This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

International NewsNational NewsSports News

ಕೊಹ್ಲಿಯನ್ನು ನೋಡಲು ಪಾಕಿಸ್ತಾನದಿಂದ ಲಂಕಾಗೆ ಹೋಗಿದ್ದ ಯುವತಿಗೆ ನಿರಾಸೆ!

ಕೊಹ್ಲಿಯನ್ನು ನೋಡಲು ಪಾಕಿಸ್ತಾನದಿಂದ ಲಂಕಾಗೆ ಹೋಗಿದ್ದ ಯುವತಿಗೆ ನಿರಾಸೆ!

ಕ್ಯಾಂಡಿ: ಭಾರತ ಹಾಗೂ ಪಾಕಿಸ್ತಾನ ತಂಡಗಳ (IND vs PAK) ನಡುವಿನ ಏಷ್ಯಾ ಕಪ್​ನ ಲೀಗ್ ಹಂತದ ಪಂದ್ಯ ಮಳೆಯಿಂದಾಗಿ ರದ್ದಾಗಿರುವ ಬಗ್ಗೆ ಎರಡೂ ತಂಡಗಳ ಅಭಿಮಾನಿಗಳಿಗೆ ಬೇಸರವಿದೆ. ಪಂದ್ಯ ಪೂರ್ಣ ನಡೆದು ನಮ್ಮ ತಂಡಗಳು ಗೆಲ್ಲಬೇಕು ಎಂದು ಇತ್ತಂಡಗಳ ಅಭಿಮಾನಿಗಳು ಬಯಸಿದ್ದರು.

ಏತನ್ಮಧ್ಯೆ, ಪಾಕಿಸ್ತಾನದ (Pakistan Cricket Team) ಯುವತಿಯೊಬ್ಬಳಿಗೆ ಪಂದ್ಯ ರದ್ದಾಗಿರುವುದಕ್ಕಿಂತ ಜಾಸ್ತಿ ವಿರಾಟ್​ ಕೊಹ್ಲಿ (Virat Kohli) ಔಟಾಗಿರುವುದು ಬೇಸರ ಮೂಡಿಸಿದೆಯಂತೆ. ಅಚ್ಚರಿಯೆಂದರೆ ಈ ಫ್ಯಾನ್​ ಗರ್ಲ್​ ವಿರಾಟ್​ ಕೊಹ್ಲಿಯನ್ನು ನೋಡುವುದಕ್ಕೆಂದೇ ಪಾಕ್​ನಿಂದ ಲಂಕಾಗೆ ಬಂದಿದ್ದರು. ಪಂದ್ಯದ ರದ್ದಾದ ಬಳಿಕ ವಾಪಸಾಗುವ ವೇಳೆ ಅವರು ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಯುವತಿ ವಿರಾಟ್ ಕೊಹ್ಲಿಯ ಮೇಲಿನ ಮೆಚ್ಚುಗೆಯ ಮಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದವು. ತನ್ನ ಕೆನ್ನೆಗಳ ಮೇಲೆ ಭಾರತ ಮತ್ತು ಪಾಕಿಸ್ತಾನ ಧ್ವಜಗಳನ್ನು ಎಳೆದಿದ್ದ ಯುವತಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಬದಲಿಗೆ ಕೊಹ್ಲಿ ಉತ್ತಮ ಆಟಗಾರ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಇದು ಸುತ್ತಮುತ್ತಲಿನ ಪ್ರೇಕ್ಷಕರಿಂದ ಕೆಲವು ಗೇಲಿ ಮತ್ತು ಉಲ್ಲಾಸದ ನಿಂದನೆಗಳಿಗೂ ಕಾರಣವಾಯಿತು.

ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ, ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗನಾಗಿರುವುದರಿಂದ ನಾನು ಸ್ವಲ್ಪ ಅಸಮಾಧಾನಗೊಂಡಿದ್ದೇನೆ. ಅವರು ಶತಕ ಗಳಿಸಬೇಕೆಂದು ನಾನು ಬಯಸಿದ್ದೆ ನಾನು ಅವರಿಗಾಗಿ ಮಾತ್ರ ಪಂದ್ಯವನ್ನು ನೋಡಲು ಮತ್ತು ಅವರನ್ನು ನೇರವಾಗಿ ನೋಡಲು ಬಂದಿದ್ದೆ. ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದೇನೆ. ಆದರೆ ನಾನು ವಿರಾಟ್ ಕೊಹ್ಲಿಯನ್ನು ಪ್ರೀತಿಸುತ್ತೇನೆ” ಎಂದು ಹುಡುಗಿ ಹೇಳುತ್ತಿರುವುದು ವೈರಲ್ ವೀಡಿಯೊದಲ್ಲಿ ಕೇಳಿಸುತ್ತದೆ.

ನಿರಾಸೆ ಮೂಡಿಸಿದ್ದ ಕೊಹ್ಲಿ
ಪಾಕಿಸ್ತಾನದ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿರುವ ಕೊಹ್ಲಿ ಈ ಪಂದ್ಯದಲ್ಲಿ ಕೇವಲ 4 (7) ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಶಾಹೀನ್ ಅಫ್ರಿದಿ ವಿರುದ್ಧದ ಇನ್ನಿಂಗ್ಸ್​ನ ಏಳನೇ ಓವರ್​​ನಲ್ಲಿ ಭಾರತದ ಮಾಜಿ ನಾಯಕ ಬೌಲ್ಡ್​ ಆದರು.

ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯಗಳಲ್ಲಿ 14 ಇನಿಂಗ್ಸ್​ಗಳಲ್ಲಿ 45 ಸರಾಸರಿಯಲ್ಲಿ 540 ರನ್ ಗಳಿಸಿದ್ದಾರೆ. ಇದಲ್ಲದೆ, ಟಿ20 ಐನಲ್ಲಿ ಕೊಹ್ಲಿ ಪಾಕಿಸ್ತಾನ ವಿರುದ್ಧ ಹತ್ತು ಇನಿಂಗ್ಸ್​ಗಳಲ್ಲಿ 81.33 ಸರಾಸರಿಯಲ್ಲಿ 488 ರನ್ ಗಳಿಸಿದ್ದಾರೆ ಕೊಹ್ಲಿ.

ಅಂಕಗಳನ್ನು ಹಂಚಿಕೊಂಡ ಭಾರತ ಮತ್ತು ಪಾಕಿಸ್ತಾನ
ಕೊಹ್ಲಿ ಹೊರತುಪಡಿಸಿ, ರೋಹಿತ್ ಶರ್ಮಾ (22 ಎಸೆತಗಳಲ್ಲಿ 11 ರನ್), ಶುಭಮನ್​ ಗಿಲ್ (32 ಎಸೆತಗಳಲ್ಲಿ 10 ರನ್) ಮತ್ತು ಶ್ರೇಯಸ್ ಅಯ್ಯರ್ (9 ಎಸೆತಗಳಲ್ಲಿ 14 ರನ್) ಕೂಡ ಪಂದ್ಯದಲ್ಲಿ ಬೇಗ ಔಟಾಗಿದ್ದರಿಂದ ಭಾರತವು 14.1 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಇಶಾನ್ ಕಿಶನ್ (81 ಎಸೆತಗಳಲ್ಲಿ 82 ರನ್) ಮತ್ತು ಹಾರ್ದಿಕ್ ಪಾಂಡ್ಯ (90 ಎಸೆತಗಳಲ್ಲಿ 87 ರನ್) ಅವರ ವೀರೋಚಿತ ಆಟದ ನೆರವಿನಿಂದ ಭಾರತ 48.5 ಓವರ್​ಗಳಲ್ಲಿ 265 ರನ್​ಗಳೀಗೆ ಆಲೌಟ್ ಆಯಿತು. ಆದಾಗ್ಯೂ, ಮೊದಲ ಇನ್ನಿಂಗ್ಸ್ ನಂತರ ಮಳೆಯಿಂದಾಗಿ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂಕಗಳನ್ನು ಹಂಚಿಕೊಂಡವು.

Nimma Suddi
";