This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Feature ArticleInternational NewsLocal NewsNational NewsPolitics NewsState News

7 ಬಾರಿ ಸಂಸದರಾಗಿದ್ದ ಬಿ.ಶಂಕರಾನಂದ ಇವ್ರ ಹೆಸ್ರಲ್ಲಿದೆ ದಾಖಲೆ, ಯಾವ ಕ್ಷೇತ್ರದಿಂದ ಗೆದ್ದಿದ್ದರು ಗೊತ್ತಾ?

ಬೆಂಗಳೂರು: ಬಿ.ಶಂಕರಾನಂದ (B.Shankaranand) ಅವರು (Parliament Flashback) ಚಿಕ್ಕೋಡಿ ಮೀಸಲು ಲೋಕಸಭೆ (Lok Sabha Election) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇವರ ಪೂರ್ಣ ಹೆಸರು ಬಾಬುರಾವ್‌ ಶಂಕರಾನಂದ. ಕರ್ನಾಟಕದಲ್ಲಿ ಅತಿ ಹೆಚ್ಚು, 7 ಬಾರಿ ನಿರಂತರವಾಗಿ ಲೋಕಸಭೆಯಲ್ಲಿ ಗೆದ್ದ ದಾಖಲೆ ಬಿ.ಶಂಕರಾನಂದ ಅವರ ಹೆಸರಿನಲ್ಲಿದೆ. ಅವರಷ್ಟು ಸಲ ಗೆದ್ದು ಲೋಕಸಭೆಗೆ ಹೋದ ಮತ್ತೊಬ್ಬ ನಾಯಕ ಕರ್ನಾಟಕದಲ್ಲಿ ಇಲ್ಲ. ಅದರ ಸಂಪೂರ್ಣ ಮಾಹಿತಿ ನಿಮಗಾಗಿ ನೀಡಿದ್ದೇವೆ.

ಶಂಕರಾನಂದ ಅವರು ಚಿಕ್ಕೋಡಿ ಮೀಸಲು ಲೋಕಸಭೆ ಕ್ಷೇತ್ರದಿಂದ 1967ರಿಂದ 1996ರವರೆಗೆ ನಿರಂತರವಾಗಿ 7 ಬಾರಿ ಆಯ್ಕೆಯಾಗಿದ್ದರು. 35 ವರ್ಷ ನಿರಂತರವಾಗಿ ಇವರು ಸಂಸದರಾಗಿ ಕಾರ್ಯಭಾರ ಮಾಡಿದ್ದರು.

ಮೂರೂವರೆ ದಶಕಗಳ ಕಾಲ ಇವರಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸವಾಲೊಡ್ಡುವವರೇ ಇರಲಿಲ್ಲ.
ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಮತ್ತು ಪಿ.ವಿ.ನರಸಿಂಹ ರಾವ್‌ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಬಿ. ಶಂಕರಾನಂದ ಅವರು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಮೊಟ್ಟ ಮೊದಲ ಜಂಟಿ ಸಂಸದೀಯ ಮಂಡಳಿ ಮುಖ್ಯಸ್ಥರಾಗಿ ನೇಮಕವಾಗಿದ್ದು ಇವರ ಮತ್ತೊಂದು ಹೆಗ್ಗಳಿಕೆ. ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಬೋಫೋರ್ಸ್‌ ಹಗರಣ ಭಾರಿ ಸುದ್ದಿ ಮಾಡಿತ್ತು. ಈ ಹಗರಣದ ಆಪಾದನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದರ ತನಿಖೆಗಾಗಿ ಜಂಟಿ ಸಂಸದೀಯ ಮಂಡಳಿಯನ್ನು ರಚಿಸಿತ್ತು.

ಯಾವ ಯಾವ ಖಾತೆ ನಿರ್ವಹಿಸಿದ್ದರು?

ಸಂಸದೀಯ ವ್ಯವಹಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ನೀರಾವರಿ ಮತ್ತು ವಿದ್ಯುತ್‌, ಜಲ ಸಂಪನ್ಮೂಲ, ಕಾನೂನು ಮತ್ತು ನ್ಯಾಯ, ಪೆಟ್ರೊಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಗಳನ್ನು ಬಿ.ಶಂಕರಾನಂದ ಅವರು ನಿಭಾಯಿಸಿದ್ದರು.

