This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Education NewsState News

ನಾಗರ ಚತುರ್ಥಿ ಆಚರಣೆ ಕುರಿತು ನಿಮಗಿರಬೇಕಾದ ಮಾಹಿತಿ

1……ಪಂಚಮಿ ತಿಥಿಯು 15 ಕೃಷ್ಣಪಕ್ಷ ಹಾಗೂ ಶುಕ್ಲ ಪಕ್ಷ ತಿಥಿಗಳಲ್ಲಿ ಬರುವ ಐದನೇ ತಿಥಿಯಾಗಿರುತ್ತದೆ

2….ಈ ತಿಥಿಯಲ್ಲಿ ನಾಗದೇವತೆಗಳು ಹುಟ್ಟಿರುವುದರಿಂದ ಪಂಚಮಿತಿಯಲ್ಲಿ ನಾಗದೇವತೆಗಳ ಆರಾಧನೆಯನ್ನು ಮಾಡುತ್ತಾರೆ ಹಾಗಾಗಿ ಈ ಟಿವಿಗೆ ನಾಗದೇವತೆಗಳೇ ಅಧಿಪತಿಯಾಗಿರುತ್ತಾರೆ

ಅತ್ಯಧಿ ದೇವತೆ ಶಿವ ಪರಮಾತ್ಮ ಆಗಿರೋದ್ರಿಂದ ಶಿವನ ಪೂಜೆಯನ್ನು ಸಹ ಮಾಡುತ್ತಾರೆ

ಈ ತಿಥಿಯಲ್ಲಿ ಜ್ಞಾನ ದೇವತೆಯಾದಂತಹ ಸರಸ್ವತಿಯ ಜನನವು ಸಹ ಆಗಿದೆ ಎಂಬ ಉಲ್ಲೇಖವಿದೆ

ಈ ತಿಥಿಯು ಗುರುಗ್ರಹದ ಅಧಿಪತ್ಯವನ್ನು ಹೊಂದಿರುತ್ತದೆ

3… ಪಂಚಮಿ ತಿಥಿಯು ಶುಭ ತಿಥಿ ಆಗಿರುವುದರಿಂದ ಶುಭ ಎಲ್ಲಾ ಶುಭ ಕಾರ್ಯಗಳಲ್ಲಿ ಮುಹೂರ್ತ ರೂಪದಲ್ಲಿ ಬಳಸುತ್ತಾರೆ ತುಂಬಾ ಶ್ರೇಷ್ಠವಾದ ಫಲವನ್ನು ಈ ತಿಥಿಯು ನೀಡುತ್ತದೆ

ಈ ತಿಥಿಯು ಕೆಲವು ವಾರಗಳ ಜೊತೆಯಲ್ಲಿ ಬಂದಾಗ ಉಂಟಾಗುವ ಯೋಗಗಳು ಈ ಕೆಳಕಂಡಂತೆ ಇದೆ

ಪಂಚಮತಿತಿ ಗುರುವಾರ ಬಂದಾಗ ಸಿದ್ದಿ ಯೋಗವನ್ನು ಉಂಟಾಗುತ್ತದೆ
ಫಲಿತಾಂಶ : ಈ ದಿನ ಮಾಡಿದಂತ ಎಲ್ಲಾ ಕೆಲಸಗಳು ಪೂರ್ಣವಾಗುತ್ತವೆ ಎಂಬ ನಂಬಿಕೆ ಇದೆ

