This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

International NewsLocal NewsNational NewsPolitics NewsState News

ಅರ್ನಬ್ ಗೋಸ್ವಾಮಿ ಸೇರಿ 14 ಟಿವಿ ನಿರೂಪಕರನ್ನು ಬಹಿಷ್ಕರಿಸಿದ ಐಎನ್‌ಡಿಐಎ ಮೈತ್ರಿಕೂಟ

ಅರ್ನಬ್ ಗೋಸ್ವಾಮಿ ಸೇರಿ 14 ಟಿವಿ ನಿರೂಪಕರನ್ನು ಬಹಿಷ್ಕರಿಸಿದ ಐಎನ್‌ಡಿಐಎ ಮೈತ್ರಿಕೂಟ

*ಅರ್ನಬ್ ಗೋಸ್ವಾಮಿ ಸೇರಿ 14 ಟಿವಿ ನಿರೂಪಕರನ್ನು ಬಹಿಷ್ಕರಿಸಿದ ಐಎನ್‌ಡಿಐಎ ಮೈತ್ರಿಕೂಟ*

ಅರ್ನಬ್ ಗೋಸ್ವಾಮಿ, ನವಿಕಾ ಕುಮಾರ್, ಸುಧೀರ್ ಚೌಧರಿ, ಅದಿತಿ ತ್ಯಾಗಿ ಸೇರಿದಂತೆ 14 ಮಂದಿ ಸುದ್ದಿ ನಿರೂಪಕರು ಹಾಗೂ ಅವರ ಟಿವಿ ಶೋಗಳನ್ನು ಬಹಿಷ್ಕರಿಸುವುದಾಗಿ ವಿರೋಧ ಪಕ್ಷಗಳ ಮೈತ್ರಿಕೂಟ ಐಎನ್‌ಡಿಐಎ ಪಟ್ಟಿ ಬಿಡುಗಡೆ ಮಾಡಿದೆ.

ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಶರದ್ ಪವಾರ್ ನಿವಾಸದಲ್ಲಿ ಐಎನ್‌ಡಿಐಎ ಮೈತ್ರಿಕೂಟದ ಸಮನ್ವಯ ಸಮಿತಿಯ ಸಭೆ
ಕೆಲವು ನಿರೂಪಕರು ಮತ್ತು ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳ ನಿರ್ಧಾರ
ಬಹಿಷ್ಕರಿಸುವ 14 ಟೆಲಿವಿಷನ್ ನಿರೂಪಕರ ಪಟ್ಟಿ ಬಿಡುಗಡೆ ಮಾಡಿದ ವಿರೋಧ ಪಕ್ಷಗಳ ಬಣ

ಮುಂಬರುವ ದಿನಗಳಲ್ಲಿ ಕೆಲವು ಸುದ್ದಿವಾಹಿನಿಗಳ ನಿರೂಪಕರ ಕಾರ್ಯಕ್ರಮ ಹಾಗೂ ಸಂವಾದಗಳನ್ನು ಬಹಿಷ್ಕರಿಸುವುದಾಗಿ ಬುಧವಾರ ಪ್ರಕಟಿಸಿದ್ದ ವಿರೋಧ ಪಕ್ಷಗಳ ಐಎನ್‌ಡಿಐಎ ಮೈತ್ರಿಕೂಟವು, ಯಾವ ಯಾವ ಸುದ್ದಿ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತೇವೆ ಎಂಬ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ.

ಐಎನ್‌ಡಿಐಎ ಮೈತ್ರಿಕೂಟವು ಅರ್ನಬ್ ಗೋಸ್ವಾಮಿ ಸೇರಿದಂತೆ ಒಟ್ಟು 14 ಸುದ್ದಿ ನಿರೂಪಕರ ಹೆಸರುಗಳನ್ನು ಪಟ್ಟಿ ಮಾಡಿದೆ. ಇವರೆಲ್ಲರೂ ಹಿಂದಿ ಹಾಗೂ ಇಂಗ್ಲಿಷ್ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರಲ್ಲಿ ಕೆಲವು ಮಹಿಳಾ ನಿರೂಪಕರೂ ಇದ್ದಾರೆ ಎನ್ನುವುದು ಗಮನಾರ್ಹ.

ಯಾವುದೇ ರಾಜ್ಯದ ಪ್ರಾದೇಶಿಕ ಸುದ್ದಿ ವಾಹಿನಿ ಕಾರ್ಯಕ್ರಮ ಅಥವಾ ನಿರೂಪಕರನ್ನು ಇದರಲ್ಲಿ ಹೆಸರಿಸಿಲ್ಲ.

ಕೆಲವು ಸುದ್ದಿ ನಿರೂಪಕರು, ಟಿವಿ ಶೋ ಬಹಿಷ್ಕಾರಕ್ಕೆ ಐಎನ್‌ಡಿಐಎ ಬಣ ನಿರ್ಧಾರ: ಶೀಘ್ರದಲ್ಲಿಯೇ ಪಟ್ಟಿ ಪ್ರಕಟ
ಬಿಜೆಪಿ ಪರ ಎಂದು ಗುರುತಿಸಿಕೊಂಡಿರುವ ಅಥವಾ ಪ್ರಚೋದನಾತ್ಮಕ ಮತ್ತು ಕೋಮು ಭಾವನೆ ಕೆರಳಿಸುವಂತೆ ಚರ್ಚಾ ಕಾರ್ಯಕ್ರಮ ನಡೆಸುವ ಆರೋಪದಡಿ ಈ ನಿರೂಪಕರನ್ನು ಬಹಿಷ್ಕರಿಸಲು ಐಎನ್‌ಡಿಐಎ ಬಣ ನಿರ್ಧರಿಸಿದೆ.

