ನ್ಯೂಯಾರ್ಕ್: ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ಅಮೆರಿಕದ ನ್ಯೂಯಾರ್ಕ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಮೆರಿಕದಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ ಎಂದು ಮಾಹಿತಿ ತಿಳಿಸಿದೆ.
ಮೃತ ವಿದ್ಯಾರ್ಥಿಯನ್ನು ಶ್ರೀ ಬೆಲೆಂ ಅಚ್ಯುತ್ ಎಂದು ಗುರ್ತಿಸಲಾಗಿದ್ದು, ಆಂಧ್ರ ಪ್ರದೇಶ ಮೂಲದ ಆತ ನ್ಯೂಯಾರ್ಕ್‌ನ ಸ್ಟೇಟ್ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ.ನ್ಯೂಯಾರ್ಕ್‌ನಲ್ಲಿ ಇರುವ ಭಾರತೀಯ ವಿದೇಶಾಂಗ ಇಲಾಖೆ ಕಚೇರಿ ಅಚ್ಯುತ್ ಸಾವಿಗೆ ಸಂತಾಪ ಸೂಚಿಸಿದೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.
ಹಲವು ತಿಂಗಳುಗಳಿಂದ ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಹತ್ಯೆ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೇ ವರ್ಷ ಮಾರ್ಚ್‌ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದ.
ಹಿಂದೆ ಮೃತಪಟ್ಟಿದ್ದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಪ್ರಕರಣದ ಕುರಿತಾಗಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ ಸಂತಾಪ ಸೂಚಿಸಿತ್ತು. ಇಂದಿಗೂ ಕೂಡಾ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಅಮೆರಿಕ ಪೊಲೀಸರ ಜೊತೆ ಭಾರತೀಯ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ.
ಬಳಿಕ ಏಪ್ರಿಲ್ ವೇಳೆಗೆ ಆತ ಅಮೆರಿಕದ ಓಹಾಯೋ ರಾಜ್ಯದಲ್ಲಿ ಶವವಾಗಿ ಪತ್ತೆಯಾಗಿದ್ದ. ಇದೇ ರೀತಿಯಲ್ಲಿ ಹಲವು ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವು ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿವೆ. ಆದರೆ, ಇದೀಗ ಮೃತಪಟ್ಟಿರುವ ಅಚ್ಯುತ್ ಅವರ ಸಾವಿಗೆ ಅಪಘಾತವೇ ಕಾರಣ ಎಂದು ಅಮೆರಿಕ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣ ಸಂಬಂಧ ಅಚ್ಯುತ್ ಕುಟುಂಬಸ್ಥರಿಗೆ ಎಲ್ಲ ರೀತಿಯ ನೆರವನ್ನೂ ನೀಡೋದಾಗಿ ರಾಯಭಾರ ಕಚೇರಿ ಹೇಳಿದೆ. ಅಷ್ಟೇ ಅಲ್ಲ, ಮೃತ ವಿದ್ಯಾರ್ಥಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಅಗತ್ಯ ನೆರವು ನೀಡೋದಾಗಿ ಭರವಸೆ ನೀಡಿದೆ.