ಪಂಚಮಿ ತಿಥಿ ಶನಿವಾರ ಬಂದಾಗ ಮೃತ್ಯುಗವನ್ನು ಉಂಟಾಗುತ್ತದೆ

ಫಲಿತಾಂಶ :- ಶನಿವಾರ ಈ ತಿಥಿಯು ಬಂದಾಗ ಅತ್ಯಂತ ಅಶುಭಾಕರ ತಿಥಿ ಎಂದು ಪರಿಗಣಿಸಲಾಗಿದೆ

3…. *ಪಂಚಮಿ ತಿಥಿ ಎಂದು* *ಮಾಡುವಂತ ಕೆಲವು* *ಕೆಲಸಗಳು*

ಎಲ್ಲಾ ಶುಭ ಕಾರ್ಯಗಳು ಅಂದರೆ ವಿವಾಹ ಗೃಹಪ್ರವೇಶ ವಿದ್ಯಾಭ್ಯಾಸ ಆರಂಭ ಮಂತ್ರ ಸಿದ್ಧಿ ಧನ ಸಂಗ್ರಹಣೆ….. ಇತ್ಯಾದಿ ಎಲ್ಲಾ ಶುಭ ಕಾರ್ಯಗಳನ್ನು ಸಹ ಈ ತಿಥಿಯಲ್ಲಿ ಮಾಡಬಹುದು

ಆದರೆ ಯಾವುದೇ ಕಾರಣಕ್ಕೂ ಪಂಚಮಿ ತಿಥಿಯಲ್ಲಿ ಸಾಲವನ್ನು ಮಾಡಬಾರದು

4……*ಈ ತಿಥಿಯಲ್ಲಿ* *ಹುಟ್ಟಿದವರ* *ಗುಣಸ್ವಭಾವಗಳು*

ಸಾಮಾಜಿಕವಾಗಿ ಹೊಂದಿಕೊಳ್ಳುತ್ತಾರೆ, ಜ್ಞಾನಿಗಳು ಉತ್ತಮ ನೆಡವಳಿಕೆಯನ್ನು ಹೊಂದಿರುತ್ತಾರೆ,
ಹೆತ್ತವರನ್ನು ಪ್ರೀತಿಸುತ್ತಾರೆ
ದತ್ತಿ ಸಂಬಂಧ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ
ನ್ಯಾಯದ ಹಾದಿಯಲ್ಲಿ ನಡೆಯುತ್ತಾರೆ
ಪ್ರೀತಿ ಪ್ರೇಮ ಸಂಬಂಧಗಳಲ್ಲಿ ಅಷ್ಟಾಗಿ ಯಶಸ್ಸು ಸಿಗುವುದಿಲ್ಲ

ತಮ್ಮ ಕೆಲಸ ಕಾರ್ಯಗಳಲ್ಲಿ ಸದಾ ಎಚ್ಚರಿಕೆಯಿಂದ ಇರುತ್ತಾರೆ

ಆಗಾಗ ಸ್ವಲ್ಪ ಸೋಮಾರಿಯಾದರೂ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಗಮನವನ್ನು ತೀವ್ರವಾಗಿ ಹರಿಸುತ್ತಾರೆ

ತಮ್ಮ ಕುಟುಂಬ ಸಂಬಂಧದೊಂದಿಗೆ ಇರಲು ಇಷ್ಟಪಡುತ್ತಾರೆ ಮತ್ತು ಅದರ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆ

ಉನ್ನತ ಶಿಕ್ಷಣಗಳಿಗಾಗಿ ವಿದೇಶಕ್ಕೆ ಹೋಗುವ ಯೋಗ ಇರುತ್ತದೆ
ಭಾವನಾತ್ಮಕ ಹಾಗೂ ಬೌದ್ಧಿಕವಾಗಿ ಪ್ರಬಲರಾಗಿರುತ್ತಾರೆ. ಉತ್ತಮ ಜೀವನವನ್ನು ನಡೆಸುತ್ತಾರೆ ಹಾಗೂ ಅತ್ಯಂತ ಪ್ರಸಿದ್ಧರು ಆಗಿರುತ್ತಾರೆ

5… ಪಂಚಮಿ ತಿಥಿಗಳಲ್ಲಿ ಸಾಮಾನ್ಯವಾಗಿ ಸಾಂಪ್ರದಾಯಿಕ ಹಬ್ಬಗಳು ಆಚರಣೆಯಲ್ಲಿ ಇರುತ್ತವೆ
ಅವುಗಳು ಈ ಕೆಳಕಂಡಂತೆ ಇವೆ

