This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ಅಕ್ಕನ ವಿವಿಯ ಘಟಿಕೋತ್ಸವ

19 ರಂದು ಅಕ್ಕನ ವಿವಿಯ 11 ನೇ ಘಟಿಕೋತ್ಸವ

ವಿಜಯಪುರ:ಕೊರೊನಾದಿಂದಾಗಿ ಮುಂದೂಡಲ್ಪಟ್ಟಿದ್ದ ಇಲ್ಲಿನ ಅಕ್ಕಮಹಾದೇವಿ ವಿವಿಯ 11ನೆಯ ಘಟಿಕೋತ್ಸವ ಸೆ. 19ರಂದು ಬೆಳಗ್ಗೆ 11 ಗಂಟೆಗೆ ಜ್ಞಾನಶಕ್ತಿ ಆವರಣದ ಆಡಳಿತ ಭವನದ ಎದುರು ನಿರ್ಮಿಸಿರುವ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿವಿಯ ಹಂಗಾಮಿ ಕುಲಪತಿ ಪ್ರೊ. ಓಂಕಾರ ಕಾಕಡೆ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಿಲ್ಲಿಯಲ್ಲಿರುವ ವಿವಿಯ ಅನುದಾನ ಆಯೋಗ ಸದಸ್ಯ ಪ್ರೊ. ಎಂ.ಕೆ. ಶ್ರೀಧರ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ಮಹಿಳಾ ವಿವಿಯಿಂದ ನಾನಾ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 67 ವಿದ್ಯಾರ್ಥಿಗಳಿಗೆ 70 ಚಿನ್ನದ ಪದಕ ಹಾಗೂ ನಗದು ಬಹುಮಾನ ಮತ್ತುಒಟ್ಟು 55 ವಿದ್ಯಾರ್ಥಿನಿಯರಿಗೆ ಪಿಎಚ್‍ಡಿ ಪದವಿಯನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದರು.

ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ಸೇರಿ ಒಟ್ಟು 9,371 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ 1087 ವಿದ್ಯಾರ್ಥಿನಿಯರಿಗೆ ನಾನಾ ವಿಷಯಗಳಲ್ಲಿ ಎಂಎ-415, ಎಂ.ಕಾಂ.- 271, ಎಂಬಿಎ- 45, ಎಂಎಸ್‍ಸಿ-241, ಎಂಎಡ್-8, ಎಂಪಿಎಡ್- 11, ಎಂಎಲ್‍ಐಎಸ್‍ಸಿ-23, ಎಂಎಸ್‍ಡಬ್ಲ್ಯೂ-47 ಮತ್ತು ಎಂಸಿಎ-16 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗೆ ಅರ್ಹರಾಗಿದ್ದಾರೆ ಎಂದವರು ತಿಳಿಸಿದರು.

ಪಿಜಿ ಡಿಪ್ಲೋಮಾ ಕೋರ್ಸುಗಳಾದ ಯೋಗ ಅಧ್ಯಯನದಲ್ಲಿ 10, ಡಿಎಫ್‍ಎಂ ನಲ್ಲಿ 23 ಹೀಗೆ ಒಟ್ಟು 54 ವಿದ್ಯಾರ್ಥಿನಿಯರು ಡಿಪ್ಲೋಮಾ ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ಜೊತೆಗೆ ಒಟ್ಟು 8230 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲಿದ್ದು ಈ ಪೈಕಿ ಬಿಎ-3738, ಬಿಎಸ್‍ಡಬ್ಲ್ಯೂ-40, ಬಿಕಾಂ- 3040, ಬಿಬಿಎ- 158, ಬಿಎಸ್‍ಸಿ-1133, ಬಿಎಚ್‍ಎಸ್‍ಸಿ-9, ಬಿಸಿಎ- 79 ಮತ್ತು ಬಿಎಫ್‍ಟಿ-24 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದವರು ವಿವರಿಸಿದರು.