19 ಅಕ್ಟೋಬರ್‌ 1925ರಂದು ಜನಿಸಿದ್ದ ಬಿ.ಶಂಕರಾನಂದ ಅವರು, 2009ರ ನವೆಂಬರ್‌ 20ರಂದು ನಿಧನ ಹೊಂದಿದರು. ಕಮಲಾದೇವಿ ಇವರ ಪತ್ನಿ. ಇವರಿಗೆ ಒಬ್ಬ ಪುತ್ರ ಮತ್ತು ಆರು ಮಂದಿ ಪುತ್ರಿಯರು. ಇವರ ಪುತ್ರ ಓಂ ಪ್ರಕಾಶ್‌ ಕಣಗಲಿ ಕರ್ನಾಟಕ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದರು. 1966ರ ಚುನಾವಣೆಯಲ್ಲಿ ಅವರು ಜನತಾ ದಳ ಅಭ್ಯರ್ಥಿ ರತ್ನಮಾಲಾ ಸವಣೂರು ಅವರ ಎದುರು ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡರು. ಆ ಬಳಿಕ ರಾಜಕೀಯದಿಂದ ತೆರೆಮರೆಗೆ ಸರಿದರು.

ಲೋಕಸಭೆ ಚುನಾವಣೆಯಲ್ಲಿ ನಿರಂತರವಾಗಿ 7 ಬಾರಿ ಗೆದ್ದಿರುವುದು ನಮ್ಮ ರಾಜ್ಯದ ಮಟ್ಟಿಗೆ ಇಂದಿಗೂ ದಾಖಲೆಯಾಗಿ ಉಳಿದಿದೆ. ಈ ಕ್ಷೇತ್ರ 2009ರ ಚುನಾವಣೆವರೆಗೆ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರಿಸಿರುವ ಕ್ಷೇತ್ರವಾಗಿತ್ತು. ಆ ಬಳಿಕ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತವಾಯಿತು.

ಬಿ.ಶಂಕರಾನಂದ ಗೆಲುವಿನ ಹಾದಿ ಹೀಗಿತ್ತು

1967ರ ಲೋಕಸಭೆ ಚುನಾವಣೆ
ಬಿ.ಶಂಕರಾನಂದ (ಕಾಂಗ್ರೆಸ್‌): 1,92,986 ಮತ
ನಾನಾ ಸಾಬ್‌ (ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ): 91,444 ಮತ

1971ರ ಲೋಕಸಭೆ ಚುನಾವಣೆ
ಬಿ.ಶಂಕರಾನಂದ (ಕಾಂಗ್ರೆಸ್‌): 1,77,967 ಮತ
ಕರಾಲೆ ಲಕ್ಷ್ಮಣ ಭೀಮ (ಕಾಂಗ್ರೆಸ್‌ ಒ): 80,224 ಮತ

1977ರ ಲೋಕಸಭೆ ಚುನಾವಣೆ
ಬಿ.ಶಂಕರಾನಂದ (ಕಾಂಗ್ರೆಸ್‌): 1,73,166 ಮತ
ಕರಾಲೆ ಲಕ್ಷ್ಮಣ ಭೀಮ (ಭಾರತೀಯ ಲೋಕ ದಳ): 1,27,666 ಮತ

1980ರ ಲೋಕಸಭೆ ಚುನಾವಣೆ
ಬಿ.ಶಂಕರಾನಂದ (ಕಾಂಗ್ರೆಸ್‌): 2,12,092 ಮತ
ದಿನಕರ ದೇವೇಂದ್ರ ಕಾಂಬಳೆ (ಕಾಂಗ್ರೆಸ್‌ ಯು): 66,008 ಮತ

1984ರ ಲೋಕಸಭೆ ಚುನಾವಣೆ
ಬಿ.ಶಂಕರಾನಂದ (ಕಾಂಗ್ರೆಸ್‌): 2,28,030 ಮತ
ಅಣ್ಣಪ್ಪ ರಾಯಣ್ಣವರ (ಜನತಾ ಪಕ್ಷ): 22,4385 ಮತ

1989ರ ಲೋಕಸಭೆ ಚುನಾವಣೆ
ಬಿ.ಶಂಕರಾನಂದ (ಕಾಂಗ್ರೆಸ್‌): 2,74,975 ಮತ
ಅವಿನಾಶ್‌ ಕತ್ತಿ (ರಿಪಬ್ಲಿಕ್ ಪಾರ್ಟಿ ಆಫ್‌ ಇಂಡಿಯಾ): 2,137,11 ಮತ

1991ರ ಲೋಕಸಭೆ ಚುನಾವಣೆ
ಬಿ.ಶಂಕರಾನಂದ (ಕಾಂಗ್ರೆಸ್‌): 2,61,884 ಮತ
ಎ.ಕೆ.ರಾಯಣ್ಣವರ (ಜನತಾ ದಳ): 1,49,268 ಮತ