This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Crime NewsLocal NewsState News

ಬಾಗಲಕೋಟೆ, ಅಂತರ್ ಧರ್ಮೀಯ ವಿವಾಹ: ಧರಣಿನಿರತರ ಮೇಲೆ ಕಲ್ಲು ತೂರಾಟ

ಬಾಗಲಕೋಟೆ, ಅಂತರ್ ಧರ್ಮೀಯ ವಿವಾಹ: ಧರಣಿನಿರತರ ಮೇಲೆ ಕಲ್ಲು ತೂರಾಟ

ಬಾಗಲಕೋಟೆ: ಅಂತರ್ ಧರ್ಮೀಯ ವಿವಾಹಕ್ಕೆ ಸಂಬ೦ಸಿದ೦ತೆ ಪೊಲೀಸ್ ಠಾಣೆಗೆ ತೆರಳಿದಾಗ ಅಕಾರಿಗಳು ಏಕಪಕ್ಷೀಯವಾಗಿ ವರ್ತಿಸಿದರು ಎಂದು ಆರೋಪಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ನಗರಸಭೆ ಎದುರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಧರಣಿನಿರತರ ಮೇಲೆ ಕಲ್ಲು ತೂರಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿ ಸಂಘಟನೆ ಮುಖಂಡರಾದ ವಿಕ್ರಂ ದೇಶಪಾಂಡೆ, ಮನೋಜ ಕರೋಡಿವಾಲ್, ಕುಮಾರಸ್ವಾಮಿ ಹಿರೇಮಠರನ್ನು ಬಂಸಿದರು.

ನಗರದಲ್ಲಿ ಬುಧವಾರ ರಾತ್ರಿ ಹಿಂದು ಜಾಗರಣ ವೇದಿಕೆಯಿಂದ ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ.

ನಗರಸಭೆ ಎದುರು ರಸ್ತೆ ತಡೆ ನಡೆಸಿ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿದರು. ಆಗ ಏಕಾಏಕಿ ನಗರಸಭೆ ಕಡೆಯಿಂದ ಕಲ್ಲು ತೂರಿಬಂದವು. ಸ್ಥಳದಲ್ಲಿದ್ದ ಕಾರ್ಯಕರ್ತರು ಕಲ್ಲು ತೂರುವವರನ್ನು ಹುಡುಕಿಕೊಂಡು ಹೋಗಿ ಒಬ್ಬನನ್ನು ಹಿಡಿದರು. ಆಗ ಪೊಲೀಸರು, ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು.

ಎಸ್‌ಪಿ ಅಮರನಾಥ ರೆಡ್ಡಿ ವಿಕ್ರಂ ದೇಶಪಾಂಡೆ ಅವರನ್ನು ಕರೆದೊಯ್ದರು. ಧರಣಿ ನಡೆಸುತ್ತಿದ್ದ ಮನೋಜ ಹಾಗೂ ಕುಮಾರಸ್ವಾಮಿ ಅವರನ್ನು ಪೊಲೀಸರು ಬಂಸಿದರು.

ಈ ಸಂದರ್ಭದಲ್ಲಿ ಮತ್ತೆ ಕಲ್ಲು ತೂರಾಟ ನಡೆದಾಗ ಪೊಲೀಸರು ಜನರನ್ನು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಆದರೆ ಕಲ್ಲು ತೂರಿದವರು ಪರಾರಿಯಾದರು. ಗಲಾಟೆ ನಡೆದಾಗ ಛಾಯಾಗ್ರಾಹಕರೊಬ್ಬರ ಮೊಬೈಲ್ ಒಡೆದು ಹಾಕಲಾಯಿತು.

ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಆಗ ಕೆಲ ಪೊಲೀಸರು ಸ್ಥಳದಲ್ಲಿದ್ದ ಬೈಕ್‌ಗಳನ್ನು ಜಖಂಗೊಳಿಸಿದರು. ಸ್ಥಿತಿ ಉದ್ರಿಕ್ತವಾಗುತ್ತಿದ್ದಂತೆ ಮೀಸಲು ಪೊಲೀಸ್ ಪಡೆ ಕರೆಸಲಾಯಿತು. ಎಎಸ್‌ಪಿ ಮಹಾಂತೇಶ ಜಿದ್ದಿö, ಡಿಎಸ್‌ಪಿ ಪ್ರಭು ಪಾಟೀಲ, ಸಿಪಿಐ ಐ.ಎಸ್.ಬಿರಾದಾರ ಸ್ಥಿತಿ ನಿಯಂತ್ರಿಸಿದರು.

ಎಸ್‌ಪಿ ಅಮರನಾಥ ರೆಡ್ಡಿ ಬಿಜೆಪಿ ಮುಖಂಡರೊAದಿಗೆ ಮಾತುಕತೆ ನಡೆಸಿದರು. “ಏಕಪಕ್ಷೀಯವಾಗಿ ಅಕಾರಿಗಳು ವರ್ತಿಸಿದ್ದರೆ ಕ್ರಮ ಕೈಗೊಳ್ಳುತ್ತೇವೆ. ನನ್ನನ್ನು ಬಂದು ಭೇಟಿಯಾಗುವ ಬದಲು ಏಕಾಏಕಿ ಧರಣಿ ನಡೆಸಿದ್ದು ಸ್ಥಿತಿ ಕೈಮೀರಲು ಕಾರಣವಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಮುಂಜಾಗೃತೆ ಕ್ರಮವಾಗಿ ಮುಖಂಡರನ್ನು ಬಂಸಲಾಗಿದೆ” ಎಂದು ಎಸ್‌ಪಿ ವಿವರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ವೀರಣ್ಣ ಚರಂತಿಮಠ “ಅಕಾರಿ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ. ಎಸ್‌ಪಿ ಅವರೊಂದಿಗೆ ಮಾತನಾಡಿದ್ದೇನೆ. ಕ್ರಮ ಕೈಗೊಳ್ಳಲಿ” ಎಂದು ಹೇಳಿದರು. ಬಸವರಾಜ ಯಂಕAಚಿ, ಗಿರೀಶ ಬಾಂಢಗೆ ಸೇರಿದಂತೆ ಮುಖಂಡರು ಇದ್ದರು.