ಆನ್‍ಲೈನ್‍ನಲ್ಲಿ ವೀಕ್ಷಣೆ : ಘಟಿಕೋತ್ಸವ ಯಶಸ್ವಿಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳು ಭರದ ಸಿದ್ಧತೆ ಕೈಗೊಂಡಿವೆ ಎಂದು ತಿಳಿಸಿದ ಅವರು, ಕೊರೊನಾ ಹಿನ್ನೆಲೆಯಲ್ಲಿಈ ಬಾರಿಯ ಘಟಿಕೋತ್ಸವದಲ್ಲಿ ಕೇವಲ ಚಿನ್ನದ ಪದಕ ಪಡೆದಿರುವ ವಿದ್ಯಾರ್ಥಿನಿಯರು ಹಾಗೂ ಪಿಎಚ್‍ಡಿ ಪದವೀಧರರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಆನ್‍ಲೈನ್ ಮೂಲಕವೇ ಘಟಿಕೋತ್ಸವ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಈ ಘಟಿಕೋತ್ಸವವನ್ನು ಅಕ್ಕ ಟಿವಿ ಯುಟ್ಯೂಬ್ ನ್ಯೂಸ್‍ಚಾನೆಲ್ ಲಿಂಕ್ ಮೂಲಕ ಮತ್ತುಕೆಎಸ್‍ಡಬ್ಲ್ಯುಯು ಮೀಡಿಯಾ ಸೆಲ್ ಫೇಸ್‍ಬುಕ್ ಲೈವ್ ಮೂಲಕ ವೀಕ್ಷಿಸಬಹುದಾಗಿದೆ ಎಂದರು.

ವಿದ್ಯಾರ್ಥಿನಿಯರು ಸಾಮಾಜಿಕ ಅಂತರ ಕಾಪಾಡಲು ಎರಡು ಉಪ ವೇದಿಕೆಗಳನ್ನು ರಚಿಸಲಾಗಿದ್ದು, ಪದಕ/ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಲು ಮಾತ್ರ ವಿದ್ಯಾರ್ಥಿನಿಯರು ಘಟಿಕೋತ್ಸವದ ಮುಖ್ಯ ವೇದಿಕೆಗೆ ಆಗಮಿಸಿ ಪದಕ, ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸುತ್ತಾರೆ ಎಂದರು.

ಆಹ್ವಾನಿತರು ಮತ್ತುವಿದ್ಯಾರ್ಥಿನಿಯರಿಗೆ ಆವರಣ ಪ್ರವೇಶಕ್ಕೆ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಸಭೆ ಮುಗಿಯವವರೆಗೆ ಮಾಸ್ಕ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ ಎಂದರು.

ಘಟಿಕೋತ್ಸವದ ದಿನ ಇಡೀ ಆಡಳಿತ ಭವನ, ಮುಖ್ಯ ವೇದಿಕೆ ಹಾಗೂ ಉಪ ವೇದಿಕೆಗಳನ್ನು ಡಿಸ್‍ಇನ್ಪೆಕ್ಷನ್ ಮಾಡಿ ಶುಚಿಗೊಳಿಸಲಾಗುತ್ತದೆ. ಅಲ್ಲದೇ ಸೆನಿಟೈಸರ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಇದಕ್ಕಾಗಿ ಆರೋಗ್ಯ ಕೇಂದ್ರದ ಸಿಬ್ಬಂದಿ ನಿಯೋಜಿಸಲಾಗಿದೆ. ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಆರೋಗ್ಯ ಕಾಳಜಿಗಾಗಿ ಅಗತ್ಯ ಕ್ರಮಗಳನ್ನು ಕೈಕೊಳ್ಳಲು ಸಂಬಂಧಪಟ್ಟ ಸಮಿತಿಗಳಿಗೆ ಸೂಚನೆ ನೀಡಲಾಗಿದೆ. ಘಟಿಕೋತ್ಸವದಲ್ಲಿ ಮೊಬೈಲ್ ಫೋನ್, ವಿಡಿಯೋ ಕ್ಯಾಮೆರಾ, ಸ್ಟಿಲ್ ಕ್ಯಾಮೆರಾಗಳನ್ನು ನಿಷೇಧಿಸಲಾಗಿದೆ ಎಂದವರು ತಿಳಿಸಿದರು.

ವಿವಿಯ ಕುಲಸಚಿವೆ ಪ್ರೊ.ಆರ್. ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ, ಘಟಿಕೋತ್ಸವದ ಸಂಯೋಜನಾಧಿಕಾರಿ ಪ್ರೊ. ಡಿ. ಎಂ. ಜ್ಯೋತಿ ಮತ್ತಿತರರಿದ್ದರು.

Nimma Suddi
";