This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Education NewsLocal NewsNational NewsState News

ಬಡತನದ ಬೇಗೆಯಲ್ಲೂ ನಕ್ಷತ್ರದಂತೆ ಮಿಂಚಿದ ಅಶ್ವಿನಿ ಸಮಸ್ಯೆಗಳ ಮಧ್ಯೆಯೂ ಶೇ.97.76 ಫಲಿತಾಂಶ

<span class=ಬಡತನದ ಬೇಗೆಯಲ್ಲೂ ನಕ್ಷತ್ರದಂತೆ ಮಿಂಚಿದ ಅಶ್ವಿನಿ ಸಮಸ್ಯೆಗಳ ಮಧ್ಯೆಯೂ ಶೇ.97.76 ಫಲಿತಾಂಶ" title="ಬಡತನದ ಬೇಗೆಯಲ್ಲೂ ನಕ್ಷತ್ರದಂತೆ ಮಿಂಚಿದ ಅಶ್ವಿನಿ ಸಮಸ್ಯೆಗಳ ಮಧ್ಯೆಯೂ ಶೇ.97.76 ಫಲಿತಾಂಶ" decoding="async" srcset="https://nimmasuddi.com/whirtaxi/2024/05/FB_IMG_1715914959265.jpg?v=1715915360 614w, https://nimmasuddi.com/whirtaxi/2024/05/FB_IMG_1715914959265-225x300.jpg?v=1715915360 225w, https://nimmasuddi.com/whirtaxi/2024/05/FB_IMG_1715914959265-150x200.jpg?v=1715915360 150w" sizes="(max-width: 614px) 100vw, 614px" />

ವಿಜಯಪುರ

ಕಡು ಬಡತನದಲ್ಲೂ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ನೇಕಾರ ಪೇಟೆ ನಿವಾಸಿ, ದೇವಾಂಗ ಸಮಾಜದ ಅಶ್ವಿನಿ ಬಸವರಾಜ ರುದ್ರಗಂಟಿ ಕನ್ನಡ ಮಾಧ್ಯಮದಲ್ಲಿ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.97.76 ರಷ್ಟು ಅಂಕ ಪಡೆದುಕೊಂಡು ನಾಲತವಾಡ ಪಟ್ಟಣದ ಕೀರ್ತಿ ಹೆಚ್ಚಿಸಿದ್ದಾಳೆ.

ನೇಕಾರಿಕೆಯ ಕುಟುಂಬವಾಗಿರುವ ಅಶ್ವಿನಿ ಅವರ ಮನೆಯಲ್ಲಿ ಎರಡು ಕೈಮಗ್ಗಗಳಿವೆ. ಅದರಲ್ಲಿ ಒಂದು ಚಾಲನೆಯಲ್ಲಿದೆ. ಇನ್ನೊಂದು ಸಮರ್ಪಕ ನೂಲು, ಬೀಮ್ ಇಲ್ಲದೇ ಸ್ಥಗಿತಗೊಂಡಿದೆ. ತಂದೆ ತಾಯಿ ನೇಕಾರಿಕೆಯಿಂದ ಹೊಟ್ಟೆ ತುಂಬುವುದಿಲ್ಲ ಎಂದರಿತು ನಾರಾಯಣಪೂರ, ನಾಲತವಾಡ, ಮುದ್ದೇಬಿಹಾಳ, ಹಿರೇಮುರಾಳ ಪಟ್ಟಣ, ಗ್ರಾಮಗಳಿಗೆ ವಾರದ ಸಂತೆಗೆ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಾರೆ. ಅಂದಂದಿನ ದುಡಿಮೆ ಅಂದಿಗೆ ಉಪಜೀವನ ನಡೆಸಲು ಸಾಕಾಗುತ್ತಿದ್ದು ಅಶ್ವಿನಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ನಾಗರಬೆಟ್ಟದ ಎಸ್.ಡಿ.ಕೆ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸೇರಿಸಿದ್ದಾರೆ.

ಅಶ್ವಿನಿ ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಸಹೋದರಿಯರು, ಅಜ್ಜಿಯ ಜೊತೆಗೆ ಹೂವಿನ ಹಾರ ಕಟ್ಟುವ ಕೆಲಸ ಮಾಡಿ ಒಳ್ಳೆಯ ರೀತಿಯಲ್ಲಿ ಅಭ್ಯಾಸ ಮಾಡಿ ಇದೀಗ ಇಡೀ ನಾಲತವಾಡ ಪಟ್ಟಣವೇ ತಿರುಗಿ ನೋಡುವಂತಹ ಸಾಧನೆ ತೋರಿದ್ದಾಳೆ.

