This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Local NewsState News

ಹೆಣ್ಣು ಶಾಪವಲ್ಲ, ಸೌಭಾಗ್ಯವತಿ : ನ್ಯಾ.ದಾವಪ್ಪ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ|ಮಾಜಿ ದೇವದಾಸಿ ಮಹಿಳೆಯರ ಅಧ್ಯಯನ ಕುರಿತು ತರಬೇತಿ

<span class=ಹೆಣ್ಣು ಶಾಪವಲ್ಲ, ಸೌಭಾಗ್ಯವತಿ : ನ್ಯಾ.ದಾವಪ್ಪ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ|ಮಾಜಿ ದೇವದಾಸಿ ಮಹಿಳೆಯರ ಅಧ್ಯಯನ ಕುರಿತು ತರಬೇತಿ" title="ಹೆಣ್ಣು ಶಾಪವಲ್ಲ, ಸೌಭಾಗ್ಯವತಿ : ನ್ಯಾ.ದಾವಪ್ಪ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ|ಮಾಜಿ ದೇವದಾಸಿ ಮಹಿಳೆಯರ ಅಧ್ಯಯನ ಕುರಿತು ತರಬೇತಿ" decoding="async" srcset="https://nimmasuddi.com/whirtaxi/2023/10/IMG-20231011-WA0039.jpg?v=1697030521 1025w, https://nimmasuddi.com/whirtaxi/2023/10/IMG-20231011-WA0039-300x130.jpg?v=1697030521 300w, https://nimmasuddi.com/whirtaxi/2023/10/IMG-20231011-WA0039-768x332.jpg?v=1697030521 768w" sizes="(max-width: 1025px) 100vw, 1025px" />

ಬಾಗಲಕೋಟೆ

ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ, ಶಾಪವೆಂದು ತಿಳಿಯುವ ಕಾಲವಿತ್ತು, ಇಂದು ಹೆಣ್ಣು ಶಾಪವಲ್ಲ ಸೌಭಾಗ್ಯವತಿಯಾಗಿ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾಳೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಹೇಳಿದರು.

ವಿದ್ಯಾಗಿರಿಯ ಬಿವಿವ ಸಂಘದ ಕೋಟಾಕ್ ಮಹೇಂದ್ರ ಆರ್‍ಸೆಟ್ ಸಂಸ್ಥೆಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಅಧ್ಯಯನ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳ ಮೇಲಿರುವ ತಾತ್ಸಾರವನ್ನು ಗಮನಿಸಿದ ಸರಕಾರ ಹೆಣ್ಣು ಬ್ರೂಣ ಪತ್ತೆ ಕಾರ್ಯ ನಡೆಸಿ ಕ್ರಮ ಜರುಗಿಸಿದ್ದರಿಂದ ಬ್ರೂಣ ಪತ್ತೆ ಅಪರಾದ ಎಂಬುದು ತಿಳಿಯಿತು. ಆದರೆ ಬ್ರೂಣ ಪತ್ತೆ ಮಾಡಿ ಅಪರಾಧಿಯಾದ ವೈದ್ಯರಿಗೆ ಇದುವರೆಗೂ ಯಾರೊಬ್ಬರಿಗೂ ಶಿಕ್ಷೆಯಾಗದಿರುವುದು ದುರಂತ ವೆಂದರು. ಹೆಣ್ಣು ಗಂಡು ಎಂಬ ಲಿಂಗ ತಾರತಮ್ಯ ಬೇಡ ಎಂದರು.

ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ಇಂದು ಹೆಣ್ಣು ಮಕ್ಕಳು ಸಮಾನ ಸ್ಥಾನಮಾನ ಪಡೆದಿದ್ದು, ವಿದ್ಯಾರ್ಥಿ ದಿಶೆಯಲ್ಲಿ ಗಮನಿಸಿದಾಗ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಹೆಣ್ಣು ಮಕ್ಕಳೆ ಮುಂಚೂಣಿಯಲ್ಲಿದ್ದಾರೆ. ಇದಲ್ಲದೇ ಕ್ರೀಡೆ, ಸರಕಾರಿ ಉದ್ಯೋಗ, ಚಾಲಕರಾಗಿಯೂ ಕೂಡಾ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರ ಹೆಣ್ಣು ಮಕ್ಕಳಿಗೆ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಪ್ರಗತಿ ಹೊಂದಲು ಶೇ.33 ರಷ್ಟು ಮೀಸಲಾತಿ ಘೋಷಿಸಿದೆ. ನರೇಗಾ ಯೋಜನೆಯಡಿ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ.53 ರಷ್ಟು ಮಹಿಳಾ ಕೂಲಿ ಕಾರ್ಮಿಕರಿದ್ದಾರೆಂದು ತಿಳಿಸಿದರು.

ಮಾಜಿ ದೇವದಾಸಿಯರು ಸಾಕಷ್ಟು ಬದಲಾವೆಯಾಗಿ ಸ್ವತಂತ್ರ ಉದ್ಯೋಗ ಮಾಡಿ ಬದುಕುತ್ತಿದ್ದಾರೆ. ಅವರನ್ನು ಮಾಜಿ ದೇವದಾಸಿ ಎಂಬುದರ ಬದಲು ವಿಶೇಷ ಮಹಿಳೆ ಎಂದು ಕರೆಯಬೇಕಾಗಿದೆ. ಕರಾಟೆಯಲ್ಲಿ ಜಿಲ್ಲೆಗೆ ಪ್ರಥಮ ಬಂದ ಬಾಲಕಿಯನ್ನು ಕಂಡು ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಕಲಿತಿರುವುದು ಸಂತಸ ತಂದಿದೆ ಎಂದರು.

ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ಹೆಣ್ಣು ಮಗುವಿಗೆ ಪಾಲಕರಾದವರು ಖಾಳಜಿ ವಹಿಸಿದಲ್ಲಿ ಕುಟುಂಬಕ್ಕು ಸಮಾಜಕ್ಕೂ ಉತ್ತಮ ಹೆಸರು ತರಬಲ್ಲಳು ಎಂಬುವದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಇಂದು ನಾವೆಲ್ಲ ಹಳುತ್ತಿವಿ, ಮಾಡುತ್ತಿಲ್ಲ. ಮಾಡಿದಂತೆಯೇ ಮಾಡುತ್ತೇವೆ. ಹೇಳುದಂತೆ ಮಾಡುತ್ತಿಲ್ಲ. ಹೆಣ್ಣಿಗೆ ದೇವತೆಯ ಸ್ಥಾನ ಮಾನ ಕೊಡುವುದು ಬೇಡ. ಸಮಾನತೆಯಿಂದ ಕಂಡರೆ ಸಾಕು ಎಂದರು. ಹೆಣ್ಣನ್ನು ಪ್ರಕೃತಿಗೆ ಹೋಲಿಸಲಾಗಿದ್ದು, ಪ್ರಕೃತಿಗೆ ಬೇದವಿಲ್ಲ. ಆದರೆ ಇಂದು ಕೃತಕ ಬೇದವಾಗಿದೆ ಎಂದರು.
ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕರಾಟೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹೆಣ್ಣು ಮಕ್ಕಳನ್ನು ಸನ್ಮಾನಿಸಲಾಯಿತು. ಅಲ್ಲದೇ ಹೆಣ್ಣು ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತಿರಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಜಿಲ್ಲಾ ಅಧಿಕಾರಿ ಗೌರಮ್ಮ ಸಂಕದ, ಕೊಟೆಕ್ ಮಹೇಂದ್ರ ಆರ್‍ಸೆಟಿ ಸಂಸ್ಥೆಯ ನಿರ್ದೇಶಕ ಶರಣಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.