*ಋಷಿ ಪಂಚಮಿ*

ಭಾದ್ರಪದ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಎಂದು ಋಷಿ ಪಂಚಮಿಯನ್ನು ಆಚರಿಸಲಾಗುತ್ತದೆ ಈ ದಿನ ಸಂತರನ್ನು ಭಗವದ್ಕತ ಪಡಿಸುವ ಮೂಲಕ ಪೂಜಿಸಲಾಗುತ್ತದೆ
ಇದರಿಂದ ಅನೇಕ ರೀತಿಯ ಪಾಪಗಳಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆ ಇದೆ ಹಾಗೂ ಋಷಿಮುನಿಗಳ ಅಭಯ ಹಸ್ತ ಅಥವಾ ಆಶೀರ್ವಾದ ದೊರಕುತ್ತದೆ ಎಂಬ ಪ್ರತಿ ದಿವಸ ಇರುತ್ತದೆ

*ರಂಗ ಪಂಚಮಿ*

ಹೋಳಿ ಹಬ್ಬದ ನಂತರ ಬರುವ ಪಾಲ್ಗುಣ ಮಾಸದ ಪಂಚಮಿ ತಿಥಿಯನ್ನು ರಂಗ ಪಂಚಮಿ ಎಂದು ಆಚರಿಸಲಾಗುತ್ತದೆ ಈ ದಿನ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಮತ್ತು ಜನರು ಈ ದಿನ ಬಣ್ಣಗಳೊಂದಿಗೆ ಆಟವಾಡುತ್ತಾರೆ
ಇದರಿಂದ ಮನರಂಜನೆ ಹಾಗೂ ಮನಸ್ಸಿಗೆ ಸಂತೋಷ ಸಿಗುವಂತಹ ಫಲಗಳು ಲಭ್ಯವಾಗುತ್ತದೆ

*ವಸಂತ ಪಂಚಮಿ*
ಈ ಆಚರಣೆಯು ದ್ವಾಪರ ಯುಗದಲ್ಲಿ ನಡೆದಿರುತ್ತದೆ ಎಂದು ತಿಳಿದು ಬರುತ್ತದೆ
ಸರಸ್ವತಿ ದೇವಿಯು ಅವತಾರ ಮಾಡಿದ ದಿನ ಎಂದು ಹೇಳಲಾಗುತ್ತದೆ
ಪೌರಾಣಿಕ ಹಿನ್ನೆಲೆಯಲ್ಲಿ ಬ್ರಹ್ಮನ ಮನಸ್ಸಿನಿಂದ ಸರಸ್ವತಿ ಹುಟ್ಟಿದಳು ಎಂದು ಹೇಳಲಾಗುತ್ತದೆ

ಗೋವರ್ಧನಗಿರಿಯಲ್ಲಿ ಮಗ ಶುದ್ಧ ಪಂಚಮಿಯ ದಿನದಂದು ಅದ್ದೂರಿಯಾಗಿ ವಸಂತ ಪಂಚಮಿ ನಡೆಯುತ್ತದೆ ಎಂಬ ಉಲ್ಲೇಖಗಳು ಇದೆ ಈ ದಿನ ಶ್ರೀ ಕೃಷ್ಣನ ನೃತ್ಯವನ್ನು ನೋಡಲು ಚಂದ್ರನು ಹಸ್ತ ಆಗದೆ ಬ್ರಹ್ಮನ ಒಂದು ರಾತ್ರಿ ಎಷ್ಟು ಕಾಲದವರೆಗೂ ಇರುತ್ತಾನೆ. ಆದ್ದರಿಂದ ಗೋವರ್ಧನಗಿರಿಯಲ್ಲಿ ಕೃಷ್ಣ ನೃತ್ಯ ಮಾಡಿದ ಪ್ರದೇಶ ಚಂದ್ರ ಸರೋವರ ಎಂದು ಕರೆಯಲಾಗುತ್ತದೆ

*ಸರಸ್ವತಿ ಪಂಚಮಿ*

ಪಂಚಮಿ ತಿಥಿಯ ಅಧಿದೇವತೆ ಸರಸ್ವತಿಯು ಸಹ ಆಗಿರುವುದರಿಂದ ಪ್ರತಿ ಪಂಚಮಿ ಎಂದು ಸರಸ್ವತಿ ಪೂಜೆ ಮಾಡುವುದರಿಂದಲೂ ಅಪರಿಮಿತ ಜ್ಞಾನವು ಸಹ ಲಭ್ಯವಾಗುತ್ತದೆ

