This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsLocal NewsState News

ನಿಯಮ ಉಲ್ಲಂಘಿಸುವ ಚಾಲಕರ ಮೇಲೆ ಕ್ರಮ

ನಿಯಮ ಉಲ್ಲಂಘಿಸುವ ಚಾಲಕರ ಮೇಲೆ ಕ್ರಮ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ

ಬಾಗಲಕೋಟೆ

ಸಂಚಾರಿ ನಿಯಮ ಉಲ್ಲಂಘಿಸುವ ಚಾಲಕರ ಲೈಸನ್ಸ್ ಅಮಾನತುಗೊಳಿಸುವಂತೆ ಜಿಲ್ಲಾಕಾರಿ ಕೆ.ಎಂ.ಜಾನಕಿ ಸಾರಿಗೆ ಇಲಾಖೆ ಅಕಾರಿಗಳಿಗೆ ಸೂಚಿಸಿದರು.

ಡಿಸಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ ಚಾಲನಾಪತ್ರ ಪಡೆಯುತ್ತಿರುವ ಚಾಲಕರಿಗೆ ಒಂದು ಗಂಟೆ ತರಬೇತಿ ನೀಡಲಾಗುತ್ತಿದೆ. ಚಾಲನಾ ಪತ್ರದ ಮಹತ್ವ, ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸಿ ವಾಹನ ಚಾಲನೆ, ವಾಹನವನ್ನು ವಿಮೆಗೆ ಒಳಪಡಿಸುವುದು ಸೇರಿದಂತೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ ನಂತರ ಪರವಾನಿಗ ಪತ್ರ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಏಪ್ರೀಲ್‌ನಿಂದ ಜುಲೈವರೆಗೆ ಪೊಲೀಸ್ ಮತ್ತು ನ್ಯಾಯಾಲಯದಿಂದ ಬಂದಿರುವ ೧೪೭ ಚಾಲನಾ ಅನುಜ್ಞಾಪನಾ ಪತ್ರಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ ೧೩೦ನ್ನು ಅಮಾನತುಗೊಳಿಸಲಾಗಿದೆ. ಬಾಕಿ ೧೭ ಪ್ರಕರಣಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಅಪಘಾತ ಪ್ರಕರಣ ದಾಖಲಾದಲ್ಲಿ ಅಂತವರ ಲೈಸೆನ್ಸ್ ರದ್ಧತಿಗೆ ಸಾರಿಗೆ ಇಲಾಖೆ ಅಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ರಸ್ತೆ ಮತ್ತು ಹೆದ್ದಾರಿ ಪಕ್ಕದಲ್ಲಿರುವ ದಾಬಾ ಮತ್ತು ಹೋಟೆಲ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟಕ್ಕೆ ಸಂಬAಸಿದ ೩೯ ಪ್ರಕರಣ ದಾಖಲಾಗಿವೆ. ಜಿಲ್ಲೆಯ ಶಾಲೆ-ಕಾಲೇಜುಗಳ ಒಬ್ಬ ಶಿಕ್ಷಕರಿಗೆ ರಸ್ತೆ ಸುರಕ್ಷತೆ ಕುರಿತು ತರಬೇತಿ ನೀಡಿ ಮಕ್ಕಳಿಗೆ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಗದ್ದನಕೇರಿ ಕ್ರಾಸ್‌ನಲ್ಲಿ ಸರಕಾರಿ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಸೂಚಿಸದ ಸ್ಥಳದಲ್ಲಿ ಬಸ್ ನಿಲ್ಲಿಸಲು ಸಾರಿಗೆ ಅಕಾರಿಗಳು ಕ್ರಮ ಕೈಗೊಳ್ಳಬೇಕು. ಬೀಳಗಿ ರಾಷ್ಟಿçÃಯ ಹೆದ್ದಾರಿಯಲ್ಲಿ ಸಾಕಷ್ಟು ಏರಿಳಿತ ಸರಿಪಡಿಸಿದ್ದರೂ ಮಳೆಗಾಲದಿಂದ ಸಮಸ್ಯೆಯಾಗುತ್ತಿದೆ. ಮಳೆ ನಂತರ ತಕ್ಷಣವೇ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಎಸ್ಪಿ ಅಮರನಾಥ ರೆಡ್ಡಿ, ಇತ್ತೀಚೆಗೆ ನಡೆದ ಮಾರಣಾಂತಿಕ ರಸ್ತೆ ಅಪಘಾತಗಳ ಹಾಗೂ ರಾಜ್ಯ ಹೆದ್ದಾರಿ, ರಾಷ್ಟಿçÃಯ ಹೆದ್ದಾರಿಗಳಲ್ಲಿ ೨೮ ಬ್ಲಾಕ್‌ಸ್ಪಾಟ್ ಗುರ್ತಿಸಿದ್ದು, ಅಂತಹ ಸ್ಥಳಗಳ ಸುಧಾರಣೆ ಹಾಗೂ ಸಂಚಾರಿ ಸೂಚನಾ ಫಲಕÀ ಅಳವಡಿಕೆ ಕುರಿತು ಸಂಬAಸಿದ ಅಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಇಂತಹ ಅನೇಕ ಬ್ಲಾಕ್‌ಸ್ಪಾಟ್‌ಗಳಿದ್ದು ಮಾಹಿತಿ ನೀಡುವಂತೆ ಅಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಕಾರಿ ಸಂತೋಷ ಜಗಲಾಸರ, ಪಿಡಬ್ಲೂಡಿ ಎಇಇ ನಾರಾಯಣ ಕುಲಕರ್ಣಿ, ಪ್ರಾದೇಶಿಕ ಸಾರಿಗೆ ಅಕಾರಿ ಆರ್.ಎಲ್.ಹೊಸಮನಿ ಸೇರಿದಂತೆ ನಾನಾ ಇಲಾಖೆ ಅಕಾರಿಗಳು ಇದ್ದರು.

 

";