This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಜಿಲ್ಲಾ ಕಾನಿಪ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ನಿಮ್ಮ ಸುದ್ದಿ ಬಾಗಲಕೋಟೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟೆ ಜಿಲ್ಲಾ ಘಟಕಕ್ಕೆ ನೂತನವಾಗಿ  ಸದಸ್ಯತ್ವ ಬಯಸುವವರು ಹಾಗೂ ಸದಸ್ಯತ್ವ ನವೀಕರಣಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು ದಿ. ೨೨-೪-೨೦೨೨ ರೊಳಗಾಗಿ ಜಿಲ್ಲಾ ಘಟಕಕ್ಕೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ರಾಜ್ಯ ಸಂಘದ ಮಾರ್ಗಸೂಚಿಯಂತೆ ಸದಸ್ಯತ್ವವನ್ನು ಮಾಡಿಕೊಳ್ಳಲಾಗುತ್ತಿದ್ದು ಎಪ್ರೀಲ ೨೨ ರವರೆಗೆ ನಿತ್ಯ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಘದ ಜಿಲ್ಲಾಧ್ಯP ಆನಂದ ಧಲಬಂಜನ ಹಾಗೂ ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ಶಂಕರ ಎಸ್. ಕಲ್ಯಾಣಿ ಅವರು ಕೋರಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾರ್ಗಸೂಚಿಯಂತೆ ಜಿಲ್ಲೆಯ ವಿವಿಧ ತಾಲೂಕಾವಾರು ಸದಸ್ಯತ್ವ ಪಡೆಯುವ ಅರ್ಹ ಸದಸ್ಯರುಗಳು ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕಾ ಘಟಕದ ಅಧ್ಯPರು, ತಾಲೂಕಾ ಪ್ರಧಾನ ಕಾರ್‍ಯದರ್ಶಿಗಳಿಗೆ ಸಲ್ಲಿಸಬೇಕು, ಆ ಮೂಲಕ ತಾಲೂಕಾ ಘಟಕದವರು ಅರ್ಜಿಗಳನ್ನು ಸಂಗ್ರಹಿಸಿ ಜಿಲ್ಲಾ ಘಟಕಕ್ಕೆ ಸಲ್ಲಿಸಬೇಕು.

ಜಿಲ್ಲಾ ಕೇಂದ್ರವಾಗಿರುವ ಬಾಗಲಕೋಟೆ ನಗರ ಸೇರಿದಂತೆ ಬಾಗಲಕೋಟೆ ತಾಲೂಕಾ ಘಟಕದವರು ಅರ್ಹ ದಾಖಲಾತಿಗಳೊಂದಿಗೆ ಅರ್ಜಿಗಳನ್ನು ನವನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸಲ್ಲಿಸಬೇಕೆಂದು ಈ ಮೂಲಕ ಕೋರಲಾಗಿದೆ.

ಈ ಬಾರಿ ಸದಸ್ಯತ್ವ ನವೀಕರಣದ ಅರ್ಜಿ ಸಲ್ಲಿಸಲು ಕಾಲಾವಕಾಶ ಕಡಿಮೆ ಇದ್ದು, ದಿ. ೨೨ ರೊಳಗೆ ಅರ್ಜಿ ಸಲ್ಲಿಸಬೇಕು, ನಂತರ ಬಂದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವದಿಲ್ಲ ಎಂದು ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nimma Suddi
";