ಕೈದು ಅಡಿ ಎತ್ತರದ ೮ ನಾಗ ಕೆತ್ತನೆಗಳು ಕಾಣಸಿಗುತ್ತವೆ. ಇಷ್ಟೆಲ್ಲ ಪ್ರಾಕೃತಿಕ ಸಂಪತ್ತನ್ನು ಹೊಂದಿರುವುದರ ಜೊತೆಗೆ ಜಿಲ್ಲೆಯಲ್ಲಿ ವಿವಿಧ ಜಾತಿಯ ಸರ್ಪಗಳಾದ ಹೆಬ್ಬಾವು, ಮಣ್ಣು ಮುಕ್ಕ, ಹಸಿರು ಹಾವು, ಕ್ಯಾರೆ ಹಾವು , ಚೆಂಗು ಹಾವು, ನಾಗರ ಹಾವು, ಮಂಡಲದ ಹಾವು, ಬಾಲ ಪಡಕ ಜಾತಿಯ ಹಾವುಗಳನ್ನು ಕಾಣಬಹುದಾಗಿದೆ.

ಇವುಗಳು ಮರಭೂಮಿ, ಶೀತ, ದಟ್ಟ ಕಾಡು ಸಮುದ್ರ ಎಲ್ಲ ಪ್ರದೇಶಗಳಲ್ಲಿ ಕಾಣಸಿವುದರ ಜೊತೆಗೆ ಜಗತ್ತಿನಲ್ಲಿ ಒಟ್ಟು ೩.೪೫೮ ಪ್ರಭೇದದ ಸರ್ಪಗಳಿವೆ. ಅಷ್ಟೆ ಅಲ್ಲ ಹಾವುಗಳೆಂದರೆ ವಿಷ ಕಾರುವ ಜೀವಿ ಎಂಬ ಭಾವನೆ ನಮ್ಮಲ್ಲಿದ್ದರೂ ಜಗತ್ತಿನಲ್ಲಿರುವ ಹಾವುಗಳ ಪೈಕಿ ಶೇ. ೭೫-೮೦ ವಿಷಕಾರಿಯಾಗಿರುವುದಿಲ್ಲ ಎಂಬ ಉಲ್ಲೇಖವಿದೆ. ೨೦೦೮ ರಿಂದ ಇಲ್ಲಿಯವರಗೆ ಸುಮಾರು ೩೦೦ ಕ್ಕೂ ಹೆಚ್ಚು ಹೊಸ ಪ್ರಭೇದದ ಹಾವುಗಳನ್ನು ಕಂಡು ಹಿಡಿಯಲಾಗಿದೆ.

ಜಿಲ್ಲೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಅರಣ್ಯ ಪ್ರದೇಶವನ್ನು ಹೊಂದಿದ್ದು, ಒಟ್ಟು ೮೨.೪೧೯ ಹೇಕ್ಟರ್ ಅರಣ್ಯ ಪ್ರದೇಶವನ್ನು ಹೊಂದಿದೆ. ೧೧ ಹೇಕ್ಟರ ರಕ್ಷಿಸಲ್ಪಟ್ಟ ಅರಣ್ಯ ಮತ್ತು ೩೨೮ ಹೇಕ್ಟರ್ ವರ್ಗೀಕರಿಸಿದ ಕುರುಚುಲು ಅರಣ್ಯ ಪ್ರದೇಶವನ್ನು ಕಾಣಬಹುದಾಗಿದೆ. ಹೆಚ್ಚು ಮಳೇ ಬೀಳದ ಕಾರಣ ಅರಣ್ಯಗಳು ದಟ್ಟವಾಗಿಲ್ಲ. ಬೆಟ್ಟ ಗುಡ್ಡಗಳ ಮತ್ತು ನದೀ ತೀರದ ಕಾಡುಗಳಲ್ಲಿ ಕಕ್ಕೆ, ದಿಂಡಲು, ಗಂಧ ಜಾಲಿ, ಬೇವು, ಹುಣಸೆ, ನೇರಳೆ ಅನೇಕ ರೀತಿಯ ಗಿಡಮರಗಳನ್ನು ಕಾಣಬಹುದಾಗಿದೆ. ಇಲ್ಲಿಯ ಅರಣ್ಯ ಪ್ರದೇಶ ಕ್ಷೀಣವಾಗಿರುವುದರಿಂದ ಪ್ರಾಣಿ ಪಕ್ಷಿಗಳ ಸಂಖ್ಯೆ ಕಡಿಮೆಯಿದೆ..