*ನವರಾತ್ರಿಯ ಪಂಚಮಿ*

ನವರಾತ್ರಿಯಲ್ಲಿ ಪಂಚಮಿ ತಿಥಿಯಲ್ಲಿ ಶಿವ ಸರಸ್ವತಿ ನಾಗದೇವತೆಗಳು ಇವರನ್ನು ಪೂಜೆ ಮಾಡುವುದರಿಂದ ಜ್ಞಾನ ಮೋಕ್ಷ ಲಭಿಸುತ್ತದೆ ಹಾಗೂ ನಾಗದೋಷದಂತ ದೋಷಗಳು ಪರಿಹಾರವಾಗುತ್ತದೆ

*ನಾಗ ಪಂಚಮಿ*

ಈ ದಿನ ನಾಗದೇವತೆಗಳನ್ನು ಪೂಜಿಸಲಾಗುತ್ತದೆ
ಈ ದಿನದಲ್ಲಿ ಕಾಳ ಸರ್ಪ ಶಾಂತಿ ಅಥವಾ ಸರ್ಪ ಶಾಂತಿಗಳನ್ನು ಮಾಡಿಕೊಂಡರೆ ನಾಗದೇವತೆಗಳ ಅನುಗ್ರಹ ದೊರೆಯುತ್ತದೆ ನಾಗದೋಷ ನಿವಾರಣೆಯು ಆಗುತ್ತದೆ

ನಾಗ ಪಂಚಮಿಯ ದಿನ ಶಿವನನ್ನು ಪೂಜೆ ಮಾಡಲು ಕಾರಣ, ಸಮುದ್ರ ಮಂಥನ ವಾಗುವಂತಹ ಸಮಯದಲ್ಲಿ ಸಮುದ್ರದಲ್ಲಿ ವಿಶ್ವವನ್ನು ನಾಶ ಮಾಡುವಂತಹ ವಿಷವು ಉತ್ಪತ್ತಿಯಾಗುತ್ತದೆ ಲೋಕ ಕಲ್ಯಾಣಕ್ಕಾಗಿ ಶಿವನು ಆ ವಿಷಯವನ್ನು ಕುರಿತು ತನ್ನ ಕಂಠದಲ್ಲಿ ಇರಿಸಿಕೊಳ್ಳುತ್ತಾನೆ ಹಾಗಾಗಿ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ ಇದರಿಂದ ಶಿವನಿಗೆ ನೀಲಕಂಠ ಎಂಬ ಹೆಸರು ಬರುತ್ತದೆ, ನಂತರ ಹಾವನ್ನು ತೆಗೆದು ತನ್ನ ಕಂಠದಲ್ಲಿ ಸುತ್ತುಕೊಳ್ಳುವುದರಿಂದ ನೀಲಕಂಠವನ್ನು ಮುಚ್ಚಿಕೊಳ್ಳುತ್ತಾನೆ ಇದರಿಂದ ನಾಗಾಭರಣ ಎಂಬ ಹೆಸರು ಬರುತ್ತದೆ ಶಿವನಿಗೆ

ನಾಗರಹಾವು ಶಿವ ಮತ್ತು ಮಹಾವಿಷ್ಣು ಇಬ್ಬರಿಗೂ ಸಹ ಪ್ರಿಯವಾದದ್ದು ಆಗಿರುವುದರಿಂದ ಶ್ರಾವಣ ಮಾಸ ದಲ್ಲಿ ಬರುವ ನಾಗಪಂಚಮಿ ನಾಗದೇವತೆಗಳ ಜೊತೆಗೆ ಮಹಾವಿಷ್ಣು ಮತ್ತು ಮಹಾಶಿವ ಇಬ್ಬರಿಗೂ ಸಮರ್ಪಿತವಾಗಿರುತ್ತದೆ ಹಾಗಾಗಿ ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರ ಶಿವನಿಗೆ ಶ್ರಾವಣ ಶನಿವಾರ ಮಹಾವಿಷ್ಣುವಿಗೆ ಭಕ್ತಾದಿಗಳು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ ಹಾಗೂ ದರ್ಶನವನ್ನು ಮಾಡುತ್ತಾರೆ

