This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Entertainment NewsState News

ಅಪ್ಪು ಜನ್ಮದಿನಕ್ಕೆ ನಟಿ ತಾನ್ಯ ಸ್ಟೇಪ್ ಹಾಕಲು ರೆಡಿ

ಬಸಣ್ಣಿ ಬಾ ಹಾಡಿಗೆ ಚಾಲೆಂಜಿಂಗ್ ಸ್ಟಾರ್ ಜೊತೆ ಥೈ ಥಕ ಥೈ ಕುಣಿದಿದ್ದವರು ತಾನ್ಯ ಹೋಪ್. ಆ ನಂತರ ಉದ್ಘರ್ಷ, ಅಮರ್, ಖಾಕಿ, ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ತಾನ್ಯ, ಕಬ್ಜ ಚಿತ್ರದ ಹಾಡೊಂದಕ್ಕೂ ಕೂಡ ಸೊಂಟ ಬಳುಕಿಸಿದ್ದರು. ಇಂಥಹ ತಾನ್ಯ ಹೋಪ್ ಇದೀಗ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ತಮ್ಮ ನೃತ್ಯದ ಮೂಲಕ ಅಪ್ಪುಗೆ ನಮನ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಹೌದು, ಪತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಪುತ್ರ ಸಮರ್ಜಿತ್ ಲಂಕೇಶ್ ಅವರಿಗೆ ಚಿತ್ರವೊಂದನ್ನ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರು ಗೌರಿ. ಈ ವಿಚಾರ ನಿಮಗೆ ಈಗಾಗಲೇ ಗೊತ್ತಿರಬೇಕು. ಸದ್ಯದ ಲೇಟೆಸ್ಟ್ ಸಮಾಚಾರ ಏನೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು “ಗೌರಿ” ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ಹಾಡಿಗೆ ಸಮರ್ಜಿತ್ ಲಂಕೇಶ್ ಜೊತೆ ಕನ್ನಡವೂ ಸೇರಿ ತೆಲುಗು ಹಾಗೂ ತಮಿಳಿನಲ್ಲಿ ಹೆಸರು ಮಾಡಿರುವ ಖ್ಯಾತ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರಂತೆ.

ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ದೊಡ್ಮನೆಯಿಂದ ಸಿದ್ಧವಾಗ್ತಿದೆ ಪುನೀತ್ ರಾಜಕುಮಾರ್ ಅವರ ಚಿತ್ರಗಳ ಪ್ರಸಿದ್ದ ಹಾಡುಗಳಿಗೆ ಸಮರ್ಜಿತ್ ಹಾಗೂ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ.

ಸದ್ಯಕ್ಕೆ ಈ ಸ್ಪೆಷಲ್ ಸಾಂಗ್ ಗೆ ಡ್ಯಾನ್ಸ್ ತಾಲೀಮು ನಡೆಯುತ್ತಿದೆ. ಸದ್ಯದಲ್ಲೇ ಈ ಹಾಡಿನ ಚಿತ್ರೀಕರಣ ಕೂಡ ನಡೆಯಲಿದೆ. ನಾನು ಅಪ್ಪು ಅಭಿಮಾನಿ ಎಂದ ತಾನ್ಯ ವರ್ಷದ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿರುವ ತಾನ್ಯ ಹೋಪ್ ಅಪ್ಪು ಅಭಿಮಾನಿಯೂ ಹೌದು.

ಖುದ್ದು ತಾನ್ಯ ಈ ವಿಚಾರವನ್ನ ಹೇಳಿಕೊಂಡಿದ್ದಾರೆ ಕೂಡ. ಇನ್ನೂ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಗೂ ಕೂಡ ಅಪ್ಪು ಡ್ಯಾನ್ಸ್ ಅಂದರೆ ಅಚ್ಚು ಮೆಚ್ಚು. ಈ ಅರ್ಥದಲ್ಲಿ ಇದು ಅಪ್ಪು ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಹಾಗೂ ಅಭಿಮಾನಿಗಳಿಗೋಸ್ಕರ ಸಿದ್ಧವಾಗುತ್ತಿರುವ ವಿಶೇಷ ಹಾಡು ಎನ್ನಲು ಅಡ್ಡಿ ಇಲ್ಲ.

ಒಟ್ಟಿನಲ್ಲಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಬೇಡಿಕೆಯಲ್ಲಿರುವ ನಟಿಯರ ಪೈಕಿ ತಾನ್ಯ ಹೋಪ್ ಕೂಡ ಒಬ್ಬರು. ತುಂಟ ನಗೆಯಿಂದಲೇ ಕನ್ನಡಿಗರ ಹಾರ್ಟ್ ಫೇವರೇಟ್ ಆಗಿರುವ ತಾನ್ಯ ಹೋಪ್ ಸದ್ಯಕ್ಕೆ ಸಮರ್ಜಿತ್ ಜೊತೆ ಸೇರಿ ಅಪ್ಪುಗೆ ನೃತ್ಯ ನಮನವನ್ನ ಸಲ್ಲಿಸಲು ಅಣಿಯಾಗಿದ್ದಾರೆ.