ಹಾವು ಎಂದರೆ ಭಯದ ಜೊತೆ ಜೊತೆಗೆ ಭಕ್ತಿಯು ಉಂಟು ಹಿಂದೂ ಸನಾತನ ಧರ್ಮದ ಅನುಗುಣವಾಗಿ ಹಾವನ್ನು ನಾಗದೇವ, ಸುಬ್ರಮಣ್ಯ ಹೀಗೆ ಹತ್ತು ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ ಉರಗನಿಗೆ ೧೨೦೦೦ ವರ್ಷಗಳ ಇತಿಹಾಸವಿದೆ.ಇವುಗಳ ಶಾಸ್ತಿçÃಯ ಹೆಸರು ನಾಜ. ಸರಿಸೃಪಗಳಲ್ಲಿ ಸರ್ವ ಶ್ರೇಷ್ಠತೆಗೆ ಹೆಸರಾದ ಈ ಹಾವುಗಳ ಕುರಿತಾದ ಅಧ್ಯಯನ, ಇವುಗಳ ಕುರಿತು ನಮ್ಗಿರುವ ಭ್ರಮೆ, ಭಯ ತೊಡೆದು ಹಾಕಿ ಅವುಗಳ ಸಂತತಿಯನ್ನು ರಕ್ಷಿಸುವುದಕ್ಕೆ ಸಂಕಲ್ಪ ಮಾಡುವ ಸಲುವಾಗಿ ಪ್ರತಿ ವರ್ಷದ ಜುಲೈ ೧೬ ರಂದು ವಿಶ್ವ ಹಾವುಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಹಾವುಗಳ ವೈಜ್ಞಾನಿಕ ಸತ್ಯ:
ವೈಜ್ಞಾನಿಕವಾಗಿ ಹಾವುಗಳಿಗೆ ಧ್ವನಿ ಕೇಳುವ, ಶಬ್ದ ಗ್ರಹಿಸುವ ಶಕ್ತಿಯಿಲ್ಲ, ಹಾಲು ಕುಡಿದು ಜೀರ್ಣಿಸಿಕೊಳ್ಳಲು ಬರುವುದಿಲ್ಲ, ಹಾವಿನ ದ್ವೇಷ ಹನ್ನೇರೆಡು ವರ್ಷ ಎಂಬ ಗಾದೆ ಉಂಟು ಆದರೆ ಇವುಗಳು ದ್ವೇಷ ಮಾಡುವುದಿಲ್ಲ ಎಕೆಂದರೆ ಇವುಗಳಿಗೆ ನೆನಪಿನ ಶಕ್ತಿ ಇರುವುದಿಲ್ಲ. ಅದೇ ರೀತಿ ಗರ್ಭೀಣಿಯರನ್ನು ನೋಡಿದರೆ ಹಾವುಗಳಿಗೆ ಕಣ್ಣು ಹೋಗುವುದಿಲ್ಲ. ಗರುಡ ರೇಖೆ ಇದ್ದರೆ ಹಾವು ಹೆಡೆಯಾಡಿಸುತ್ತದೆ ಎಂದು ನಂಬಲಾಗುತ್ತದೆ.

 