 

6. *ಪಂಚಮಿ ತಿಥಿಗಳಲ್ಲಿ ನಾಗ* *ದೇವರಿಗೆ ಹೆಚ್ಚಿನ* *ಪ್ರಾಮುಖ್ಯತೆಯನ್ನು ನೀಡಲು* *ಕಾರಣ*

ಆದಿ ಕೇಶನ್ನು ಭೂಮಿಯನ್ನು / ಪೃಥ್ವಿಯನ್ನು ತನ್ನ ಹೆಡೆಯ ಮೇಲೆ ಹೊತ್ತಿದ್ದಾನೆ ಎಂಬ ಪ್ರಕೃತಿಯ ಕಾರಣ, ಆದಿಶೇಷನಿಗೆ ಮಾಣಿಕ್ಯವೂ ಸಹ ಆತನ ಶಿರದಲ್ಲಿ ಇದೆ ಹಾಗೂ ಶ್ರೀ ಮಹಾವಿಷ್ಣುವಿನ ತಮೋ ಗುಣದಿಂದ ಆದಿಶೇಷನು ಉತ್ಪನ್ನನಾಗಿದ್ದಾನೆ

ಮಹಾಸಾಗರದಲ್ಲಿ ಆದಿಶೇಷನ ಹಾಸನದ ಮೇಲೆ ಮಹಾವಿಷ್ಣು ಯೋಗ ನಿದ್ರೆಯಲ್ಲಿ ಮಲಗಿರುತ್ತಾರೆ

ತ್ರೇತ ಯುಗದಲ್ಲಿ ಶ್ರೀ ವಿಷ್ಣು ರಾಮನ ಅವತಾರ ಎತ್ತಿದಾಗ ಆದಿಶೇಷನು ಲಕ್ಷ್ಮಣನ ಅವತಾರ ಎತ್ತಿದ

ದ್ವಾಪರ ಯುಗದಲ್ಲಿ ಮತ್ತು ಕಲಿಗಾಲದ ಸಂಧಿಕಾಲದಲ್ಲಿ ಆದಿಶೇಷನು ಬಲರಾಮನ ಅವತಾರವನ್ನು ಎತ್ತಿದ್ದ

ಶ್ರೀ ಕೃಷ್ಣನು ಯಮುನಾ ನದಿಯಲ್ಲಿ ಹಾಳದಲ್ಲಿದ್ದ ಕಾಲಿಂಗ ಸರ್ಪವನ್ನು ಮರ್ಧನ ಮಾಡಿದಾಗ ಆ ದಿನವು ಶ್ರಾವಣ ಶುಕ್ಲ ಪಕ್ಷದ ಪಂಚಮಿ ಯಾಗಿತ್ತು ಎಂಬುದು ವಿಶೇಷ ವಿಷಯ

ನಾಗಗಳಲ್ಲಿ ಅತ್ಯಂತ ಶ್ರೇಷ್ಠನಾದ ಅನಂತ ಅದು ನಾನೇ ಎಂಬಂತೆ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುತ್ತಾರೆ

ನಾಗ ಪಂಚಮಿ ದಿನ ನಾಗದೇವತೆಗಳು,
ಮಹಾ ಶಿವ
ಮಹಾವಿಷ್ಣು ಇವರು ಪ್ರಮುಖ ದೇವತೆಗಳಾಗಿರುತ್ತಾರೆ, ಇದರ ಜೊತೆಗೆ ಸರಸ್ವತಿ ಹಾಗೂ ಬೃಹಸ್ಪತಿ ಅನುಗ್ರಹ ಸಹ ದೊರೆಯುತ್ತದೆ