ಅಶ್ವಿನಿ ಎಸ್.ಎಸ್.ಎಲ್.ಸಿಯಲ್ಲಿ ಪಡೆದಿರುವ ಅಂಕಗಳ ವಿವರ ಇಂತಿದೆ. ಸಮಾಜ ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದು, ಕನ್ನಡ ಭಾಷೆಗೆ 125 ರಲ್ಲಿ 124 ಅಂಕ ಪಡೆದಿದ್ದಾಳೆ. ಇನ್ನುಳಿದಂತೆ ಇಂಗ್ಲಿಷ್ -95, ಹಿಂದಿ 99, ಗಣಿತ-98, ವಿಜ್ಞಾನ-95 ಅಂಕ ಗಳಿಸಿದ್ದಾಳೆ.

—-
ನನಗೆ ಆರನೇ ತರಗತಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ಶಿಕ್ಷಣವನ್ನು ಓದಲು ಬೆನ್ನೆಲುಬಾಗಿ ಪ್ರೋತ್ಸಾಹ ನೀಡಿದ್ದು ಎಸ್.ಡಿ.ಕೆ.ಶಾಲೆಯ ಮುಖ್ಯಸ್ಥರಾದ ಬಿ.ಜಿ.ಮಠ ಗುರುಗಳು.ತಂದೆ,ತಾಯಿ,ನನ್ನ ಮಾವನ ಪ್ರೋತ್ಸಾಹದಿಂದ ಈ ಮಟ್ಟದ ಸಾಧನೆ ಮಾಡಿದ್ದೇನೆ. ಕಠಿಣ ಪರಿಶ್ರಮದಿಂದ ಓದಿದರೆ ಎಂತಹ ಪರೀಕ್ಷೆಯನ್ನು ಗೆಲ್ಲಬಹುದು. ಅನುತ್ತೀರ್ಣಗೊಂಡವರು ನಿರಾಸೆಯಾಗದೇ ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕು. ಹಲವಾರು ಜನರು ಒಮ್ಮೆ ಸೋತಿದ್ದರೂ ಮುಂದೆ ಐಎಎಸ್, ಐಪಿಎಸ್ ಮಾಡಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.ಬಡತನ ಓದಿಗೆ ಅಡ್ಡಿಯಾಗುವುದಿಲ್ಲ.ನನಗೆ ಮೆಡಿಕಲ್ ಓದಿ ವೈದ್ಯಳಾಗಬೇಕು ಎಂಬ ಆಸೆ ಇದೆ.
ಅಶ್ವಿನಿ ರುದ್ರಗಂಟಿ,ಎಸ್.ಎಸ್.ಎಲ್.ಸಿ ಟಾಪರ್

ಬಾಲ್ಯದಿಂದಲೂ ಅಶ್ವಿನಿ ಓದಿನಲ್ಲಿ ಚುರುಕಾಗಿದ್ದಳು. ರುದ್ರಗಂಟಿಯವರದ್ದು ಒಳ್ಳೆಯ ಸಂಸ್ಕಾರವಂತ ಕುಟುಂಬ. ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿ ಇಂದು ನಾಲತವಾಡ ಪಟ್ಟಣಕ್ಕೆ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಹೆಮ್ಮೆ ಇದೆ. ಆಕೆಯ ಭವಿಷ್ಯದ ಕನಸಿಗೂ ನಮ್ಮಿಂದಾದ ಸಹಾಯ ಮಾಡಲು ಸಿದ್ದರಿದ್ದೇವೆ.
-ಎಂ.ಎಸ್.ಗಡೇದ,ಮುಖ್ಯಶಿಕ್ಷಕರು,ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ,ದೇಶಮುಖರ ಓಣಿ
—-
ನಾನು ಓದಿದ್ದು 7ನೇ ತರಗತಿ. ದಿನದ ದುಡಿಮೆ ನಂಬಿ ಉಪಜೀವನ ಸಾಗಿಸುವ ಕುಟುಂಬ ನಮ್ಮದು.ಮಗಳ ಸಾಧನೆ ಖುಷಿ ತರಿಸಿದೆ.ಎಸ್.ಡಿ.ಕೆ ಪ್ರೌಢಶಾಲೆಯ ಅಧ್ಯಕ್ಷರಾದ ಬಿ.ಜಿ.ಮಠ,ಮುಖ್ಯಶಿಕ್ಷಕರಾದ ಹೀರೂ ನಾಯಕ ಅವರ ಸಹಕಾರದಿಂದ ಮಗಳು ಇಷ್ಟೊಂದು ಎತ್ತರದ ಸಾಧನೆ ಮಾಡಿದ್ದಾಳೆ. ಆಕೆಯೆ ಮೆಡಿಕಲ್ ಕನಸನ್ನು ನನಸು ಮಾಡುವುದಕ್ಕೆ ಕಷ್ಟಪಟ್ಟು ಓದಿಸುತ್ತೇವೆ.
ಗೋದಾವರಿ ಬಸವರಾಜ ರುದ್ರಗಂಟಿ,ವಿದ್ಯಾರ್ಥಿನಿ ತಾಯಿ