ಹಿಂದೂ ಪರಂಪರೆಯಲ್ಲಿ ಹಾವಿನ ಪ್ರಾಮುಖ್ಯತೆ:
ಹಿಂದೂ ಧರ್ಮದಲ್ಲಿ ಹಾವುಗಳನ್ನು ನಾಗದೇವನೆಂದು ಪೂಜಿಸಿ ಗೌರವಿಸಲಾಗುತ್ತದೆ. ಶ್ರಾವಣ ತಿಂಗಳ ಶುಕ್ಲ ಪಕ್ಷದಲ್ಲಿ ಮತ್ತು ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗಲೋಕದಲ್ಲಿ ಶ್ರೇಷ್ಠನಾದ ಶೇಷನಾಗನೂ ಸಂಪೂರ್ಣ ಭೂಮಿಯ ಬಾರವನ್ನು ತನ್ನ ಹೆಡೆ ಮೆಲಿಟ್ಟಕೊಂಡು ಭಗವಾನ ವಿಷ್ಣುವಿಗೆ ಹಾಸಿಗೆಯಾಗಿದ್ದಾನೆ ಎಂಬುವುದಕ್ಕಾಗಿ ಪ್ರತಿ ಮನೆ ನಿರ್ಮಾಣ ಸಂದರ್ಭದಲ್ಲಿ ಭೂಮಿ ಪೂಜೆಯನ್ನು ಮಾಡಿ ಬೆಳ್ಳಯಿಂದ ಮಾಡಿದ ಸರ್ಪವನ್ನು ಇಡಲಾಗುತ್ತದೆ. ಸರ್ಪವು ಶಿವ ಕಂಠ ಹಾರ, ಸಮುದ್ರ ಮಂಥನದಲ್ಲಿ ಹಗ್ಗವನ್ನಾಗಿ, ತ್ರಿಪುರಾಸುರನ ಸಂಹರಣದಲ್ಲಿ ಬಾಣದ ಬಿಲ್ಲನ್ನಾಗಿದ್ದ ವಾಸಕಿಯನ್ನು ನಾಗಲೋಕದ ರಾಜನೆಂದು ಕರೆಯಲಾಗುತ್ತದೆ.

ನಾಗಲೋಕದ ೩ನೇ ರಾಜನಾದ ತಕ್ಷಕ ಹಾವುಗಳ ಸಂತತಿಯನ್ನು ಉಳಿಸಲು ಕಾರಣವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಇನ್ನು ಹಿಂದೂ ಧರ್ಮದಲ್ಲಿ ಮಾನವನಿಗೆ ಹಾಗೂ ನಾಗಗಳ ನಡುವಿನ ಸಂಬAಧವನ್ನು ಅರ್ಜುನ ಹಾಗೂ ನಾಗರಾಜ ಕೌರವ್ಯನ ಮಗಳು ಉಲುಪಿಯು ಅರ್ಜುನನ್ನು ಪ್ರೀತಿಸಿ ನಾಗಲಕೋದಲ್ಲಿ ವಿವಾಹವಾಗಿ ಇವರಿಗೆ ಜನಿಸದ ಮಗನೆ ಐರಾವನ ಹೀಗೆ ಮನುಷ್ಯ ಮತ್ತು ನಾಗಗಳ ನಡುವಿನ ಸಂಬಂಧ ವಿವರಿಸುತ್ತದೆ.
ಪ್ರತಿಯೊಂದು ಜೀವಿಯು ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಈ ಸಂತತಿಯನ್ನು ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಮನೆಯಲ್ಲಿ, ಮೆನೆ ಅಂಗಳ ಸುತ್ತಮುತ್ತ ಸರ್ಪಗಳು ಕಂಡು ಬಂದಾಗ ಅವುಗಳಿಗೆ ಹಾನಿ ಮಾಡದೆ ಅರಣ್ಯ ಸಿಬ್ಬಂದಿಗಳಿಗೆ ತಿಳಿಸುವುದರ ಮೂಲಕ ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.

ಸತತ ೨೨ ವರ್ಷಗಳಿಂದ ಹಾವುಗಳ ಅಧ್ಯಯನದಲ್ಲಿ ತೊಡಗಿರುವ ನಾನು ಅನೇಕ ರೀತಿಯ ಹಾವುಗಳನ್ನು ಮತ್ತು ಅವುಗಳ ಜೀವನ ಕ್ರಮಗಳ ಕುರಿತು ಅಧ್ಯಯನ ಮಾಡಿದ್ದೇನೆ. ಪ್ರಸ್ತುತ ದಿನಮಾನಗಳಲ್ಲಿ ಹಾವುಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಜನ ಸಾಮಾನ್ಯರು ಹಾವುಗಳನ್ನು ಹಿಂಸಿಸುವುದನ್ನು ಬಿಟ್ಟು ಅವುಗಳನ್ನು ರಕ್ಷಿಸುವುದರ ಜೊತೆಗೆ ಪರಿಸರ ಸಮತೋಲನವನ್ನು ಕಾಪಾಡಬೇಕು.
ಡಾ.ತಿಪ್ಪೇಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಸಮೂಹ ಆರೋಗ್ಯಶಾಸ್ತç ವಿಭಾಗ, ಎಸ್.ಎನ್ ವೈದ್ಯಕೀಯ ಕಾಲೇಜು ಬಾಗಲಕೋಟೆ

 

";