ನಾಗ ಪಂಚಮಿ ದಿನ ನಾಗದೇವರಿಗೆ ತನಿ ಮೇಲೆ ತಿಳಿಸಿದ ಎಲ್ಲಾ ದೇವತೆಗಳಿಗೂ ಅಭಿಷೇಕವನ್ನು ಮಾಡುವುದು
ಎಲ್ಲದಕ್ಕಿಂತ ಮುಖ್ಯವಾಗಿ ಈ ದಿನ ನೈವೇದ್ಯ ತುಂಬಾ ವಿಶೇಷವಾಗಿರುತ್ತದೆ
ಹಾಲು ತುಪ್ಪ ಸಕ್ಕರೆ ಮಿಶ್ರಣವನ್ನು ನೈವೇದ್ಯ ಮಾಡುವುದು ನಾಗದೇವರಿಗೆ ಪ್ರಿಯವಾಗಿರುತ್ತದೆ
ಹಾಗೂ ತಂಬಿಟ್ಟು ಎಳ್ಳಿನಂಡೆಗಳು ಸಿಹಿ ಅನ್ನದ ನೈವೇದ್ಯವನ್ನು ಸಹ ಪ್ರಮುಖ ನೈವೇದ್ಯಗಳು ಎಂದು ಹೇಳಲಾಗುತ್ತದೆ

ನಾಗದೇವರಿಗೆ ಮನೆಯಲ್ಲಿ ಹಾಲಿನ ಅಭಿಷೇಕ ಮಾಡುವವರು ಮಾಡಬಹುದು
ಇಲ್ಲ ಉತ್ತ ಹಾಗೂ ಅರಳಿಯಕಟ್ಟೆಯ ಕೆಳಗಿರುವಂತಹ ನಾಗದೇವತೆಗಳಿಗೆ
ತನಿಯರುವುದರ ಮುಖಾಂತರ ನಾಗರಪೂಜೆಯನ್ನು ಮಾಡಬಹುದು
ಯಾವುದು ಆಗಲಿಲ್ಲ ಎಂದರೆ ನಾಗ ಕ್ಷೇತ್ರಗಳಿಗೆ ಅಥವಾ ನಾಗ ದೇವಾಲಯಗಳು ಹೋಗಿ ದರ್ಶನ ಮಾಡಿಕೊಂಡು ಬರಬಹುದು

ಇದು ಅಲ್ಲದೆ ಶಿವ ದೇವಾಲಯ ಹಾಗೂ ಶ್ರೀರಂಗನಾಥ ಅಥವಾ ಮಹಾ ವಿಷ್ಣುವಿಗೆ ಸೇಮ್ ಸಂಬಂಧ ಪಟ್ಟಂತ ದೇವತೆಗಳ ದೇವಾಲಯಗಳು ಅಥವಾ ಕ್ಷೇತ್ರಗಳಿಗೂ ಸಹ ಹೋಗಿ ದರ್ಶನ ಮಾಡಿ ಬಂದರೂ ಸಹ ನಾಗದೇವತೆಗಳ ಅನುಗ್ರಹ ಉಂಟಾಗಿ ನಾಗದೋಷ ನಿವಾರಣೆಗೂ ಸಹ

ಪಂಚಮಿ ತಿತಿಯ ಬಗ್ಗೆ ನನಗೆ ತಿಳಿದಂತ ಕೆಲವು ವಿಷಯಗಳನ್ನು ಹಲವಾರು ಸಂಗ್ರಹಗಳಿಂದ ಸಂಗ್ರಹಿಸಿ ನಿಮ್ಮಲ್ಲಿ ಹಂಚಿಕೊಂಡಿದ್ದೇನೆ

ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು ಎಲ್ಲರಿಗೂ ಸಹ ಒಳ್ಳೆಯದಾಗಲಿ

ಧನ್ಯವಾದಗಳು
ಜ್ಯೋತಿಷ್ಯ ಆಚಾರ್ಯ ಮೇಘನ ವರ್ಷ
ಜ್ಯೋತಿಷ್ಯ ಸಲಹೆಗಾರರು ಉಪನ್ಯಾಸಕರು ಬರಹಗಾರರು
ಸ ಸಂಶೋಧಕರು