ನೈಜ ಸಮಸ್ಯೆಗಳ ಕುರಿತಾದ ಗಮನವನ್ನು ಬೇರೆಡೆ ತಿರುಗಿಸುವ ಕೆಲಸವನ್ನು ಈ ನಿರೂಪಕರು ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಈ ಹಿಂದೆ ಕೂಡ ಕಾಂಗ್ರೆಸ್ ಮಾಧ್ಯಮಗಳಿಂದ ದೂರ ಉಳಿಯುವ ನಿರ್ಧಾರ ಮಾಡಿತ್ತು. 2019ರ ಚುನಾವಣೆ ಸಂದರ್ಭದಲ್ಲಿ ಅದು ತನ್ನ ವಕ್ತಾರರನ್ನು ಸುದ್ದಿವಾಹಿನಿಗಳ ಚರ್ಚೆಗೆ ಕಳುಹಿಸುವುದಿಲ್ಲ ಎಂದು ಹೇಳಿತ್ತು.

ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ಐಎನ್‌ಡಿಐಎ ಕೂಟದ ವಿವಿಧ ಪಕ್ಷಗಳು ಈ ಪಟ್ಟಿಯನ್ನು ಹಂಚಿಕೊಂಡಿವೆ.

*ಐಎನ್‌ಡಿಐಎ ಗುರುತಿಸಿರುವ 14 ಮಂದಿ ನಿರೂಪಕರ ಪಟ್ಟಿ ಇಲ್ಲಿದೆ.*

ಅದಿತಿ ತ್ಯಾಗಿ
ಅಮನ್ ಚೋಪ್ರಾ
ಅಮೀಶ್ ದೇವಗನ್
ಆನಂದ್ ನರಸಿಂಹನ್
ಅರ್ನಬ್ ಗೋಸ್ವಾಮಿ
ಅಶೋಕ್ ಶ್ರೀವಾಸ್ತವ
ಚಿತ್ರ ತ್ರಿಪಾಠಿ
ಗೌರವ್ ಸಾವಂತ್
ನವಿಕಾ ಕುಮಾರ್
ಪ್ರಾಚಿ ಪರಾಶರ್
ರುಬಿಕಾ ಲಿಯಾಖತ್
ಶಿವ್ ಅರೂರ್
ಸುಧೀರ್ ಚೌಧುರಿ
ಸುಶಾಂತ್ ಸಿನ್ಹಾ

*ಸುಧೀರ್ ಚೌಧರಿ ಪ್ರತಿಕ್ರಿಯೆ*
ಆಜ್ ತಕ್ ವಾಹಿನಿ ಪತ್ರಕರ್ತ ಸುಧೀರ್ ಚೌಧರಿ ಅವರು ಐಎನ್‌ಡಿಐಎ ಬಣ ಬಿಡುಗಡೆ ಮಾಡಿರುವ ಬಹಿಷ್ಕಾರದ ಪಟ್ಟಿಗೆ ‘ಎಕ್ಸ್‌’ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

“ಅವರ ಬೂಟು ನೆಕ್ಕುವವರಾಗಲು ನಿರಾಕರಿಸಿದ್ದೆವು, ಹೀಗಾಗಿ ನಮ್ಮನ್ನು ಬಹಿಷ್ಕರಿಸಲಾಗುತ್ತಿದೆ. ಇದಕ್ಕೆ ಭಾರತೀಯ ಮಾಧ್ಯಮಗಳು ಯಾವ ಉತ್ತರ ನೀಡುತ್ತವೆ ಎನ್ನುವುದನ್ನು ನೋಡಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಸುಧೀರ್ ಚೌಧರಿ ವಿರುದ್ಧ ಬೆಂಗಳೂರು ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದರು. ಕರ್ನಾಟಕ ಸರ್ಕಾರವು ಮುಸ್ಲಿಮರು, ಕ್ರೈಸ್ತರು ಮತ್ತು ಇತರೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮಾತ್ರ ಹಣಕಾಸು ಸಹಾಯಧನ ನೀಡುತ್ತಿದೆ. ಇದರಿಂದ ಹಿಂದೂಗಳನ್ನು ಹೊರಗಿಡಲಾಗಿದೆ. ಈ ಯೋಜನೆಯು ‘ಅಲ್ಪಸಂಖ್ಯಾತರ ತುಷ್ಟೀಕರಣ’ ಮಾಡುತ್ತಿದೆ ಎಂದು ವರದಿ ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಾಯಕ ಆಡಳಿತ ಅಧಿಕಾರಿ ಶಿವಕುಮಾರ್ ಎಸ್ ದೂರು ನೀಡಿದ್ದರು.

Nimma Suddi
";